ಗೋಕಾಕ:ಶಿವಾಫೌಂಡೇಶನ್ ಸಂಸ್ಥೆಯಿಂದ ಎಚ್ ಡಿ ಕುಮಾರಸ್ವಾಮಿಯವರ 60ನೇ ಹುಟ್ಟು ಹಬ್ಬವನ್ನು ಆಚರಣೆ
ಶಿವಾಫೌಂಡೇಶನ್ ಸಂಸ್ಥೆಯಿಂದ ಎಚ್ ಡಿ ಕುಮಾರಸ್ವಾಮಿಯವರ 60ನೇ ಹುಟ್ಟು ಹಬ್ಬವನ್ನು ಆಚರಣೆ
ಗೋಕಾಕ ಡಿ 16 : ರಾಜ್ಯದಲ್ಲಿರುವ ಅನ್ನದಾತರು ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಜನಪ್ರಿಯ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರು ರೈತರ ಸಾಲ ಮನ್ನಾ ಮಾಡುವ ಮೂಲಕ ರೈತರ ಕಣ್ಣಿರನ್ನು ಒರೆಸಿದ್ದಾರೆ ಎಂದು ಅರಭಾಂವಿ ಬ್ಲಾಕ್ ಜೆಡಿಎಸ್ ಅಧ್ಯಕ್ಷ ಚನ್ನಪ್ಪ ವಗ್ಗನ್ನವರ ಹೇಳಿದರು.
ಅವರು, ವಿವೇಕಾನಂದ ನಗರದ ಶಿವಾಫೌಂಡೇಶನ್ ಸಂಸ್ಥೆಯ ಅನಾಥ ಮಕ್ಕಳ ಆಶ್ರಮದಲ್ಲಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರ 60ನೇ ಹುಟ್ಟು ಹಬ್ಬವನ್ನು ಆಚರಿಸಿ ಮಾತನಾಡಿದರು.
ರಾಜ್ಯದ ಮುಖ್ಯಮಂತ್ರಿಗಳಿಗೆ ಅನ್ನದಾತರೆ ಉಸಿರು, ಬೆನ್ನೆಲುಬು. ಅನ್ನದಾತರ ಅಭಿವೃದ್ಧಿಯೇ ನನ್ನ ಮೂಲಮಂತ್ರ ಎಂದು ತಿಳಿದಿರುವ ಎಚ್ಡಿಕೆ ಅವರು ನಮ್ಮ ಸರಕಾರ ಇರುವ ತನಕ ರಾಜ್ಯದ ರೈತರು ಧೈರ್ಯಕಳೆದುಕೊಂಡು, ಆತ್ಮಹತ್ಯೆಯಂತಹ ಯೋಚನೆ ಮಾಡಬಾರದೆಂದು ಕುಮಾರಸ್ವಾಮಿಯವರು ಸತತ ಯೋಚನೆಯಲ್ಲಿರುತ್ತಾರೆ ಹೀಗಾಗಿ ಈ ನಾಡಿನ ರೈತರು ಕುಮಾರಸ್ವಾಮಿಯವರ ಬೆಂಬಲಕ್ಕೆ ನಿಲ್ಲಬೇಕು ಎಂದರು.
ಇದಕ್ಕೂ ಮುಂಚೆ ಶಿವಾಫೌಂಡೇಶನ್ ಸಂಸ್ಥೆಯ ಅನಾಥ ಮಕ್ಕಳ ಜೊತೆಗೆ ಕೇಕ್ ಕತ್ತರಿಸುವ ಮೂಲಕ ಎಚ್ ಡಿ ಕುಮಾರಸ್ವಾಮಿಯವರ 60ನೇ ಹುಟ್ಟು ಹಬ್ಬವನ್ನು ಆಚರಿಸಲಾಯಿತು. ನಂತರ ಬೀದಿಯಲ್ಲಿ ವಾಸ ಮಾಡುತ್ತಿರುವ ಅಲೆಮಾರಿ ಜನಾಂಗದ ಮಕ್ಕಳಿಗೆ ಬಟ್ಟೆ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಶಿವಾ ಫೌಂಡೇಷನ್ ಸಂಸ್ಥಾಪಕ ರಮೇಶ ಪೂಜೇರಿ, ಜೆಡಿಎಸ್ ಮುಖಂಡರಾದ ರಾಜು ಉಪ್ಪಾರ, ಹನಮಂತ ಹುಲಕುಂದ, ಮಲ್ಲು ಕೋಳಿ, ದುಂಡಪ್ಪ ಮನ್ನಿಕೇರಿ, ಮುಂತಾದವರು ಇದ್ದರು.