RNI NO. KARKAN/2006/27779|Friday, November 22, 2024
You are here: Home » breaking news » ಬೆಳಗಾವಿ:ಬಗೆ ಹರಿಯದ ಸಚಿವ ರಮೇಶ , ಶಾಸಕಿ ಹೆಬ್ಬಾಳ್ಕರ ಕಿತ್ತಾಟ

ಬೆಳಗಾವಿ:ಬಗೆ ಹರಿಯದ ಸಚಿವ ರಮೇಶ , ಶಾಸಕಿ ಹೆಬ್ಬಾಳ್ಕರ ಕಿತ್ತಾಟ 

ಬಗೆ ಹರಿಯದ ಸಚಿವ ರಮೇಶ , ಶಾಸಕಿ ಹೆಬ್ಬಾಳ್ಕರ ಕಿತ್ತಾಟ

ಬೆಳಗಾವಿ ಡಿ 12 : ರಾಜ್ಯ ರಾಜಕಾರಣ ರಾಜ್ಯ ಮಟ್ಟದ ಹಿರಿಯ ಕಾಂಗ್ರೆಸ್ ನಾಯಕರಿಗೆ ದೊಡ್ಡ ತಲೆನೋವಾಗಿ ಪರಣಿಮಿಸಿದೆ . ಸಚಿವ ರಮೇಶ ಜಾರಕಿಹೊಳಿ ಮತ್ತು ಶಾಸಕಿ ಲಕ್ಮೀ ಹೆಬ್ಬಾಳ್ಕರ್ ನಡುವಿನ ಶೀತಲ ಸಮರ ಸದ್ಯಕ್ಕಂತೂ ಬಗೆ ಹರಿಯುವ ಲಕ್ಷಣಗಳು ಕಾಣುತ್ತಿಲ್ಲ

ಪರಸ್ಪರ ಉಭಯ ನಾಯಕರು ಹೇಳಿಕೆ ನೀಡಿರುವ ಪಿಆರ್​ಒ ವಿಚಾರದ ಬಗ್ಗೆ ಅಸಮಾಧಾನ ಹೆಚ್ಚಾಗಿದೆ. ಈ ಸಂಬಂಧ ಲಕ್ಷ್ಮೀ ಹೆಬ್ಬಾಳ್ಕರ್ ಈಗಾಗಲೇ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಕಾಂಗ್ರೆಸ್​ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‍ಗೆ ದೂರು ನೀಡಿದ್ದಾರೆ ಎಂಬ ಮಾಹಿತಿ ಇದೆ.
ದೂರವಾಣಿ ಮೂಲಕ ಕೆ.ಸಿ ಗೆ ದೂರು :

ದೂರವಾಣಿಯ ಮೂಲಕ ವೇಣುಗೋಪಾಲ್​ಗೆ ದೂರು ನೀಡಿರುವ ಲಕ್ಷ್ಮೀ, ಕಾಂಗ್ರೆಸ್​ನಲ್ಲಿ ಮಹಿಳಾ ಶಾಸಕರಿಗೆ ಬೆಲೆಯೇ ಇಲ್ವಾ? ನನ್ನನ್ನ ಪಿಆರ್​ಒ ಅನ್ನುವುದು ಎಷ್ಟು ಸರಿ? ಜಿಲ್ಲೆಯ ಅಭಿವೃದ್ಧಿ ಕೆಲಸಗಳು ಕುಂಠಿತವಾಗಿವೆ. ಸಿಎಂ ಬೆಳಗಾವಿಗೆ ಬಂದರೆ ಸ್ವಾಗತಿಸಲು ಬಂದಿಲ್ಲ. ನಾನು ಸ್ವಾಗತಿಸಿದ್ರೆ ಬಾಯಿಗೆ ಬಂದಂತೆ ಮಾತನಾಡ್ತಾರೆ ಎಂದು ದೂರಿದ್ದಾರೆ ಎನ್ನಲಾಗ್ತಿದೆ.

ಬೆಳಗಾವಿಯಲ್ಲಿ ಯಾವುದೇ ಪ್ರಗತಿಪರ ಸಭೆಗಳನ್ನೂ ನಡೆಸುತ್ತಿಲ್ಲ. ಜಿಲ್ಲೆಯಲ್ಲಿ ಯಾವುದೇ ಮಹತ್ವದ ಚಟುವಟಿಕೆಗಳು ನಡೆಯುತ್ತಿಲ್ಲ. ಸದ್ಯ ಚಳಿಗಾಲದ ಅಧಿವೇಶನ ನಡೆಯುತ್ತಿದೆ. ಈ ಸಂದರ್ಭದಲ್ಲಿಯೂ ಸಚಿವರು ಸಕ್ರಿಯವಾಗಿ ಪಾಲ್ಗೊಳ್ಳುತ್ತಿಲ್ಲ. ಜಿಲ್ಲೆಯ ಅಭಿವೃದ್ಧಿ ಬಗ್ಗೆ ಕಿಂಚಿತ್ ಕಾಳಜಿ ತೋರಿಸುತ್ತಿಲ್ಲ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ದೂರಿನಲ್ಲಿ ವಿವರಿಸಿದ್ದಾರೆ ಎನ್ನಲಾಗ್ತಿದೆ.

ಚಳಿಗಾಲ ಅಧಿವೇಶನ ಸಮಯ ಗಲಾಟೆ :

ಈ ಮೂಲಕ ಬೆಳಗಾವಿಯ ಇಬ್ಬರು ಪ್ರಭಾವಿ ನಾಯಕರ ನಡುವಿನ ಕಿತ್ತಾಟ ಬೆಳಗಾವಿ ಅಧಿವೇಶನ ಸಂದರ್ಭದಲ್ಲೇ ವಿಕೋಪಕ್ಕೆ ತಿರುಗಿದೆ. ಬಹುಶಃ ಮಾಜಿ ಸಿಎಂ ಸಿದ್ದರಾಮಯ್ಯ ವಾಪಸ್‍ ಬರುವವರೆಗೂ ಈ ಸಮಸ್ಯೆ ಮುಂದುವರಿಯುವ ಸಾಧ್ಯತೆ ಇದೆ. ಅವರು ಬಂದ ನಂತರವೇ ಮಾತುಕತೆ ನಡೆಸಿ ಸಮಸ್ಯೆ ಪರಿಹರಿಸುವ ನಿರೀಕ್ಷೆ ಇದೆ. ಒಟ್ಟಾರೆ ರಮೇಶ್‍ ಜಾರಕಿಹೊಳಿ ವಿರುದ್ಧ ಲಕ್ಷ್ಮೀ ಹೆಬ್ಬಾಳ್ಕರ್‍ ನೀಡಿರುವ ದೂರಿಗೆ ಹೈಕಮಾಂಡ್‍ ಯಾವ ರೀತಿ ಸ್ಪಂದಿಸಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

Related posts: