ಮೂಡಲಗಿ:ಸತ್ಯಸಾಯಿ ಬಾಬಾರವರ 93 ನೇ ಹುಟ್ಟು ಹಬ್ಬ ಆಚರಣೆ
ಸತ್ಯಸಾಯಿ ಬಾಬಾರವರ 93 ನೇ ಹುಟ್ಟು ಹಬ್ಬ ಆಚರಣೆ
ಮೂಡಲಗಿ ನ 24 : ಕಲ್ಲೋಳಿ ಪಟ್ಟಣದ ಸಾಯಿ ಸಮೀತಿ ಪ್ರಶಾಂತ ಕುಟೀರದ ಸಭಾ ಭವನದಲ್ಲಿ ಸತ್ಯಸಾಯಿ ಬಾಬಾರವರ 93 ನೇ ಹುಟ್ಟು ಹಬ್ಬವನ್ನು ಕೇಕ ಕತ್ತರಿಸುವ ಮೂಲಕ ಬಾಲವಿಕಾಸ ಮಕ್ಕಳು ಚಾಲನೆ ನೀಡಿದರು.
ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಸ್ವಾಮಿ ಬಾಬಾರವರ ಆಂದ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿ 1926 ರ ನ-23 ಈಶ್ವರಮ್ಮ, ಪೆದ್ದ ವೆಂಕಪರಾಜು ದಂಪತಿಗಳ ಉದರದಲ್ಲಿ ಜನಿಸಿದ ಸತ್ಯಸಾಯಿ ಬಾಬಾ ಅವರು ಆರೋಗ್ಯ, ಶಿಕ್ಷಣ, ನೀರಾವರಿ ಸೇರಿದಂತೆ ಅನೇಕ ಮಹತ್ವದ ಕಾರ್ಯಗಳನ್ನು ಮಾಡಿದ್ದಾರೆ ಯಾವ ಸರ್ಕಾರಗಳು ಮಾಡದಂತಹ ಕಾರ್ಯಗಳನ್ನು ಸ್ವಾಮಿ ಮಾಡಿದ್ದಾರೆ.
ಅಂದಿನ ರಾಷ್ಟ್ರಪತಿ ಅಬ್ದುಲ್ ಕಲಾಂ, ಪ್ರಧಾನ ಮಂತ್ರಿಗಳಾದ ಅಟಲ್ ಬಿಹಾರಿ ವಾಜಪೇಯಿ ಮತ್ತು ಪಿ.ವಿ.ನರಸಿಂಹರಾವ ಸೇರಿ ಅನೇಕ ಘಟಾನುಘಟಿ ನಾಯಕರು ಪುಟಪುರ್ತಇಗೆ ಭೇಟ್ಟಿ ನೀಡಿ ಬಾಬಾರವರ ಕಾರ್ಯವನ್ನು ಪ್ರಶಂಸಿಸಿದ್ದಾರೆಂದು ಸೇವಾ ಸಮೀತಿ ಲೋಹಿತ ಕಲಾಲ ಉಪನ್ಯಾಸ ನೀಡುತ್ತಿದ್ದ ಸಂದರ್ಭದಲ್ಲಿ ಹೇಳಿದರು.
ವೇಧ ಘೋಷದೊಂದಿಗೆ ಕಾರ್ಯಕ್ರಮ ಪ್ರಾಂರಭವಾಯಿತು ಬೆಳಗಿನ ಜಾವ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಯುವಕರು, ಮಹಿಳೆಯರು, ಹಿರಿಯರು ನಗರ ಸಂಕೀರ್ತನೆ ನಡೆಸಿ ಮಂದಿರದಲ್ಲಿ ಹಿರಿಯರಾದ ಸಮೀತಿ ಸಂಚಾಲಕ ಸಿ.ಪಿ.ಪಟ್ಟಣಶೇಟ್ಟಿ ಅವರು ಸರ್ವ ಧರ್ಮದ ಧ್ವಜಾರೋಹಣವನ್ನು ನೇರವೇರಿಸಿದರು. ಮಹಿಳೆಯರಿಂದ ತೋಟ್ಟಿಲೋತ್ಸವ ಭಜನೆ, ಬಾಲವಿಕಾಸ ಮಕ್ಕಳ ಬಾಷಣಗಳು ಬಾಬಾರವರ ಕನ್ನಡದಲ್ಲಿ ಮಾಡಿರುವ ಬಾಷಣ ವಿಡಿಯೋ ತೋರಿಸಿದರು.
ವಿಶೇಷವಾಗಿ ಬಾಬಾರವರ ಹುಟ್ಟು ಹಬ್ಬದ ದಿನವಾದ ನ-23 ರಂದು ಜನನವಾದ ಪಟ್ಟಣದ ಕಿರಾಣಿ ವ್ಯಾಪಾರಸ್ಥ ಶ್ರೀಶೈಲ ತುಪ್ಪದ ಅವರ ಮೊಮ್ಮಗ ಸಾಯಿಪ್ರೇಮ ಸೇರಿದಂತೆ ಅನೇಕ ಮಕ್ಕಳ ಹುಟ್ಟು ಹಬ್ಬವನ್ನು ಆಚರಿಸಲಾಯಿತು. ಬಾಬಾರವರಿಗೆ ಪ್ರೀಯವಾದ ಪುಳಿಯೋಗರೆ, ಸಿಹಿ ವಿತರಿಸಲಾಯಿತು.
ಸೇವಾ ಸಮೀತಿಯ ದತ್ತಾತ್ರೇಯ ಕಲಾಲ, ಬಿ.ಎಸ್.ಬಾಗೇವಾಡಿ, ಹಣಮಂತ ಬಡಿಗೇರ, ಹಣಮಂತ ಖಾನಗೌಡ್ರ, ಮಲ್ಲೇಶಪ್ಪ ಕಟಗಿ, ದೇವೇಂದ್ರ ಬಡಿಗೇರ, ಸಾಯಿಕಿರಣ ಪಟ್ಟಣಶೇಟ್ಟಿ, ಹಣಮಂತ ಕಂಕಣವಾಡಿ, ಕೆಂಪ್ಪಣ್ಣ ನಬಾಪೂರ, ಸಂದೀಪ ಆಡಿನವರ, ಮಹಾಂತೇಶ ಕಂಬಾರ, ವಿನಾಯಕ ಪರವಿನಾಯ್ಕರ ಸಮೀತಿಯ ಪದಾಧಿಕಾರಿಗಳು, ತಾಯಂದಿರು, ಮಕ್ಕಳು ಸಾಯಿ ಬಾಬಾರವರ ಅಪಾರ ಭಕ್ತರು ಉಪಸ್ಥಿತರಿದ್ದರು.
ದುಂಡಪ್ಪ ಬೀರಗೌಡ್ರ ಸ್ವಾಗತಿಸಿದರು, ಮೌನೇಶ ಪತ್ತಾರ ವಂಧಿಸಿದರು