RNI NO. KARKAN/2006/27779|Thursday, December 12, 2024
You are here: Home » breaking news » ಗೋಕಾಕ:ಸಿದ್ಧ ಸಮಾಧಿ ಯೋಗದಿಂದ ದೈಹಿಕವಾಗಿ, ಮಾನಸಿಕವಾಗಿ ಜೀವನ ನಡೆಸಬಹುದು : ಹನುಮಂತ ಗುರೂಜಿ

ಗೋಕಾಕ:ಸಿದ್ಧ ಸಮಾಧಿ ಯೋಗದಿಂದ ದೈಹಿಕವಾಗಿ, ಮಾನಸಿಕವಾಗಿ ಜೀವನ ನಡೆಸಬಹುದು : ಹನುಮಂತ ಗುರೂಜಿ 

ಸಿದ್ಧ ಸಮಾಧಿ ಯೋಗದಿಂದ ದೈಹಿಕವಾಗಿ, ಮಾನಸಿಕವಾಗಿ ಜೀವನ ನಡೆಸಬಹುದು : ಹನುಮಂತ ಗುರೂಜಿ

ಗೋಕಾಕ ಡಿ 3 : ಕಳೆದ 38 ವರ್ಷಗಳಿಂದ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿರುವ ಸಿದ್ಧ ಸಮಾಧಿ ಯೋಗದ ಕರ್ತೃ ಡಾ.ಪ್ರಭಾಕರ ಗುರೂಜಿ ಅವರಾಗಿದ್ದರು. ಇಡೀ ತಮ್ಮ ಜೀವನವನ್ನೇ ಸಿದ್ಧ ಸಮಾಧಿ ಯೋಗಕ್ಕೆ ಅರ್ಪಿಸಿದ ಮಹಾನ್ ಯೋಗಿ ಎಂದು ಧಾರವಾಡ ವಿಭಾಗದ ಋಷಿ ಸಂಸ್ಕಂತಿ ವಿದ್ಯಾ ಕೇಂದ್ರದ ಹನುಮಂತ ಗುರೂಜಿ ಹೇಳಿದರು.
ಇಲ್ಲಿಯ ಎನ್‍ಎಸ್‍ಎಫ್ ಅತಿಥಿ ಗೃಹದಲ್ಲಿ ಭಾನುವಾರ ರಾತ್ರಿ ಜರುಗಿದ ಸಿದ್ಧ ಸಮಾಧಿ ಯೋಗದ ಪರಿಚಯ ಹಾಗೂ ಗುರುವಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸಿದ್ಧ ಸಮಾಧಿ ಯೋಗದಿಂದ ದೈಹಿಕವಾಗಿ, ಮಾನಸಿಕವಾಗಿ ಜೀವನ ನಡೆಸಬಹುದು. ರೋಗ ರುಜಿನಗಳನ್ನು ತಡೆಗಟ್ಟಬಹುದು. ಮಾನಸಿಕ ಒತ್ತಡದಿಂದ ಬಳಲುತ್ತಿರುವವರಿಗೆ ಇದೊಂದು ಉತ್ತಮ ತರಬೇತಿಯಾಗಿದೆ. ಆಯಾಸವಿಲ್ಲದೇ ಕೆಲಸ ಮಾಡುವ ಶಕ್ತಿ ಹಾಗೂ ಲವಲವಿಕೆಯ ಜೀವನ ಪ್ರಾಪ್ತಿಯಾಗುತ್ತದೆ. ಏಕಾಗ್ರತೆ, ಜ್ಞಾಪಕ ಶಕ್ತಿ ಹೆಚ್ಚಳ, ಮನಸ್ಥೈರ್ಯ ಹಾಗೂ ಗ್ರಹಣ ಶಕ್ತಿ ವೃದ್ಧಿಯಾಗುತ್ತದೆ. ದೀರ್ಘಾವಧಿ ಕಾಯಿಲೆಗಳಿಂದ ಶಾಶ್ವತವಾದ ಬಿಡುಗಡೆ, ದುಶ್ಚಟಗಳಿಂದ ಮುಕ್ತಿ ಹೊಂದುವುದಲ್ಲದೇ ಶಿಭಿರಾರ್ಥಿಗಳಿಗೆ ಸ್ವರ್ಗ ನೋಡುವ ಅನುಭವ ಬರುತ್ತದೆ ಎಂದು ಅವರು ಹೇಳಿದರು.
ಸಿದ್ಧ ಸಮಾಧಿ ಯೋಗಕ್ಕೆ ತನ್ನದೇಯಾದ ವಿಶಿಷ್ಟವಾದ ಹಿನ್ನೆಲೆಯಿದೆ. ತಯಾರಿ ಮಾಡುವುದು. ಸಮನಾದ ಬುದ್ಧಿ. ಮನಸ್ಸು ಮತ್ತು ಶರೀರವನ್ನು ಒಂದಾಗಿಸುವುದೇ ಸಿದ್ಧ ಸಮಾಧಿ ಯೋಗದ ಉದ್ಧೇಶವಾಗಿದೆ. ಕ್ಷಣಕ್ಷಣಕ್ಕೂ ಮಾನಸಿಕ ಒತ್ತಡ ಅನುಭವಿಸುತ್ತಿರುವವರಿಗೆ ಇದೊಂದು ಸಂಜೀವಿನಿ ಆಗಿದೆ. ಇತರೇ ಯೋಗಗಳಿಗಿಂತ ಈ ಯೋಗ ಭಿನ್ನವಾಗಿದ್ದು, ಇದರಲ್ಲಿ ಪಾಲ್ಗೊಳ್ಳುವ ಮೂಲಕ ತಮ್ಮ ಆರೋಗ್ಯವನ್ನು ಸದೃಢಗೊಳಿಸಿಕೊಳ್ಳುವಂತೆ ಅವರು ಹೇಳಿದರು.
ಪತ್ರೀಜಿ ಯೋಗಿ, ಡಾ.ರವಿಶಂಕರ ಗುರೂಜಿ, ಜಗ್ಗಿ ವಾಸುದೇವರಾಯ ಅವರಂತಹ ಸಾಧಕರು ಇದರಲ್ಲಿ ಭಾಗಿಯಾಗಿ ಜಗತ್ತಿನಾಧ್ಯಂತ ಹೆಸರುವಾಸಿಯಾಗಿದ್ದಾರೆ. ಎಲೆಮರೆಯ ಕಾಯಿಯಂತೆ ಇರುವ ಈ ಯೋಗದ ಚೈತನ್ಯ ಶಕ್ತಿ ಡಾ. ಪ್ರಭಾಕರ ಗುರೂಜಿ ಅವರು ಎಸ್‍ಎಸ್‍ವಾಯ್ ಯಶಸ್ಸಿಗೆ ಜಗತ್ತಿನಾದ್ಯಂತ ಹೆಮ್ಮರವಾಗಿ ಬೆಳೆಯಲು ಜೀವನದುದ್ದಕ್ಕೂ ದುಡಿದಿದ್ದಾರೆ. ಅವರ ತಪಸ್ಸಿನ ಫಲವೇ ಸಿದ್ಧ ಸಮಾಧಿ ಯೋಗ ಆಗಿದೆ ಎಂದು ಹೇಳಿದರು.
ಧ್ಯಾನ, ಪ್ರಾಣಾಯಾಮ, ಆಸನಗಳು, ವ್ಯಕ್ತಿತ್ವ ವಿಕಾಸ, ಆಹಾರ ಕ್ರಮ, ಕರ್ಮಯೋಗ, ಜ್ಞಾನಯೋಗ, ಪತಂಜಲಿ ಯೋಗಗಳನ್ನು ಹೊಂದಿರುವ ಇದು ಬಿಪಿ, ಶುಗರ್, ಪಾಶ್ರ್ವವಾಯು, ಕ್ಯಾನ್ಸರ್ ರೋಗಿಗಳಿಗೆ ಉತ್ತಮ ತರಬೇತಿಯಾಗಿದೆ ಎಂದು ಹನುಮಂತ ಗುರೂಜಿ ಹೇಳಿದರು.
ಗುರುಸಿದ್ಧ ಗುರೂಜಿ ಹಾಗೂ ಆನಂದ ಗುರೂಜಿ ಅವರು ಸಿದ್ಧ ಸಮಾಧಿ ಯೋಗದ ಮಹತ್ವವನ್ನು ತಿಳಿಸಿದರು. ಇದೇ ಸಂದರ್ಭದಲ್ಲಿ ಹನುಮಂತ ಗುರೂಜಿ, ಗುರುಸಿದ್ಧ ಗುರೂಜಿ ಹಾಗೂ ಆನಂದ ಗುರೂಜಿ ಅವರನ್ನು ಶಿಭಿರಾರ್ಥಿಗಳು ಸತ್ಕರಿಸಿದರು.
ಎನ್‍ಎಸ್‍ಎಫ್ ಅತಿಥಿ ಗೃಹದ ನಿಂಗಪ್ಪ ಕುರಬೇಟ, ಲಕ್ಕಪ್ಪ ಲೋಕುರಿ, ಸುನೀಲ ಯತ್ತಿನಮನಿ, ನಿವೃತ್ತ ಅಧ್ಯಾಪಕ ಪ್ರೋ. ಎಂ.ಬಿ. ಕುದರಿ, ಹಿರಿಯ ಪತ್ರಕರ್ತ ಮಾರುತಿ ಕಲಾಲ, ಆರ್.ಎಸ್. ಗೊಡೇರ, ಲಕ್ಷ್ಮೀ ಮುರಗಜ್ಜಗೋಳ, ತಾಪಂ ಸದಸ್ಯೆ ನೀಲವ್ವಾ ಬಳಿಗಾರ, ಸುಜಾತಾ ಮಠದ, ಮಂಜುಳಾ ಇಟ್ನಾಳ, ಕೆ.ಬಿ. ಪಾಟೀಲ, ಲಕ್ಷ್ಮಣ ಗಡಾದ, ಕುಮಾರ ಗಾಯಕವಾಡ, ಅಡಿವೆಪ್ಪ ಕಂಕಾಳಿ, ಮಾರುತಿ ಪಾಟೀಲ, ಮುಂತಾದವರು ಉಪಸ್ಥಿತರಿದ್ದರು.
ಕಲ್ಲಪ್ಪ ಲಕ್ಕಾರ ಸ್ವಾಗತಿಸಿದರು. ನ್ಯಾಯವಾದಿ ಸುರೇಶ ಜಾಧವ ವಂದಿಸಿದರು. ಬಸು ಇಟ್ನಾಳ ಕಾರ್ಯಕ್ರಮ ನಿರೂಪಿಸಿದರು.

Related posts: