RNI NO. KARKAN/2006/27779|Thursday, November 21, 2024
You are here: Home » breaking news » ಗೋಕಾಕ:ಮಹಾರಥ ಚಲನಚಿತ್ರ ಯಶಸ್ವಯಾಗಿ ಉತ್ತರ ಕರ್ನಾಟಕ ಭಾಗದ ಕಲಾವಿದರ ಬೆಳವಣಿಗೆಗೆ ಸಹಕಾರಿಯಾಗಲಿ : ಖಾನಪ್ಪನವರ

ಗೋಕಾಕ:ಮಹಾರಥ ಚಲನಚಿತ್ರ ಯಶಸ್ವಯಾಗಿ ಉತ್ತರ ಕರ್ನಾಟಕ ಭಾಗದ ಕಲಾವಿದರ ಬೆಳವಣಿಗೆಗೆ ಸಹಕಾರಿಯಾಗಲಿ : ಖಾನಪ್ಪನವರ 

ಮಹಾರಥ ಚಲನಚಿತ್ರ ಯಶಸ್ವಯಾಗಿ ಉತ್ತರ ಕರ್ನಾಟಕ ಭಾಗದ ಕಲಾವಿದರ ಬೆಳವಣಿಗೆಗೆ ಸಹಕಾರಿಯಾಗಲಿ : ಖಾನಪ್ಪನವರ

ಗೋಕಾಕ ನ 30 : ಸ್ಥಳೀಯ ಕಲಾವಿದರನ್ನೊಳಗೊಂಡ ಮಹಾರಥ ಚಲನಚಿತ್ರ ಯಶಸ್ವಯಾಗಿ ಉತ್ತರ ಕರ್ನಾಟಕ ಭಾಗದ ಕಲಾವಿದರ ಬೆಳವಣಿಗೆಗೆ ಸಹಕಾರಿಯಾಗಲಿ ಎಂದು ಕರವೇ ತಾಲೂಕಾಧ್ಯಕ್ಷ ಬಸವರಾಜ ಖಾನಪ್ಪನವರ ಹೇಳಿದರು.
ಶುಕ್ರವಾರದಂದು ನಗರದ ಆನಂದ ಚಿತ್ರಮಂದಿರದಲ್ಲಿ ಗೋಕಾಕ ನಾಡಿನ ಕಲಾವಿದೆ ಶೃತಿ ಜಾಧವ ನಾಯಕನಟಿಯಾಗಿ ಅಭಿನಯಿಸಿರುವ ಮಹಾರಥ ಕನ್ನಡ ಚಲನಚಿತ್ರವನ್ನು ಪೂಜೆ ಸಲ್ಲಿಸುವದರೊಂದಿಗೆ ಚಾಲನೆ ನೀಡಿ ಮಾತನಾಡಿದ ಅವರು , ಸತೀಶ ಶುಗರ್ ಅವಾಡ್ರ್ಸ ವೇದಿಕೆಯಿಂದ ಹೊರಹೊಮ್ಮಿರುವ ಕಲಾವಿದರು ಇದೇ ಪ್ರಥಮ ಬಾರಿಗೆ ಕನ್ನಡ ಚಿತ್ರರಂಗದಲ್ಲಿ ನಾಯಕಿಯಾಗಿ ಶೃತಿ ಜಾಧವ, ಕಾಮಿಡಿ ಕಿಲಾಡಿಗಳಾದ ಪ್ರವೀಣ ಕುಮಾರ ಗಸ್ತಿ, ಸಂಜು ಬಸಯ್ಯ, ಯಲ್ಲೇಶಕುಮಾರ ಮೆಳವಂಕಿ ಹಾಸ್ಯ ಕಲಾವಿದರಾಗಿ ನಟಿಸಿರುವುದು ಹೆಮ್ಮೆಯ ವಿಷಯವಾಗಿದ್ದು ಕಲಾಭಿಮಾನಿಗಳು ಇವರನ್ನು ಪ್ರೋತ್ಸಾಹಿಸಬೇಕೆಂದರು.
ರನ್ನ ಸೂಪರ್ ಮೂವೀಸ್ ಬ್ಯಾನರಿನಡಿಯಲ್ಲಿ ನಿರ್ಮಾಣವಾಗಿರುವ ಮಹಾರಥ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ಮಾಣದ ಜೊತೆಗೇ ನಿರ್ಧೇಶನ ಮಾಡಿರುವ ಪ್ರೀತಮ್ ಅವರು ತ್ರೀಕೋನ ಪ್ರೇಮ ಕಥೆಯನ್ನು ಹೆಣೆದು ಈ ಚಿತ್ರದಲ್ಲಿ ಸಸ್ಪೇನ್ಸ್, ಹಾರಾರ್, ಮತ್ತು ಹಾಸ್ಯ ದೃಶ್ಯಗಳು ಚಿತ್ರದ ಜೀವಾಳವಾಗಿವೆ ಹೊರಹಾಕಿದ್ದಾರೆ. ಹಳಿಯಾಳದ ಯುವ ಪ್ರತಿಭೆ ನವೀನ್ ಮತ್ತು ರನ್ನ ಮುಧೋಳದ ಪ್ರೀತಮ್ ಅವರು ನಾಯಕ ನಟರಾಗಿ ನಟಿಸಿದ್ದಾರೆಂದರು.
ಉತ್ತರ ಕರ್ನಾಟಕದ ಸ್ಥಳೀಯ ಕಲಾವಿದರನ್ನೇ ಈ ಚಿತ್ರದಲ್ಲಿ ಬಳಸಿಕೊಂಡಿದ್ದು ಉತ್ತರ ಕರ್ನಾಟಕದ ಸ್ಥಳಗಳಲ್ಲಿ ಚಿತ್ರಿಕರಣ ಮಾಡಿರುವದು ವಿಶೇಷವಾಗಿದೆ. ಅಷ್ಟೇ ಅಲ್ಲದೇ ಖ್ಯಾತ ನಾಮರಾದ ಬ್ಯಾಂಕ್ ಜನಾರ್ಧನ್, ಕಪ್ಪೇರಾಯ ಖ್ಯಾತಿಯ ಚನ್ನಪ್ಪ ಕಾಳೆ ಹಿರಿಯ ಕಲಾವಿದರ ದಂಡೇ ಈ ಚಿತ್ರದಲ್ಲಿದೆ. ಸ್ಥಳೀಯ ಕಲಾವಿದರು ನಿರ್ಮಿಸಿರುವ ಮಹಾರಥ ಚಲನಚಿತ್ರವನ್ನು ಚಿತ್ರ ಮಂದಿರದಲ್ಲಿ ನೋಡಿ ಪ್ರೋತ್ಸಾಹಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಿರಿಗನ್ನಡ ಮಹಿಳಾ ವೇದಿಕೆಯ ರಾಜ್ಯ ಉಪಾಧ್ಯಕ್ಷೆ ರಜನಿ ಜಿರಗ್ಯಾಳ, ಮಾಜಿ ನಗರಸಭೆ ಸದಸ್ಯ ಭೀಮಶಿ ಭರಮನ್ನವರ, ಜೆಸಿಐ ಸಂಸ್ಥೆಯ ಅಧ್ಯಕ್ಷ ಜಿ ಆರ್ ನಿಡೋಣಿ, ಗಣ್ಯರಾದ ರಿಯಾಜ ಚೌಗಲಾ, ಗೀರಿಶ ಝಂವರ, ರಾಜು ಕೆಂಚನಗುಡ್ಡ, ಬಿ ಎಸ್ ಪುಠಾಣಿ, ಕಲಾವಿದ ಶಿವು ಪೂಜೇರಿ ಸೇರಿದಂತೆ ಚಿತ್ರತಂಡದವರು ಇದ್ದರು.

Related posts: