ಗೋಕಾಕ:ಶಿಕ್ಷಣ ಇಲಾಖೆಗಳಿಗೆ ಸುತ್ತೂಲೆ ಹೊರಡಿಸಿದ ಕ್ರಮ ಶ್ಲಾಘನೀಯವಾಗಿದೆ : ಎಮ್.ಐ.ನೀಲಣ್ಣವರ
ಶಿಕ್ಷಣ ಇಲಾಖೆಗಳಿಗೆ ಸುತ್ತೂಲೆ ಹೊರಡಿಸಿದ ಕ್ರಮ ಶ್ಲಾಘನೀಯವಾಗಿದೆ : ಎಮ್.ಐ.ನೀಲಣ್ಣವರ
ಬೆಟಗೇರಿ ನ 24 : ಶಾಲಾ ಬ್ಯಾಗ್ ತೂಕ ಮತ್ತು ವಿದ್ಯಾರ್ಥಿಗಳಿಗೆ ಹೊಂ ವರ್ಕ್ ಕೂಡುವ ಕುರಿತು ಹಲವು ಇತಿ-ಮಿತಿಗಳನ್ನು ವಿಧಿಸಿ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ನಿರ್ದೇಶನಗಳ ಪಾಲನೆಗೆ ಎಲ್ಲ ರಾಜ್ಯಗಳ ಶಿಕ್ಷಣ ಇಲಾಖೆಗಳಿಗೆ ಸುತ್ತೂಲೆ ಹೊರಡಿಸಿದ ಕ್ರಮ ಶ್ಲಾಘನೀಯವಾಗಿದೆ ಎಂದು ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಶಿಕ್ಷಣಪ್ರೇಮಿ, ನ್ಯಾಯವಾದಿ ಎಮ್.ಐ.ನೀಲಣ್ಣವರ ತಿಳಿಸಿದ್ದಾರೆ.
ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ನಿರ್ದೇಶನಗಳ ಪಾಲನೆಗೆ ಎಲ್ಲ ರಾಜ್ಯಗಳ ಶಿಕ್ಷಣ ಇಲಾಖೆಗಳಿಗೆ ಸುತ್ತೂಲೆ ಹೊರಡಿಸಿದ ಹಿನ್ನಲೆಯಲ್ಲಿ ರಾಜ್ಯದ ಖಾಸಗಿ ಸುದ್ಧಿ ವಾಹಿನಿಯೊಂದರಲ್ಲಿ ಶನಿವಾರ ನ.24 ರಂದು ಪ್ರಕಟಗೊಂಡ ವರದಿಗೆ ಪತ್ರಿಕಾ ಹೇಳಿಕೆ ನೀಡಿದ ಅವರು, ಭಾರದ ಶಾಲಾ ಬ್ಯಾಗ್ ಹೊತ್ತುಕೊಂಡು ಹೋಗುವ ವಿದ್ಯಾರ್ಥಿಗಳಿಗೆ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಒಳ್ಳೆಯ ಸಿಹಿ ಸುದ್ಧಿಯನ್ನು ನೀಡಿದೆ ಎಂದರು.
1 ರಿಂದ 2 ನೇ ತರಗತಿ ತನಕ 1.5ಕೆಜಿ ತೂಕ, 3 ರಿಂದ 4 ನೇ ತರಗತಿ ತನಕ 2 ರಿಂದ 3 ಕೆಜಿ, 6 ರಿಂದ 7 ನೇ ತರಗತಿ ವರೆಗೆ 4 ಕೆಜಿ, 8 ರಿಂದ 9 ನೇ ತರಗತಿ ತನಕ 4.5 ಕೆಜಿ, 10 ನೇ ತರಗತಿ ವಿದ್ಯಾರ್ಥಿಗಳಿಗೆ 5 ಕೆಜಿ ತೂಕದ ಬ್ಯಾಗ್ ಹೊತ್ತು ತರುವ ಕ್ರಮವನ್ನು ನಿರ್ದೇಶನ ಮಾಡಿದೆ. ಅಲ್ಲದೇ 1 ಮತ್ತು 2ನೇ ತರಗತಿ ಮಕ್ಕಳಿಗೆ ಶಿಕ್ಷಕರು ಹೊಂ ವರ್ಕ್ ಕೂಡುವಂತಿಲ್ಲ, ಮನೆಗೆಲಸ ಕೂಟ್ಟರೂ ಸಹ ಭಾಷೆ, ಗಣಿತ ವಿಷಯಗಳನ್ನಷ್ಟೇ ಕೂಡಬೇಕು, ಶಾಲಾ ಪರಿಕರಗಳನ್ನು ತರುವಂತಿಯೂ ವಿದ್ಯಾರ್ಥಿಗಳಿಗೆ ಬಲವಂತ ಮಾಡಬಾರದು ಅಂತಾ ಎಲ್ಲ ರಾಜ್ಯಗಳೂ ಈ ನಿರ್ದೇಶನಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ತಾಕೀತು ಮಾಡಲಾದ ಈ ಸಿಹಿ ಸುದ್ಧಿ ರಾಜ್ಯದ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗೆ ಸಂತಸ ತಂದಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.