ಬೆಳಗಾವಿ:ಕಾನೂನು ಹೋರಾಟಕ್ಕೆ ಸಂದ ಜಯ : ನಾಡ ನಾಡಧ್ವಜವನ್ನು ಶಾಸನ ಬದ್ಧಗೊಳಿಸಲು ಸರ್ಕಾರದ ದಿಟ್ಟ ಹೆಜ್ಜೆ
ಕಾನೂನು ಹೋರಾಟಕ್ಕೆ ಸಂದ ಜಯ : ನಾಡ ನಾಡಧ್ವಜವನ್ನು ಶಾಸನ ಬದ್ಧಗೊಳಿಸಲು ಸರ್ಕಾರದ ದಿಟ್ಟ ಹೆಜ್ಜೆ
ಬೆಳಗಾವಿ ಜೂ 27: ರಾಜ್ಯ ಸರಕಾರ ನಾಡು ನುಡಿಯ ವಿಚಾರದಲ್ಲಿ ದಿಟ್ಟ ಹೆಜ್ಜೆ ಹಿಟ್ಟು ನಾಡ ವಿರೋಧಿಗಳಿಗೆ ತಕ್ಕ ಉತ್ತರ ನಿಡಿದೆ
ಕರ್ನಾಟಕಕ್ಕೆ ಪ್ರತ್ಯೇಕವಾದ ಅಂದರೆ ಈಗಿರುವ ಕೆಂಪು ಹಳದಿ ಬಣ್ಣದ ನಾಡಧ್ವಜವನ್ನ ಶಾಸನ ಬದ್ಧಗೊಳಿಸಲು ಮುಂದಾಗಿದೆ. ನಾಡಧ್ವಜವನ್ನ ಶಾಸನ ಬದ್ಧಗೊಳಿಸಲು ಸರ್ಕಾರದ ಹಂತದಲ್ಲಿ ಸಮಿತಿ ರಚಿಸಲಾಗಿದೆ. ಈ ಸಮಿತಿಯು ಕರ್ನಾಟಕ ರಾಜ್ಯಕ್ಕೆ ಪ್ರತ್ಯೇಕವಾದ ನಾಡಧ್ವಜವನ್ನ ರೂಪಿಸಿ, ಅದಕ್ಕೆ ಕಾನೂನು ಚೌಕಟ್ಟು ಒದಗಿಸುವ ಜವಾಬ್ದಾರಿ ಈ ಸಮಿತಿ ಮುಂದಿದೆ.
ಕಳೆದ ಜೂನ್ 6 ರಂದು ಕನ್ನಡ ಸಂಸ್ಕೃತಿ ಮತ್ತು ವಾರ್ತಾ ಇಲಾಖೆ ಅಧೀನ ಕಾರ್ಯದರ್ಶಿ ಸಮಿತಿ ರಚಿಸಿ ಆದೇಶ ಹೊರಡಿಸಿದ್ದರು. ಈ ಸಮಿತಿ ಅಧ್ಯಕ್ಷರಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಧಾನ ಕಾರ್ಯದರ್ಶಿಗಳು, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಕಾರ್ಯದರ್ಶಿಗಳು, ಕಾನೂನು ಇಲಾಖೆ, ಗೃಹ ಇಲಾಖೆ ಕಾರ್ಯದರ್ಶಿ, ಕಾನೂನು ಇಲಾಖೆ ಕಾರ್ಯದರ್ಶಿಗಳು ಸೇರಿ 9 ಜನರನ್ನು ಒಳಗೊಂಡ ಸಮಿತಿ ಇದಾಗಿದೆ
ಬೆಳಗಾವಿ ಜಿಲ್ಲೆ ಆರ್‌ಟಿಐ ಕಾರ್ಯಕರ್ತರು ಮತ್ತು ಕನ್ನಡ ಹೋರಾಟಗಾರ ಭೀಮಪ್ಪ ಗಡಾದ್ 2014ರಿಂದ ನಾಡ ಧ್ವಜವನ್ನ ಶಾಸನ ಬದ್ಧಗೊಳಿಸಲು ಹೋರಾಟ ಆರಂಭಿಸಿದ್ರು. ಬೆಳಗಾವಿ ಎಂಇಎಸ್ ಪುಂಡರು ಕರ್ನಾಟಕದ ನಾಡಧ್ವಜ ಅನಧಿಕೃತವಾಗಿದೆಯೇ ಎಂದು ಪ್ರಶ್ನಿಸಿ, ಯಾವುದೇ ಕಾರಣಕ್ಕೂ ಸರ್ಕಾರಿ ಕಚೇರಿಗಳ ಮುಂದೆ ಈ ಧ್ವಜ ಹಾರಿಸದಂತೆ ಕಾನೂನು ಹೋರಾಟ ಆರಂಭಿಸಿದ್ದರು.
ಆಗ ಭೀಮಪ್ಪ ಗಡಾದ್ ನಾಡಧ್ವಜವನ್ನ ಶಾಸನ ಬದ್ಧಗೊಳಿಸಬೇಕೆಂದು ಹೋರಾಟ ಪ್ರಾರಂಭಿಸಿದ್ದರು. ಜತೆಗೆ ರಾಷ್ಟ್ರಧ್ವಜಕ್ಕೆ ಅಗೌರವ ಬರದಂತೆ ನಾಡಧ್ವಜವನ್ನ ಹಾರಿಸಬಹುದೆಂದು ಸರ್ಕಾರಕ್ಕೆ ಮನವಿ ಮಾಡಿಕೊಟ್ಟಿದ್ದರು. ಗಡಾದ್ ಸುಧೀರ್ಘ ಹೋರಾಟಕ್ಕೆ ಈಗ ಸರ್ಕಾರದಿಂದ ಸ್ಪಂದನೆ ಸಿಕ್ಕಂತಾಗಿದೆ.
ಈ ಮೂಲಕ ಪ್ರಾದೇಶಿಕ ಆಯುಕ್ತರ ಕಚೇರಿ ಮುಂದಿನ ಕನ್ನಡ ನಾಡಧ್ವಜ ಕಾನೂನುಬದ್ಧವಿಲ್ಲ ಎಂದು ಹೋರಾಟ ಮಾಡುತ್ತಿದ್ದ ಎಂಇಎಸ್‌ಗೆ ಇದೀಗ ಮುಖಭಂಗವಾಗಿದೆ. ರಾಜ್ಯ ಉಚ್ಛ ನ್ಯಾಯಾಲಯದ ಅಡ್ವೋಕೇಡ್ ಜನರಲ್ ನಿರ್ದೇಶನದ ಮೇರೆಗೆ ಕನ್ನಡ ನಾಡಧ್ವಜಕ್ಕೆ ವಿನ್ಯಾಸ ಹಾಗೂ ಕಾನೂನಿನ ರೂಪ ನೀಡಲು ರಾಜ್ಯ ಸರ್ಕಾರದಿಂದ ಸಮಿತಿ ರಚನೆಯಾಗಿದೆ. ಇದರಿಂದ ಎಂಇಎಸ್ ಮುಜುಗರಕ್ಕೊಳಗಾಗಿದೆ