RNI NO. KARKAN/2006/27779|Thursday, December 12, 2024
You are here: Home » breaking news » ಘಟಪ್ರಭಾ:ಶ್ರದ್ಧಾ ಭಕ್ತಿಯಿಂದ ಪ್ರವಾದಿ ಮಹಮದ್ ಪೈಗಂಬರ ಜನ್ಮದಿನ ಆಚರಣೆ

ಘಟಪ್ರಭಾ:ಶ್ರದ್ಧಾ ಭಕ್ತಿಯಿಂದ ಪ್ರವಾದಿ ಮಹಮದ್ ಪೈಗಂಬರ ಜನ್ಮದಿನ ಆಚರಣೆ 

ಶ್ರದ್ಧಾ ಭಕ್ತಿಯಿಂದ ಪ್ರವಾದಿ ಮಹಮದ್ ಪೈಗಂಬರ ಜನ್ಮದಿನ ಆಚರಣೆ

ಘಟಪ್ರಭಾ ನ 22 : ಇಲ್ಲಿಯ ಅಹಲೆ ಸುನ್ನತವಲ್ ಜಮಾತದ ವತಿಯಿಂದ ಪ್ರವಾದಿ ಮಹಮದ್ ಪೈಗಂಬರ ಜನ್ಮದಿನ (ಈದೇ ಮೀಲಾದ) ಹಬ್ಬದ ಪ್ರಯುಕ್ತ ಗ್ರಾಮದಲ್ಲಿ ವಿವಿಧ ರೂಪಕಗಳ ಭವ್ಯ ಮೆರವಣಿಗೆ ಬುಧವಾರ ಸಂಜೆ ಶ್ರದ್ಧಾ ಭಕ್ತಿಯಿಂದ ಜರುಗಿತು.
ಸಂಜೆ 4 ಗಂಟೆಗೆ ಸುನ್ನಿ ಜಾಮಿಯಾ ಮಸೀದಿಯಿಂದ ಪ್ರಾರಂಭಗೊಂಡ ಮೆರವಣಿಗೆಯು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಪ್ರವಾದಿ ಮಹ್ಮದ ಪೈಗಂಬರರ ಕುರಿತಾದ ಹಾಡುಗಳು (ನಾತ್) ಹಾಗೂ ಜೈ ಘೋಷಗಳನ್ನು ಕೂಗುತ್ತಾ ವಾಹನಗಳಿಗೆ ಮಕ್ಕಾ ಮದೀನಾ ಮಾದರಿ ಅಲಂಕೃತ ರೂಪಕದ ದೃಶ್ಯ ಜನರನ್ನು ಆಕರ್ಷಿಸಿತು. ಮನೆ, ಅಂಗಡಿ, ಓಣಿಗಳು ದೀಪ ಅಲಂಕಾರದಿಂದ ಶೃಂಗಾರಗೊಂಡಿದ್ದವು. ಮೆರವಣಿಗೆಯಲ್ಲಿ ಭಾಗವಹಿಸಿದ ಜನರಿಗೆ ತಂಪು ಪಾನಿಯ ಶರ್ಬತ್ ಹಾಗೂ ಸಹಿ ಹಂಚಲಾಯಿತು. ನಂತರ ಜಾಮಿಯಾ ಮಸೀದಿಗೆ ತಲುಪಿ ಪ್ರಾರ್ಥನೆಯೊಂದಿಗೆ ಮೆರವಣಿಗೆ ಸಮಾರೋಪಗೊಂಡಿತು.
ಈ ಸಂದರ್ಭದಲ್ಲಿ ಸ್ಥಳೀಯ ಗುಬ್ಬಲಗುಡ್ಡ ಕೆಂಪಯ್ಯಾಸ್ವಾಮಿ ಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು, ಹಿರಿಯರಾದ ರಾಮಣ್ಣಾ ಹುಕ್ಕೇರಿ, ಸುರೇಶ ಪಾಟೀಲ, ಸುಧೀರ ಜೋಡಟ್ಟಿ, ಅಹಲೆ ಸುನ್ನತ್ ಜಮಾತದ ಹಿರಿಯರಾದ ಸುಲ್ತಾನಸಾಬ ಕಬ್ಬೂರ, ನೂರ ಪೀರಜಾದೆ, ಪ.ಪಂ ಸದಸ್ಯರಾದ ಮಲ್ಲು ಕೋಳಿ, ಸಲೀಮ ಕಬ್ಬೂರ, ಇಮ್ರಾನ ಬಟಕುರ್ಕಿ, ಸುರೇಶ ಪೂಜಾರಿ, ಅಹ್ಮದಹುಸೇನ ಬಾಗವಾನ, ಗೌಸ ಬಾಗವಾನ, ಮೌಲಾಲಿ ಬಾಗವಾನ, ಇಮಾಮಹುಸೇನ ಮುಲ್ಲಾ, ಫಾರುಕ್ ಅತ್ತಾರ, ಜಹಾಂಗೀರ ಬಾಗವಾನ, ದಿಲಾವರ ಬಾಳೇಕುಂದ್ರಿ, ಅಪ್ಪಾಸಾಬ ಮುಲ್ಲಾ, ರಹೀಮಖಾನ ಪಠಾಣ, ದೌಲತ ದೇಸಾಯಿ, ಮೆಹಬೂಬ ಸಯ್ಯದ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಜನರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

Related posts: