RNI NO. KARKAN/2006/27779|Wednesday, November 6, 2024
You are here: Home » breaking news » ಮೂಡಲಗಿ:ದಲಿತ ಮಹಿಳೆಗೆ ಒಲಿದ ವಿಜಯಮಾಲೆ

ಮೂಡಲಗಿ:ದಲಿತ ಮಹಿಳೆಗೆ ಒಲಿದ ವಿಜಯಮಾಲೆ 

ದಲಿತ ಮಹಿಳೆಗೆ ಒಲಿದ ವಿಜಯಮಾಲೆ

ಮೂಡಲಗಿ ನ 30: ಸಮೀಪದ ಧರ್ಮಟ್ಟಿಯ ಗ್ರಾಮದ 12 ಸದಸ್ಯ ಬಲದ ಗ್ರಾಮ ಪಂಚಾಯಿತಿ ಸಾಮಾನ್ಯ ಮಹಿಳಾ ಮೀಸಲಾತಿಯ ಉಪಾಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಬಿಜೆಪಿಯ ಸುವರ್ಣ ಲಕ್ಕಪ್ಪ ತೆಳಗಡೆ ಜಯಗಳಿಸಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಅಜೀತ ಮನ್ನಿಕೇರಿ ತಿಳಿಸಿದರು.
ಧರ್ಮಟ್ಟಿ ಗ್ರಾಮ ಪಂಚಾಯಿತಿಯ ಈ ಹಿಂದೆ ಉಪಾಧ್ಯಕ್ಷೆಯಾಗಿದ್ದ ಭಾರತಿ ಕೋರಕಪೂಜೇರಿ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರಿಂದ ತೆರವಾಗಿದ್ದ ಉಪಾಧ್ಯಕ್ಷ ಸಾಮಾನ್ಯ ಮಹಿಳಾ ಸ್ಥಾನಕ್ಕೆ ಸುವರ್ಣ ತಳಗಡೆ ಹಾಗೂ ಮಹಾದೇವಿ ತುಂಬುಚಿಯವರ ನಡುವೆ ಜಿದ್ದ ಜಿದ್ದಿನ ಚುನಾವಣೆ ನಡೆಯಿತು. 12ಸ್ಥಾನದಲ್ಲಿ ಸುವರ್ಣ ತಳಗಡೆ 8ಮತ ಪಡೆದು ಜಯಗಳಿಸಿದರೆ ವಿರುದ್ದವಾಗಿ ಸ್ಪರ್ಧಿಸಿದ್ದ ಮಹಾದೇವಿ ತುಂಬುಚಿ 4ಮತಗಳನ್ನು ಪಡೆದು ಸೋಲು ಅನುಭವಿಸಿದ್ದಾರೆ.
ಉಪಾಧ್ಯಕ್ಷೆ ಸುವರ್ಣ ಲಕ್ಕಪ್ಪ ತಳಗಡೆ ಮಾತನಾಡಿ, ನಾವು ಮಾಡಿರುವ ಜನಪರ ಕೆಲಸ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಮಾರ್ಗದರ್ಶನದಿಂದ ಗ್ರಾಮದ ಗುರು ಹಿರಿಯರ ಸಹಕಾರದಿಂದ ಜಯಗಳಿಸಿದ್ದೆನೆ ಮುಂದೆಯೂ ಗ್ರಾಮದ ಅಭಿವೃದ್ದಿಗೆ ಶ್ರಮಿಸುತ್ತೆನೆ ಎಂದರು.
ಈ ಸಂದರ್ಭದಲ್ಲಿ ಪಿಡಿಒ ಕೆ.ಎಮ್ ಪಡದಾಳೆ, ಗ್ರಾ. ಪಂ ಅಧ್ಯಕ್ಷೆ ರಾಜಶ್ರೀ ಕುರಣಗಿ, ಸದಸ್ಯರಾದ ಲಕ್ಕಪ್ಪ ತಳಗಡೆ, ಪ್ರತೀಭಾ ತೆಳಗಡೆ, ವಿಠ್ಠಲ ಪೂಜೇರಿ, ಬಸವರಾಜ ಬಡ್ಡಿ, ಪರಶುರಾಮ ಸನದಿ, ರುಕ್ಮವ್ವ ಹಳ್ಳೂರ, ಮಾರುತಿ ಗೋರುಬಾಳ, ಭೀಮಪ್ಪ ಪೂಜೇರಿ, ಗ್ರಾಮದ ಮುಖಂಡರಾದ ನಿಂಗಪ್ಪ ಹರಗಪ್ಪಗೋಳ, ಸದಾಶಿವ ಬೈಲಿ, ಈರಪ್ಪ ಢವಳೇಶ್ವರ, ಸುರೇಶ ಪೂಜೇರಿ, ಯಮನಪ್ಪ ಮೇತ್ರಿ, ಯಮನಪ್ಪ ಕುಲಗೋಡ, ವಿಠ್ಠಲ ಕಬ್ಬೂರ, ಲಗಮಪ್ಪ ಕುಟ್ರಿ, ಮಹಾದೇವ ಬಡ್ಡಿ, ಲಕ್ಕಪ್ಪ ಪೂಜೇರಿ, ಬಿ.ಎಮ್ ಮಹಾಲಿಂಗಪೂರ, ಭನಪ್ಪ ಕೊರಕಪೂಜೇರಿ, ಪುಂಡಲಿಕ ಕಬ್ಬೂರ ಮತ್ತಿತರರು ಉಪಸ್ಥಿತರಿದ್ದರು.

Related posts: