RNI NO. KARKAN/2006/27779|Thursday, December 12, 2024
You are here: Home » breaking news » ಗೋಕಾಕ:ಅಧ್ಯಕ್ಷರಾಗಿ ತಹಶೀಲದಾರ, ಉಪಾಧ್ಯಕ್ಷರಾಗಿ ಕಿತ್ತೂರ ಆಯ್ಕೆ

ಗೋಕಾಕ:ಅಧ್ಯಕ್ಷರಾಗಿ ತಹಶೀಲದಾರ, ಉಪಾಧ್ಯಕ್ಷರಾಗಿ ಕಿತ್ತೂರ ಆಯ್ಕೆ 

ಅಧ್ಯಕ್ಷರಾಗಿ ತಹಶೀಲದಾರ, ಉಪಾಧ್ಯಕ್ಷರಾಗಿ ಕಿತ್ತೂರ ಆಯ್ಕೆ

ಗೋಕಾಕ ನ 29 : ನಗರದ ದಿ. ಗೋಕಾಕ ಉಪ್ಪಾರರ ಔದ್ಯೋಗಿಕ ಸಹಕಾರಿ ಸಂಘದ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಯು ದಿ.28ರಂದು ಸಂಘದ ಕಾರ್ಯಾಲಯದಲ್ಲಿ ಜರುಗಿತು.
ಅಧ್ಯಕ್ಷರಾಗಿ ಗಣಪತಿ ದುರ್ಗಪ್ಪ ತಹಶೀಲದಾರ ಉಪಾಧ್ಯಕ್ಷರಾಗಿ ಶ್ರೀಮತಿ ಲಕ್ಷ್ಮವ್ವ ಬಿ.ಕಿತ್ತೂರ ಆಯ್ಕೆಗೊಂಡರು.
ಅಧ್ಯಕ್ಷ ಸ್ಥಾನಕ್ಕೆ ಇಬ್ಬರು ನಾಮಪತ್ರ ಸಲ್ಲಿಸಿದ್ದು ಯಲ್ಲಪ್ಪ ಎಲ್ ಹೆಜ್ಜೆಗಾರ ಮತ್ತು ಗಣಪತಿ ದುರ್ಗಪ್ಪ ತಹಶೀಲದಾರ ನಾಮಪತ್ರ ಸಲ್ಲಿಸಿದ್ದು ಹೆಜ್ಜೆಗಾರ ಅವರು 3 ಮತಗಳು ಪಡೆದರೆ ತಹಶೀಲದಾರ ಅವರು 8 ಮತಗಳನ್ನು ಪಡೆದುಕೊಂಡು ಆಯ್ಕೆಗೊಂಡರು, ಉಪಾಧ್ಯಕ್ಷ ಸ್ಥಾನಕ್ಕೆ ಒಬ್ಬರೇ ನಾಮಪತ್ರ ಸಲ್ಲಿಸಿದ ಶ್ರೀಮತಿ ಲಕ್ಷ್ಮವ್ವ ಬಿ.ಕಿತ್ತೂರ ಅವರು ಅವಿರೋಧವಾಗಿ ಆಯ್ಕೆಗೊಂಡರು ಎಂದು ಚುನಾವಣಾಧಿಕಾರಿ ಐ.ಎ.ಬೆಟಗೇರಿ ತಿಳಿಸಿದರು.
ಸದಸ್ಯರುಗಳಾದ ನಿಂಗಪ್ಪ ಹುಳ್ಳಿ, ಬಸಪ್ಪ ರಂಕನಕೊಪ್ಪ, ಬಸವರಾಜ ಶಿಂಗಳಾಪೂರ, ಮಾಯಪ್ಪ ತಹಶೀಲದಾರ, ಮಾರುತಿ ಜಡೆನ್ನವರ, ಯಲ್ಲಪ್ಪ ಹೆಜ್ಜೆಗಾರ, ಮಾರುತಿ ಸಾತಪ್ಪಗೋಳ, ಯಲ್ಲವ್ವ ಖಾನಪ್ಪನವರ, ಲಕ್ಷ್ಮಣ ಪಾತ್ರೋಟ ಇದ್ದರು.

Related posts: