RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ಶ್ರೀ ಸಿದ್ದಲಿಂಗ ಕೈವಲ್ಯಾಶ್ರಮದಲ್ಲಿ ಶ್ರೀ ನಿಜಗುಣ ದೇವರ 25 ವರ್ಷದ ಸಾಧನ ಸಂಭ್ರಮ ನಾಡಿನ ಮಹಾತ್ಮರು, ಗಣ್ಯಮಾನ್ಯರು ಭಾಗಿ!

ಗೋಕಾಕ:ಶ್ರೀ ಸಿದ್ದಲಿಂಗ ಕೈವಲ್ಯಾಶ್ರಮದಲ್ಲಿ ಶ್ರೀ ನಿಜಗುಣ ದೇವರ 25 ವರ್ಷದ ಸಾಧನ ಸಂಭ್ರಮ ನಾಡಿನ ಮಹಾತ್ಮರು, ಗಣ್ಯಮಾನ್ಯರು ಭಾಗಿ! 

ಶ್ರೀ ಸಿದ್ದಲಿಂಗ ಕೈವಲ್ಯಾಶ್ರಮದಲ್ಲಿ ಶ್ರೀ ನಿಜಗುಣ ದೇವರ 25 ವರ್ಷದ ಸಾಧನ ಸಂಭ್ರಮ
ನಾಡಿನ ಮಹಾತ್ಮರು, ಗಣ್ಯಮಾನ್ಯರು ಭಾಗಿ!

ಗೋಕಾಕ ಡಿ 16 : ತಾಲೂಕಿನ ಹುಣಶ್ಯಾಳ ಪಿಜಿ ಗ್ರಾಮದ ಶ್ರೀ ಸಿದ್ಧಲಿಂಗ ಕೈವಲ್ಯಾಶ್ರಮದಲ್ಲಿ ನಿಜವರಿದ ಸಂತ,ಸದು ಹೃದಯವಂತ,ಸಾಹಿತ್ಯ ಶ್ರೀಮಂತ ಪೂಜ್ಯ ಶ್ರೀ ನಿಜಗುಣ ದೇವರು ಹುಣಶಾಳಪುರಕ್ಕೆ ಪಾದಾರ್ಪಣೆ ಮಾಡಿ 25 ವರ್ಷಗಳಾದ ಪ್ರಯುಕ್ತ ಸಾಧನ ಸಂಭ್ರಮ ಸಮಾರಂಭವನ್ನು 2019 ಜನೇವರಿ 1ರಿಂದ 3ರವರೆಗೆ ಜರುಗಲಿದ್ದು ಸುಮಾರು 150 ಮಹಾತ್ಮರು ಹಾಗೂ ಜನಪ್ರತಿನಿಧಿಗಳು,ಗಣ್ಯರು ಆಗಮಿಸುವರೆಂದು ಸಾಧನ ಸಂಭ್ರಮದ ಗೌರವಾಧ್ಯಕ್ಷರು ಹಾಗೂ ಹುಕ್ಕೇರಿ ಶ್ರೀ ಗುರುಶಾಂತೇಶ್ವರ ಹಿರೇಮಠದ ಪೂಜ್ಯ ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಜಿ ಹೇಳಿದರು.
ಅವರು ರವಿವಾರದಂದು ತಾಲೂಕಿನ ಹುಣಶ್ಯಾಳ ಪಿಜಿ ಶ್ರೀ ಸಿದ್ಧಲಿಂಗ ಕೈವಲ್ಯಾಶ್ರಮದಲ್ಲಿ ಕರೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.
ಸಮಾರಂಭದಲ್ಲಿ ಆದಿಚುಂಚನಗಿರಿಯ ಮಹಾಸಂಸ್ಥಾನಮಠದ ಶ್ರೀ ಜಗದ್ಗುರು ನಿರ್ಮಲಾನಂದ ಮಹಾಸ್ವಾಮಿಜಿ, ವಿಜಯಪೂರದ ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಮಹಾಸ್ವಾಮಿಜಿ, ಶ್ರೀಶೈಲ ಜಗದ್ಗುರು ಶ್ರೀ ಡಾ| ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ, ಮುಗಳಖೋಡದ ಡಾ| ಷಡಕ್ಷರಿ ಶಿವಯೋಗಿ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಜಿ, ನಿಡಸೋಸಿಯ ಜಗದ್ಗುರು ಶ್ರೀ ಪಂಚಮ ಶಿವಲಿಂಗೇಶ್ವರ ಮಹಾಸ್ವಾಮಿಜಿ,ಇಂಚಲದ ಡಾ| ಶಿವಾನಂದ ಭಾರತಿ ಮಹಾಸ್ವಾಮಿಜಿಯವರು ಸೇರಿದಂತೆ ನಾಡಿನ ಸುಮಾರು 150 ಮಹಾತ್ಮರು ಪಾಲ್ಗೊಳ್ಳುವರು. ಗಣ್ಯರಾದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಸಾಧನ ಸಂಭ್ರಮದ ಕಾರ್ಯಾಧ್ಯಕ್ಷರು ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ, ಸಾಧನ ಸಂಭ್ರಮದ ಅಧ್ಯಕ್ಷರು ಹಾಗೂ ಮಾಜಿ ಸಚಿವ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಶಿವಾನಂದ ಕೌಜಲಗಿ ಸೇರಿದಂತೆ ಸಚಿವರು,ಶಾಸಕರು, ಜನಪ್ರತಿನಿಧಿಗಳು, ಸಾಹಿತಿಗಳು, ಅಧಿಕಾರಿಗಳು ಆಗಮಿಸುವರು. ಈ ಸಾಧನ ಸಂಭ್ರಮಕ್ಕೆ ಸುಮಾರು 50 ಸಾವಿರಕ್ಕೂ ಹೆಚ್ಚು ಭಕ್ತಾಧಿಗಳು ಆಗಮಿಸುವರು.
ಸಾಧನ ಸಂಭ್ರಮದಲ್ಲಿ ಮಹಾದ್ವಾರದ ಉದ್ಘಾಟನೆ, ರಥದ ಕಳಸಾರೋಹಣ, ಸದ್ಭಾವ ಸದನ ಉದ್ಘಾಟನೆ, ಮುತೈದೆಯರ ಉಡಿ ತುಂಬುವುದು, ಸಹಸ್ರ ಕುಂಭೋತ್ಸವ, ಲಕ್ಷ ದೀಪೋತ್ಸವ, 108 ದೇವಿಯರ ಪೂಜೆ, ತುಲಾಭಾರ ಸೇವೆ, ಸಾಮೂಹಿಕ ವಿವಾಹ, ಸನ್ಮಾನ, ಸತ್ಸಂಗ ಸಮ್ಮೇಳನ, ಮಹಾತ್ಮರ ತತ್ವಾಮೃತ, ಸದ್ಗುರು ಸಾಮ್ರಾಟ ಮತ್ತು ಉಳಿಸಿಕೋ ನಿನ್ಹೆಸರು ಸಿಡಿ ಬಿಡುಗಡೆ, ತೊಟ್ಟಿಲೋತ್ಸವ, ಶ್ರೀ ಸಿದ್ಧಲಿಂಗೇಶ್ವರ ರಥೋತ್ಸವ,ಸಂಗೀತ ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿಸಿದರು.
ಸಾಧನ ಸಂಭ್ರಮದ ಸ್ವಾಗತ ಸಮಿತಿಯ ಗೌರವಾಧ್ಯಕ್ಷರು ಹಾಗೂ ತೊಂಡಿಕಟ್ಟಿಯ ಅಭಿನವ ಶ್ರೀ ವೆಂಕಟೇಶ ಮಹಾರಾಜರು ಮಾತನಾಡಿ 25 ವರ್ಷಗಳ ಸಾಧನ ಸಂಭ್ರಮ ಕಾರ್ಯಕ್ರಮವು ಅಭೂತಪೂರ್ವವಾಗಿ ನಡೆದುಕೊಂಡು ಬಂದಿದ್ದು, ಒಂದು ಆಶ್ರಮ,ದೇವಸ್ಥಾನವು ನಿರ್ಮಾಣವಾಗಬೇಕಾದರೆ ಸಾಮಾಜಿಕ,ಧಾರ್ಮಿಕ, ಶೈಕ್ಷಣಿಕವಾಗಿ ನಡೆಸಿಕೊಂಡ ಬಂದ ಶ್ರೀಮಠದ ಪೂಜ್ಯ ಶ್ರೀ ನಿಜಗುಣ ದೇವರ ಸಾಧನೆ ಮಹತ್ವದ್ದಾಗಿದೆ. ಶ್ರೀಮಠದಲ್ಲಿ ಯಾವುದೇ ಜಾತಿ,ಬೇಧ ಭಾವವಿಲ್ಲದೇ ಇಡೀ ಭಕ್ತ ಸಮೂಹವೇ ಎಲ್ಲರೂ ಒಂದೇ ಎಂಬ ಸಮಾನ ಮನೋಭಾವವನ್ನು ಹೊಂದಿ 25 ವರ್ಷಗಳ ಕಾಲ ಸುಧೀರ್ಘ ಸೇವೆಯನ್ನು ಸಲ್ಲಿಸಿದ್ದಾರೆ.
ಶ್ರೀಮಠದ ಪೂಜ್ಯ ಶ್ರೀ ನಿಜಗುಣ ದೇವರು ಮಾತನಾಡಿ ಹುಣಶಾಳ ಗ್ರಾಮಕ್ಕೆ ನಾನು ಪುರಾಣ, ಪ್ರವಚನ ಹೇಳಲು ಬಂದಾಗ ಇಡೀ ಗ್ರಾಮದ ಭಕ್ತ ಸಮೂಹವು ತಾವು ಇಲ್ಲಿಯೇ ಇದ್ದು ಶ್ರೀ ಸಿದ್ದಲಿಂಗ ಕೈವಲ್ಯಾಶ್ರಮವನ್ನು ಸ್ಥಾಪಿಸಿದರು. ಇವತ್ತಿಗೆ 25 ವರ್ಷಗಳು ಗತಿಸಿದವು. ಇದರ ನಿಮಿತ್ಯವಾಗಿ ಭಕ್ತ ಸಮೂಹದ ಪ್ರೀತಿ,ಸಹಕಾರದ ಮೇರೆಗೆ ಸಾಧನ ಸಂಭ್ರಮ ಸಮಾರಂಭವನ್ನು ಮಾಡಬೇಕೆನ್ನುವ ನಿರ್ಧಾರ ಮಾಡಿ ಈ ಭಾಗದ ಶಾಸಕರು ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ಹಾಗೂ ಗ್ರಾಮ ಪಂಚಾಯತ ಜನಪ್ರತಿನಿಧಿಗಳು, ಬೈಲಹೊಂಗಲದ ಶಿವಾನಂದ ಕೌಜಲಗಿ, ಹುಕ್ಕೇರಿ ಶ್ರೀಗಳು, ತೊಂಡಿಕಟ್ಟಿ ಶ್ರೀಗಳು ಬೆನ್ನಲುಬಾಗಿ ನಿಂತು ಈ ಸಾಧನ ಸಂಭ್ರಮ ಸಮಾರಂಭವನ್ನು ಯಶಸ್ವಿಯಾಗಿ ಮಾಡಲಿದ್ದಾರೆಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಗ್ರಾ.ಪಂ ಅಧ್ಯಕ್ಷ ವೈ.ಬಿ.ನಾಯ್ಕ, ಸದಸ್ಯರುಗಳಾದ ಅರ್ಜುನ ನನ್ನಾರಿ, ಹಣಮಂತ ಶೆಕ್ಕಿ, ಬಸಗೌಡ ನಾಯಿಕ, ಮುಖಂಡ ರಾಮನಾಯ್ಕ ನಾಯ್ಕ ಸೇರಿದಂತೆ ಶ್ರೀಮಠದ ಭಕ್ತರು ಇದ್ದರು.

Related posts: