RNI NO. KARKAN/2006/27779|Sunday, December 15, 2024
You are here: Home » breaking news » ಗೋಕಾಕ:ಮಕ್ಕಳಿಗೆ ಸಂಸ್ಕಾರದೊಂದಿಗೆ ಶಿಕ್ಷಣ ನೀಡುವಲ್ಲಿ ತಾಯಿ ಪಾತ್ರ ಮಹತ್ವದ್ದಾಗಿದೆ : ಸರೋಜಾ ವಣಕಿಮಠ

ಗೋಕಾಕ:ಮಕ್ಕಳಿಗೆ ಸಂಸ್ಕಾರದೊಂದಿಗೆ ಶಿಕ್ಷಣ ನೀಡುವಲ್ಲಿ ತಾಯಿ ಪಾತ್ರ ಮಹತ್ವದ್ದಾಗಿದೆ : ಸರೋಜಾ ವಣಕಿಮಠ 

ಮಕ್ಕಳಿಗೆ ಸಂಸ್ಕಾರದೊಂದಿಗೆ ಶಿಕ್ಷಣ ನೀಡುವಲ್ಲಿ ತಾಯಿ ಪಾತ್ರ ಮಹತ್ವದ್ದಾಗಿದೆ : ಸರೋಜಾ ವಣಕಿಮಠ

ಗೋಕಾಕ ನ 30 : ಮಕ್ಕಳಿಗೆ ತಾಯಿಯೇ ಮೊದಲ ಗುರುವಾಗಿದ್ದು ಅವರಿಗೆ ಸಂಸ್ಕಾರದೊಂದಿಗೆ ಶಿಕ್ಷಣ ನೀಡುವಲ್ಲಿ ತಾಯಿ ಪಾತ್ರ ಮಹತ್ವದ್ದಾಗಿದೆ ಎಂದು ಸರೋಜಾ ವಣಕಿಮಠ ಹೇಳಿದರು.
ಅವರು, ಶುಕ್ರವಾರದಂದು ನಗರದ ವಿದ್ಯಾ ನಿಕೇತನ ಶಾಲೆಯಲ್ಲಿ ಆಯೋಜಿಸಿದ ಪಾಲಕರ ಸಭೆಯಲ್ಲಿ ಪಾಲಕರ ಪ್ರತಿನಿಧಿಯಾಗಿ ಪಾಲ್ಗೊಂಡು ಮಾತನಾಡುತ್ತಿದ್ದರು.
ಮಕ್ಕಳು ತಾಯಂದಿರೊಂದಿಗೆ ಮನೆಯಲ್ಲಿ ಹೆಚ್ಚು ಸಮಯ ಇರುತ್ತಾರೆ. ತಾಯಂದಿರು ಟಿವಿಗಳಿಂದ ದೂರವಿದ್ದು ಮಕ್ಕಳ ಶಿಕ್ಷಣದ ಕಡೆ ಗಮನಹರಿಸಬೇಕು. ತಂದೆ ತಾಯಿಯ ನಂತರದ ಸ್ಥಾನ ಶಿಕ್ಷಕರದ್ದಾಗಿದೆ. ಶಿಕ್ಷಕರು, ಪಾಲಕರು ಹಾಗೂ ಸಂಸ್ಥೆಯವರು ಪರಸ್ಪರ ಸಹಕಾರದಿಂದ ಕಾರ್ಯಪ್ರವೃತ್ತರಾಗಿ ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಶ್ರಮಿಸೋಣವೆಂದರು.
ವೇದಿಕೆಯ ಮೇಲೆ ಮುಖ್ಯೋಪಾಧ್ಯಾಯಿನಿ ರೇಣುಕಾ ಗಾಣಿಗೇರ, ಪಾಲಕ ಪ್ರತಿನಿಧಿಗಳಾದ ಸುವರ್ಣ ನಸಬಿ, ಕವಿತಾ ಮಾದರ, ಸುಜ್ಞಾನಿ ನಾಯಕ ಇದ್ದರು.
ವಿದ್ಯಾರ್ಥಿಗಳಾದ ಸೃಷ್ಠಿ ನಾಯಕ ಸ್ವಾಗತಿಸಿದರು. ಪ್ರೀಯಾಂಕ ಹೊನಕುಪ್ಪಿ ನಿರೂಪಿಸಿ, ಸೃಷ್ಠಿ ಪತ್ತಾರ ವಂದಿಸಿದರು.

Related posts: