RNI NO. KARKAN/2006/27779|Sunday, December 22, 2024
You are here: Home » breaking news » ಗೋಕಾಕ:ಪತ್ರಕರ್ತ ದಿಲೀಪ ಮಜಲೀಕರ ಕಾರು ಅಪಘಾತ : ಮೂವರಿಗೆ ತೀವ್ರ ಗಾಯ

ಗೋಕಾಕ:ಪತ್ರಕರ್ತ ದಿಲೀಪ ಮಜಲೀಕರ ಕಾರು ಅಪಘಾತ : ಮೂವರಿಗೆ ತೀವ್ರ ಗಾಯ 

ಪತ್ರಕರ್ತ ದಿಲೀಪ ಮಜಲೀಕರ ಕಾರು ಅಪಘಾತ : ಮೂವರಿಗೆ ತೀವ್ರ ಗಾಯ

ಗೋಕಾಕ ನ 28 : ಓವರ ಟೇಕ್ ಮಾಡಲು ಹೋಗಿ ಕಾರು ಪಲ್ಟಿಯಾಗಿ ಮೂವರಿಗೆ ಗಂಭೀರ ಗಾಯವಾಗಿರುವ ಘಟನೆ ಬುಧವಾರ ಬೆಳಗಿನ ಜಾವ ನಡೆದಿದೆ .
ನಗರದ ಹೊರವಲಯ ಕಡಬಗಟ್ಟಿ ರಸ್ತೆ ಚೌಡೇಶ್ವರಿ ದೇವಸ್ಥಾನ ಹತ್ತಿರ ಈ ದುರ್ಘಟನೆ ಜರುಗಿದ್ದು , ಸ್ಥಳೀಯ ಹಿರಿಯ ಪರ್ತಕರ್ತ ದಿಲೀಪ್ ಮಜಲೀಕರ (58) , ರಾಧಿಕಾ ಮಜಲೀಕರ , ಮೂಡಲಗಿಯ ಇನೋರ್ವ ಪತ್ರಕರ್ತ ಗಾಡವಿ ಅವರ ತೆಲೆಬಾಗಕ್ಕೆ ತೀವ್ರ ಪೆಟ್ಟಾಗಿದೆ ಎಂದು ತಿಳಿದು ಬಂದಿದೆ . ಅಪಘಾತದಲ್ಲಿ ಕಾರು ಸಂಪೂರ್ಣ ನುಜ್ಜುಗಿಡಾಗಿದೆ.

ಅಪಘಾತದಲ್ಲಿ ಗಾಯಗೊಂಡ ಮೂವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು , ಚಿಕಿತ್ಸೆ ನೀಡಲಾಗುತ್ತಿದೆ. ಈ ಪ್ರಕರಣದ ಕುರಿತು ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Related posts: