RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ಸಮಾಜಮುಖಿ ಕಾರ್ಯಗಳನ್ನು ಮಾಡಬೇಕು: ಡಾ: ರಾಜೇಂದ್ರ ಸಣ್ಣಕ್ಕಿ

ಗೋಕಾಕ:ಸಮಾಜಮುಖಿ ಕಾರ್ಯಗಳನ್ನು ಮಾಡಬೇಕು: ಡಾ: ರಾಜೇಂದ್ರ ಸಣ್ಣಕ್ಕಿ 

ಸಮಾಜಮುಖಿ ಕಾರ್ಯಗಳನ್ನು ಮಾಡಬೇಕು: ಡಾ: ರಾಜೇಂದ್ರ ಸಣ್ಣಕ್ಕಿ

ಗೋಕಾಕ ಡಿ 8 : ದಲಿತರು ಸಂಘಟನಾತ್ಮಕ ಮನೋಭಾವನೆಯನ್ನು ಬೆಳೆಸಿಕೊಂಡು ಸಮಾಜಮುಖಿ ಕಾರ್ಯಗಳನ್ನು ಮಾಡಬೇಕೆಂದು ಕರ್ನಾಟಕ ಪ್ರದೇಶ ಕುರುಬರ ಸಂಘದ ರಾಜ್ಯಾಧ್ಯಕ್ಷ ಡಾ: ರಾಜೇಂದ್ರ ಸಣ್ಣಕ್ಕಿ ಹೇಳಿದರು.
ಅವರು ತಾಲೂಕಿನ ಗೋಸಬಾಳ ಗ್ರಾಮದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಘಟಕವನ್ನು ಉದ್ಘಾಟಿಸಿ ಮಾತನಾಡಿದರು.
ಡಾ: ಬಿ.ಆರ್.ಅಂಬೇಡಕರ ಅವರ ತತ್ವಾದರ್ಶಗಳನ್ನು ಅಳವಡಿಸಿಕೊಳ್ಳಬೇಕು. ಅಂಬೇಡಕರರು ದಲಿತರಿಗೆ ಅಷ್ಟೇ ಸಿಮೀತವಲ್ಲ. ಸಂವಿಧಾನದ ಪಿತಾಮಹರಾಗಿದ್ದಾರೆ. ಶೈಕ್ಷಣಿಕ, ಆರ್ಥಿಕ,ಸಾಮಾಜಿಕ, ರಾಜಕೀಯವಾಗಿ ಮುಂದೆ ಬರಬೇಕು ಎಂದರು.
ಗ್ರಾ.ಪಂ ಅಧ್ಯಕ್ಷ ಶಿವಲಿಂಗಪ್ಪ ಬಳಿಗಾರ ಮಾತನಾಡಿ ಈ ಭಾಗದ ಶಾಸಕರಾದ ಬಾಲಚಂದ್ರ ಜಾರಕಿಹೊಳಿ ಅವರು ಎಸ್‍ಸಿ,ಎಸ್‍ಟಿ ಜನಾಂಗದವರಿಗೆ ಸರ್ಕಾರದಿಂದ ಸಿಗುವ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು ಇವುಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಹೇಳಿದರಲ್ಲದೇ ಗ್ರಾಮದ ಸರ್ವಾಂಗೀಣ ಅಭಿವೃದ್ದಿಗೆ ಎಲ್ಲರೂ ಸಹಕಾರ ನೀಡಬೇಕೆಂದರು.
ಈ ಸಂದರ್ಭದಲ್ಲಿ ಡಿಎಸ್ ಎಸ್ ಜಿಲ್ಲಾ ಸಂಚಾಲಕ ಶ್ರೀಕಾಂತ ತಳವಾರ, ಸುಂದರವ್ವ ಕಟ್ಟಿಮನಿ, ಸೈದಾ ಸನದಿ,ಲಕ್ಷ್ಮಣ ತೆಳಗಡೆ,ವೀರಭದ್ರ ಮೈಲನ್ನವರ,ಅಶೋಕ ಕಟ್ಟಿಮನಿ,ರಮೇಶ ದಳವಾಯಿ,ಬಾಳಪ್ಪ ಬುಳ್ಳಿ,ಅಶೋಕ ಬಂಡಿವಡ್ಡರ,ಬಸವರಾಜ ಬುಳ್ಳಿ,ಪಾವಾಡಿ ಹೊಸಟ್ಟಿ,ಯಲ್ಲಪ್ಪ ಹೊಸಮನಿ,ಕಲ್ಲೊಳೆಪ್ಪ ಬಂಡಿವಡ್ಡರ, ಹಣಮಂತ ಹರಿಜನ,ಬಸಪ್ಪ ಹರಿಜನ,ದುಂಡಪ್ಪ ಹರಿಜನ,ರಾಮಯ್ಯ ಮಠದ,ಸತ್ತೇಪ್ಪ ಹೊಸಟ್ಟಿ,ಗೌಡಪ್ಪ ಪಾಟೀಲ,ಅಡಿವೆಪ್ಪ ಬುಳ್ಳಿ,ದುರ್ಗಪ್ಪ ಹರಿಜನ ಸೇರಿದಂತೆ ಇತರರು ಇದ್ದರು.

Related posts: