RNI NO. KARKAN/2006/27779|Saturday, October 19, 2024
You are here: Home » breaking news » ಘಟಪ್ರಭಾ:ದಿ.18 ರಿಂದ 28ರ ವರೆಗೆ ಎಸ್.ಡಿ.ಟಿ ಹೈಸ್ಕೂಲ್ ಸಭಾಂಗಣದಲ್ಲಿ ಸಹಜಯೋಗ ಶಿಬಿರ

ಘಟಪ್ರಭಾ:ದಿ.18 ರಿಂದ 28ರ ವರೆಗೆ ಎಸ್.ಡಿ.ಟಿ ಹೈಸ್ಕೂಲ್ ಸಭಾಂಗಣದಲ್ಲಿ ಸಹಜಯೋಗ ಶಿಬಿರ 

ದಿ.18 ರಿಂದ 28ರ ವರೆಗೆ ಎಸ್.ಡಿ.ಟಿ ಹೈಸ್ಕೂಲ್ ಸಭಾಂಗಣದಲ್ಲಿ ಸಹಜಯೋಗ ಶಿಬಿರ


ಘಟಪ್ರಭಾ ಡಿ 16 : ಸ್ಥಳೀಯ ವಿವೇಕಾನಂದ ಯೋಗ ಟ್ರಸ್ಟ್ ಮಂಡ್ಯ (ರಿ) ಹಾಗೂ ಕಾರ್ಯನಿರತ ಪತ್ರಕರ್ತರ ಸಂಘ (ರಿ) ಇವರ ಸಂಯುಕ್ತ ಆಶ್ರಯದಲ್ಲಿ ಉಚಿತವಾಗಿ 10 ದಿನಗಳ ಸಹಜಯೋಗ ಶಿಬಿರವನ್ನು ದಿ.18 ರಿಂದ 28ರ ವರೆಗೆ ಎಸ್.ಡಿ.ಟಿ ಹೈಸ್ಕೂಲ್ ಸಭಾಂಗಣದಲ್ಲಿ ಬೆಳಗ್ಗೆ 6 ರಿಂದ 7.30 ಸಾಯಂಕಾಲ ಏರ್ಪಡಿಸಲಾಗಿದೆ.
ದಿ.18 ರಂದು ಸಂಜೆ 5 ಕ್ಕೆ ಶಿಬಿರದ ದಿವ್ಯ ಸಾನಿದ್ಯವನ್ನು ಸಿದ್ದಾರೂಢ ಮಠದ ಸದ್ಗುರು ಶ್ರೀ ಭೀಮಾನಂದ ಮಹಾಸ್ವಾಮಿಗಳು ವಹಿಸಲಿದ್ದು, ಖ್ಯಾತ ವೈದ್ಯರಾದ ವಿಲಾಸ ನಾಯಿಕವಾಡಿ ಉದ್ಘಾಟಿಸಲಿದ್ದಾರೆ, ಶಿಬಿರವನ್ನು ಹಠಯೋಗ ನಾಟಿವೈದ್ಯ ಪಂಡಿತರು. ಯೋಗ ಗುರುಗಳಾದ ಡಾ|| ಪುಟ್ಟಸ್ವಾಮಿ ಮಂಡ್ಯ ನಡೆಸಿಕೊಡಲಿದ್ದಾರೆ. ಈ ಶಿಬಿರವು ದೀರ್ಘ ಕಾಲಿಕ ಕಾಯಿಲೆಗಳಿಂದ ಬಳಲುತ್ತಿರುವಂತಹ ರೋಗಿಗಳಿಗೆ ರಾಮಬಾಣವಾಗಿದೆ.
ರೋಗಿಗಳಿಗೆ ಉಚಿತ ತಪಾಸಣಾ ಶಿಬಿರವು ಧುಪದಾಳದ ಶ್ರೀ ಚಿದಾನಂದಾಶ್ರಮ ಶ್ರೀ ಸಿದ್ದಾರೂಢ ಮಠದಲ್ಲಿ ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ರವರೆಗೆ ನಡೆಯಲಿದೆ. ದಿ. 28 ರಂದು ಸಾಯಂಕಾಲ 5 ಗಂಟೆಗೆ ಸಮಾರೋಪಗೊಳ್ಳುವದು.

Related posts: