RNI NO. KARKAN/2006/27779|Friday, November 22, 2024
You are here: Home » breaking news » ಮೂಡಲಗಿ:ಉನ್ನತ ವಿಚಾರಗಳೊಂದಿಗೆ ತಮ್ಮ ಕನಸುಗಳನ್ನು ನನಸು ಮಾಡಿಕೊಳ್ಳಬೇಕು : ವಾಸಂತಿ ತೇರದಾಳ

ಮೂಡಲಗಿ:ಉನ್ನತ ವಿಚಾರಗಳೊಂದಿಗೆ ತಮ್ಮ ಕನಸುಗಳನ್ನು ನನಸು ಮಾಡಿಕೊಳ್ಳಬೇಕು : ವಾಸಂತಿ ತೇರದಾಳ 

ಉನ್ನತ ವಿಚಾರಗಳೊಂದಿಗೆ ತಮ್ಮ ಕನಸುಗಳನ್ನು ನನಸು ಮಾಡಿಕೊಳ್ಳಬೇಕು : ವಾಸಂತಿ ತೇರದಾಳ

ಮೂಡಲಗಿ ನ 29 : ಪ್ರಸಕ್ತ ದಿನಗಳಲ್ಲಿ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿ ನಿಟ್ಟಿನಲ್ಲಿ ಸರಕಾರ ಅನೇಕ ಪ್ರೋತ್ಸಾಹಕ ಯೋಜನೆಗಳ ಮೂಲಕ ಕಲಿಕಾ ಗುಣಮಟ್ಟ ಹೆಚ್ಚಿಸುವಲ್ಲಿ ಶ್ರಮಿಸುತ್ತಿದೆ. ಯೋಜನೆಗಳನ್ನು ಸಮರ್ಪಕ ರೀತಿಯಲ್ಲಿ ಉಪಯೋಗಿಸಿಕೊಂಡು ತಮ್ಮ ಭವ್ಯ ಭವಿಷ್ಯತ್ತನ್ನು ರೂಪಿಸಿಕೊಳ್ಳ ಬೇಕು ಎಂದು ಹಳ್ಳೂರ ಜಿ.ಪಂ ಸದಸ್ಯೆ ವಾಸಂತಿ ತೇರದಾಳ ಹೇಳಿದರು.
ಅವರು ಗುರುವಾರದಂದು ಮೂಡಲಗಿ ಪಟ್ಟಣದ ಕೆ.ಎಚ್.ಎಸ್ ಸರಕಾರಿ ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡ ಉಚಿತ ಸೈಕಲ್ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಗ್ರಾಮೀಣ ಪ್ರದೇಶದ ಹಾಗೂ ಸಾರಿಗೆ ವ್ಯವಸ್ಥೆ ಇಲ್ಲದ ಕಡೆ ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಜನೆಗೆ ಸಹಾಯಕವುವಂತೆ ಸೈಕಲ ವಿತರಿಸುತ್ತಿರುವದು ಸ್ವಾಗತಾರ್ಹ. ಮಕ್ಕಳು ಕೊಟ್ಟಂತ ಸೈಕಲಗಳನ್ನು ಸುಗಮ ರೀತಿಯಲ್ಲಿ ನಿರ್ವಹಿಸಿಕೊಂಡು ಬಳಕೆ ಮಡಬೇಕು. ಕಲಿಕೆಯಲ್ಲಿ ಗುಣಮಟ್ಟ ಕಾಯ್ದುಕೊಂಡು ಉನ್ನತ ವಿಚಾರಗಳೊಂದಿಗೆ ತಮ್ಮ ಕನಸುಗಳನ್ನು ನನಸು ಮಾಡಿಕೊಳ್ಳಬೇಕು ಎಂದು ಆಶಿಸಿದರು.
ಚಿಕ್ಕೋಡಿ ಡಿ.ಡಿ.ಪಿಐ ಎಮ್ ಜಿ ದಾಸರ ಮಾತನಾಡಿ, ಮಗುವಿನ ಸಮಗ್ರ ಅಭಿವೃದ್ದಿಹೊಂದಬೇಕಾದರೆ ಪಾಲಕರ, ಶಿಕ್ಷಕರ, ಅಧಿಕಾರಿ ವರ್ಗದವರ ಪಾತ್ರ ಹೆಚ್ಚಾಗಿದೆ. ಶೈಕ್ಷಣಿಕವಾಗಿ ಮಕ್ಕಳಿಗೆ ಮೌಲ್ಯಗಳು, ಜೀವನಾಧಾರ ಶೈಲಿಗಳ ಕುರಿತು ಮನವರಿಕೆ ಮಾಡಿಕೊಡುವದು ಮಹತ್ವದ್ದಾಗಿದೆ. ಪ್ರತಿ ದಿನವು ಮಗುವಿನ ಕಲಿಕೆ ಹಾಗೂ ಅವರ ಕಾರ್ಯಚಟುವಟಿಕೆಗಳ ಮೇಲೆ ನಿಗಾವಹಿಸುವದು ಅವಶ್ಯಕವಾಗಿದೆ ಎಂದರು.
ಕಾರ್ಯಕ್ರಮದ ದಿವ್ಯ ಸಾನಿದ್ಯವಹಿಸಿದ್ದ ಮೂಡಲಗಿ ಸಿದ್ದಸಂಸ್ಥಾನ ಮಠದ ಪೀಠಾಧಿಕಾರಿ ಶ್ರೀ ಶ್ರೀಪಾದಬೋಧ ಸ್ವಾಮೀಜಿ ಆಶಿರ್ವಚನ ನೀಡಿದರು.
ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಸಿ ಮನ್ನಿಕೇರಿ, ಭೂದಾನಿ ಹಾಗೂ ಪುರಸಭೆ ಸದಸ್ಯ ಸಂತೋಷ ಸೋನವಾಲಕರ, ಪುರಸಭೆ ಸದಸ್ಯರಾದ ಅಬ್ದುಲಗಫಾರ ಡಾಂಗೆ, ಹನಮಂತ ಗುಡ್ಲಮನಿ, ಎಸ್.ಡಿ.ಎಮ್.ಸಿ ಉಪಾಧ್ಯಕ್ಷ ಅಲ್ತಾಫ್ ಹವಾಲ್ದಾರ, ಸದಸ್ಯ ಶಂಕ್ರಯ್ಯ ಹಿರೇಮಠ, ಸಮನ್ವಯಾಧಿಕಾರಿ ಬಿ.ಎಚ್ ಮೋರೆ, ಬಿ.ಆರ್.ಪಿ ಕೆ.ಎಲ್ ಮೀಶಿ, ಮುಖ್ಯೋಪಾಧ್ಯಾಯ ಎಸ್.ಬಿ ನ್ಯಾಮಗೌಡ, ಬಿ.ಎಸ್ ನಂದೆಪ್ಪನವರ, ಎಮ್.ಎಮ್ ದಬಾಡಿ, ಪಿ.ಬಿ ಮದಬಾವಿ, ಕೆ.ಎಸ್ ಭಜಂತ್ರಿ, ಎಸ್.ಡಿ ಹುಣಶ್ಯಾಳೆ, ಎಸ್.ಬಿ ಮುದ್ದಾರ, ಎ.ಕೆ ಸುಣಧೋಳಿ, ಎಸ್.ಬಿ ಮಲಾಬಾದಿ, ಎಮ್.ಎಮ್ ವಾಟಕರ, ಟಿ.ಜಿ ಘಂಟಿ, ಎ.ಆರ್ ಕುರುಬರ ಮತ್ತಿತರರು ಉಪಸ್ಥಿತರಿದ್ದರು.

Related posts: