RNI NO. KARKAN/2006/27779|Friday, October 18, 2024
You are here: Home » breaking news » ಗೋಕಾಕ:ರಸ್ತೆ ಅಗಲಿಕರಣ ಕಾಮಗಾರಿ : ಗೋಕಾಕ – ಫಾಲ್ಸ್ ವಾಹನ ಸಂಚಾರ ನಿಷೇಧ

ಗೋಕಾಕ:ರಸ್ತೆ ಅಗಲಿಕರಣ ಕಾಮಗಾರಿ : ಗೋಕಾಕ – ಫಾಲ್ಸ್ ವಾಹನ ಸಂಚಾರ ನಿಷೇಧ 

ರಸ್ತೆ ಅಗಲಿಕರಣ ಕಾಮಗಾರಿ : ಗೋಕಾಕ – ಫಾಲ್ಸ್ ವಾಹನ ಸಂಚಾರ ನಿಷೇಧ

ಗೋಕಾಕ ಜೂ 27: ನಗರದಿಂದ ಗೋಕಾಕ ಫಾಲ್ಸ್ ರಸ್ತೆಯ ಅಗಲಿಕರಣ ಕಾಮಗಾರಿ ಕೈಗೊಂಡಿದ್ದರಿಂದ ಜೂ 30 ರಿಂದ ಜು 2 ರವರೆಗೆ ಈ ರಸ್ತೆಯಲ್ಲಿ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ ಎಂದು ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಎ.ಬಿ ಹೊನ್ನಾವರ ತಿಳಿಸಿದ್ದಾರೆ

ಈ ಕುರಿತು ಪತ್ರಿಕಾ ಪ್ರಕಟಣೆ ನಿಡಿರುವ ಅವರು ಗೋಕಾಕ ನಗರದಿಂದ ಗೋಕಾಕ ಫಾಲ್ಸ್ ವರೆಗೆ ಸಂಪರ್ಕ ಕಲ್ಪಿಸುವ ಬಾದಾಮಿ ಗೊಡಚಿ ಗೋಕಾಕ ಫಾಲ್ಸ್ ರಸ್ತೆ ರಾ.ಹೆ 134 , ಚೈನೇಜ 12೦.10 ಕಿ.ಮಿ ರಲ್ಲಿ ಗೋಕಾಕ ಫಾಲ್ಸ್ ಗುಡ್ಡದಲ್ಲಿರುವ ಜೋಡಪಡಿ ಕಲ್ಲನ್ನು ಸಿಡಿ ಮದ್ದು ಬಳಸಿ ಒಡೆಯುವ ಕಾರ್ಯವನ್ನು ಕೈಗೊಂಡಿದ್ದು ರಸ್ತೆಯ ಅಗಲಿಕರಣ ಕಾಮಗಾರಿಯ ಹಾಗೂ ಸಂಚಾರಿಗಳ ಸುರಕ್ಷತೆಯ ಹಿತದೃಷ್ಟಿಯಿಂದ ಈ ರಸ್ತೆಯ ಮೇಲೆ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ ಪ್ರಯಾಣಿಕರು ಹಾಗೂ ವಾಹನ ಸವಾರರು ರಸ್ತೆ ಕಾಮಗಾರಿ ಪೂರ್ಣಗೊಳ್ಳುವ ತನಕ ಪರ್ಯಾಯ ಮಾರ್ಗ ಬಳಸಿ ಸಂಚರಿಸುವಂತೆ ಮನವಿ ಮಾಡಿದ್ದಾರೆ

Related posts: