RNI NO. KARKAN/2006/27779|Friday, December 13, 2024
You are here: Home » breaking news » ಗೋಕಾಕ:ಕೊರಮ ಜನಾಂಗವು ಸಾಕಷ್ಟಿದ್ದರೂ ಶೈಕ್ಷಣಿಕವಾಗಿ ಹಾಗೂ ಆರ್ಥಿಕವಾಗಿ ನಿರೀಕ್ಷಿತ ಪ್ರಮಾಣದಲ್ಲಿ ಸಬಲರಾಗಿಲ್ಲ : ಉಮೇಶ ಮನಗೂಳಿ

ಗೋಕಾಕ:ಕೊರಮ ಜನಾಂಗವು ಸಾಕಷ್ಟಿದ್ದರೂ ಶೈಕ್ಷಣಿಕವಾಗಿ ಹಾಗೂ ಆರ್ಥಿಕವಾಗಿ ನಿರೀಕ್ಷಿತ ಪ್ರಮಾಣದಲ್ಲಿ ಸಬಲರಾಗಿಲ್ಲ : ಉಮೇಶ ಮನಗೂಳಿ 

ಕೊರಮ ಜನಾಂಗವು ಸಾಕಷ್ಟಿದ್ದರೂ ಶೈಕ್ಷಣಿಕವಾಗಿ ಹಾಗೂ ಆರ್ಥಿಕವಾಗಿ ನಿರೀಕ್ಷಿತ ಪ್ರಮಾಣದಲ್ಲಿ ಸಬಲರಾಗಿಲ್ಲ : ಉಮೇಶ ಮನಗೂಳಿ

ಗೋಕಾಕ ಡಿ 11 : ರಾಜ್ಯದಲ್ಲಿ ಕೊರಮ ಜನಾಂಗವು ಸಾಕಷ್ಟಿದ್ದರೂ ಶೈಕ್ಷಣಿಕವಾಗಿ ಹಾಗೂ ಆರ್ಥಿಕವಾಗಿ ನಿರೀಕ್ಷಿತ ಪ್ರಮಾಣದಲ್ಲಿ ಸಬಲರಾಗಿಲ್ಲ ಸರಕಾರವು ಪ.ಜಾತಿ ಹಾಗೂ ಅಲೆಮಾರಿ ಜನಾಂಗಕ್ಕೆ ಸಾಕಷ್ಟು ಅನುದಾನವನ್ನು ಮೀಸಲಿಟ್ಟಿದೆ ಇದೆ ಸದುಪಯೋಗವನ್ನು ಗ್ರಾಮೀಣ ಪ್ರದೇಶದ ಬಡ ಕೊರಮ ಜನಾಂಗವು ಪಡೆಯುವ ರೀತಿಯಲ್ಲಿ ಸಂಘಟನೆಗಳು ಕಾರ್ಯನಿರ್ವಹಿಸಬೇಕು ಎಂದು ಖನಗಾಂವ ಗ್ರಾಮ ಪಂಚಾಯತಿ ಅಭಿವೃದ್ದಿ ಅಧಿಕಾರಿ ಉಮೇಶ ಮನಗೂಳಿ ಹೇಳಿದರು.
ರವಿವಾರದಂದು ತಾಲೂಕಿನ ಖನಗಾಂವ ಗ್ರಾಮದಲ್ಲಿ ಅಖಿಲ ಕರ್ನಾಟಕ ಕುಳುವ ಮಹಾ ಸಂಘದ ಆಶ್ರಯದಲ್ಲಿ ಶ್ರೀ ಶರಣ ನೂಲಿ ಚಂದಯ್ಯ ಕೊರವರ(ಕೊರಮ) ವಿವಿದ್ದೋಶಗಳ ಸಂಘದ ನಾಮಫಲಕವನ್ನು ಉದ್ಘಾಟಿಸಿ ಸಮಾರಂಭದಲ್ಲಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಕೊರಮ ಸಮಾಜದ ಮುಖಂಡರಾದ ಮಡ್ಡೆಪ್ಪ ಭಜಂತ್ರಿ, ಅಶೋಕ ಭಜಂತ್ರಿ, ಅಪ್ಪಾಸಾಬ ಭಜಂತ್ರಿ, ಅವರುಗಳು ಮಾತನಾಡಿ ಕೊರಮ ಜನಾಂಗವು ಸೌಲಭ್ಯಗಳಿಂದ ನಿರಂತರ ವಂಚಿತರಾಗುತ್ತಿದ್ದು ಆದ್ದರಿಂದ ಸೌಲಬ್ಯ ವಂಚಿತರನ್ನು ಗುರುತಿಸಿ ಅವರಿಗೆ ಸರಕಾರದಿಂದ ಸಿಗುವ ಸೌಲತ್ತುಗಳ ಬಗ್ಗೆ ಅರಿವು ಮೂಡಿಸಲು ಅಖಿಲ ಕರ್ನಾಟಕ ಕುಳುವ ಮಹಾ ಸಂಘವು ಅವೀರತ ಶ್ರಮಿಸುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾರುತಿ ಭಜಂತ್ರಿ ವಹಿಸಿದ್ದರು ವೇದಿಕೆಯ ಮೇಲೆ ಖನಗಾಂವ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ನಿರ್ಮಲಾ ಬೆನಕನ್ನವರ, ತಾ.ಪಂ.ಸದಸ್ಯೆ ಶಿವಕ್ಕ ಪುಜೇರಿ, ಪಂಚಾಯತ ಅಭಿವೃದ್ದಿ ಅಧಿಕಾರಿ ಸಿದ್ದಪ್ಪ ದೇಸಾಯಿ, ರಾಜಪ್ಪ ಭಜಂತ್ರಿ, ಹಣಮಂತ ಭಜಂತ್ರಿ, ನಾರಾಯಣ ಭಜಂತ್ರಿ, ರಮೇಶ ಭಜಂತ್ರಿ, ರಮೇಶ ಶ. ಭಜಂತ್ರಿ, ಮಲ್ಲಪ್ಪ ಭಜಂತ್ರಿ, ಮಹಾದೇವ ಭಜಂತ್ರಿ ಕೆಂಪಣ್ಣ ಭಜಂತ್ರಿ ಹಾಜರಿದ್ದರು ಕಾರ್ಯಕ್ರಮವನ್ನು ಮಂಜುನಾಥ ನಾಗರೇಶಿ ನಿರೂಪಿಸಿ ವಂದಿಸಿದರು.

Related posts: