ಗೋಕಾಕ:ಸಮೃದ್ಧ ಭಾರತದ ಪರಿಕಲ್ಪನೆಯನ್ನು ಶ್ರೀ ಸುಕ್ಷೇತ್ರ ಹುಣಶ್ಯಾಳಪಿಜಿ ಮಠವು ಹೊಂದಿದೆ-ಹುಕ್ಕೇರಿ ಶ್ರೀಗಳು
ಸಮೃದ್ಧ ಭಾರತದ ಪರಿಕಲ್ಪನೆಯನ್ನು ಶ್ರೀ ಸುಕ್ಷೇತ್ರ ಹುಣಶ್ಯಾಳಪಿಜಿ ಮಠವು ಹೊಂದಿದೆ-ಹುಕ್ಕೇರಿ ಶ್ರೀಗಳು
ಗೋಕಾಕ ಡಿ 7 : ಸಮೃದ್ಧ ಭಾರತದ ಪರಿಕಲ್ಪನೆಯನ್ನು ಶ್ರೀ ಸುಕ್ಷೇತ್ರ ಹುಣಶ್ಯಾಳಪಿಜಿ ಮಠವು ಹೊಂದಿದೆ ಎಂದು ಹುಕ್ಕೇರಿಯ ಶ್ರೀ ಗುರುಶಾಂತೇಶ್ವರ ಹಿರೇಮಠದ ಪೂಜ್ಯ ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಜಿ ಹೇಳಿದರು.
ಅವರು ಶುಕ್ರವಾರದಂದು ತಾಲೂಕಿನ ಸುಕ್ಷೇತ್ರ ಹುಣಶ್ಯಾಳ ಪಿಜಿ ಯ ಶ್ರೀ ಸಿದ್ಧಲಿಂಗ ಕೈವಲ್ಯಾಶ್ರಮದಲ್ಲಿ ಅಮವಾಸ್ಯೆಗೊಮ್ಮೆ ಜರುಗುವ 100ನೇ ಮಾಸಿಕ ಸುವಿಚಾರ ಚಿಂತನಗೋಷ್ಠಿ ಹಾಗೂ ಶ್ರೀ ನಿಜಗುಣ ದೇವರ ಕಿರೀಟ ಪೂಜಾ ಕಾರ್ಯಕ್ರಮದ ಪಾವನ ಸಾನಿಧ್ಯ ವಹಿಸಿ ಮಾತನಾಡಿದರು.
ಇಂತಹ ಸುವಿಚಾರ ಚಿಂತನಗೋಷ್ಠಿ ಕಾರ್ಯಕ್ರಮದಿಂದ ಗ್ರಾಮೀಣ ಸುಧಾರಣೆಗೆ ಪೂರಕವಾಗಿದ್ದು ಗ್ರಾಮದಲ್ಲಿ ಮನೆಗೊಂದು ಮರ, ವ್ಯಸನಮುಕ್ತ ಸಮಾಜ ನಿರ್ಮಾಣ ಮಾಡುವಲ್ಲಿ ಶ್ರೀಮಠವು ಅತ್ಯಂತ ಮಹತ್ವದ ಕಾರ್ಯ ಮಾಡಿದೆ. ಶ್ರೀಮಠವು ಸರ್ವಧರ್ಮಿಯ ಸೇವೆಗೆ ಸದಾ ಸಿದ್ದವಿದ್ದು ಯಾವುದೇ ಜಾತಿ ಬೇಧ ಇಲ್ಲದೇ ಶ್ರೀಮಠವು ಮುಂಚೂಣಿಯಲ್ಲಿದ್ದು ಸುವಿಚಾರ ಚಿಂತನಗೋಷ್ಠಿಯಲ್ಲಿ ನಾಡಿನ ಹಲವಾರು ಮಠಾಧೀಶರು,ಸಾಹಿತಿಗಳು, ಪ್ರಜ್ಞಾವಂತರು, ಪರಿಸರ ಪ್ರೇಮಿಗಳು ತಮ್ಮ ಸುವಿಚಾರವನ್ನು ಈ ಭಾಗದ ಭಕ್ತರಿಗೆ ಉಣ ಬಡಿಸುವ ಮೂಲಕ ಭಕ್ತಿಯ ಸೇವೆಯನ್ನು ಸಲ್ಲಿಸಿದ್ದಾರೆ. ಇವತ್ತಿಗೆ 100ನೇ ಸುವಿಚಾರ ಮಾಸಿಕ ಚಿಂತನಗೋಷ್ಠಿಗೆ ಫಲಶ್ರುತಿಯಾಗಿದೆ ಎಂದರು.
ಇದೇ ಸಂದರ್ಭದಲ್ಲಿ ದಿವ್ಯಸಾನಿಧ್ಯವನ್ನು ಶ್ರೀಮಠದ ಶ್ರೀ ನಿಜಗುಣ ದೇವರು ವಹಿಸಿದ್ದು ಅವರನ್ನು ಹುಕ್ಕೇರಿ ಶ್ರೀಗಳು ನೆನಪಿನ ಕಾಣಿಕೆಯನ್ನು ನೀಡಿ ಗೌರವಿಸಿದರು.
ಅಧ್ಯಕ್ಷತೆಯನ್ನು ಗೂಗದಡಿಯ ಶ್ರೀ ಸಿದ್ಧಾರೂಢಮಠದ ಸಿದ್ಧರಾಮ ಮಹಾಸ್ವಾಮಿಜಿ ವಹಿಸಿದ್ದರು. ಮುತ್ತೇಪ್ಪ ಐದುಡ್ಡಿ ಇವರಿಂದ ಅನ್ನದಾಸೋಹ ಮತ್ತು ಬಸವರಾಜ ಐದುಡ್ಡಿ ಇವರಿಂದ ಚಿಂತನ ದಾಸೋಹ ಜರುಗಿತು.
ಹಣಮಂತ ದಾಸರ, ಹಣಮಂತ ಪಾದಗಟ್ಟಿ,ಗಂಗಾಧರ ಗಿಳಿಹೊಸೂರ ಅವರಿಂದ ಸಂಗೀತ ಸೇವೆ ಜರುಗಿತು. ಶ್ರೀ ಸಿದ್ದಲಿಂಗೇಶ್ವರ ಶಾಲಾ ವಿದ್ಯಾರ್ಥಿಗಳಿಂದ ಮನರಂಜನೆ ಕಾರ್ಯಕ್ರಮ ನಡೆಯಿತು.