RNI NO. KARKAN/2006/27779|Friday, December 13, 2024
You are here: Home » breaking news » ಗೋಕಾಕ:ದಿ. 18 ರಂದು ಬೆಳಗಾವಿಯ ಸುವರ್ಣ ಸೌಧದ ಮುಂದೆ ಬೃಹತ ಪ್ರತಿಭಟನೆ

ಗೋಕಾಕ:ದಿ. 18 ರಂದು ಬೆಳಗಾವಿಯ ಸುವರ್ಣ ಸೌಧದ ಮುಂದೆ ಬೃಹತ ಪ್ರತಿಭಟನೆ 

ದಿ. 18 ರಂದು ಬೆಳಗಾವಿಯ ಸುವರ್ಣ ಸೌಧದ ಮುಂದೆ ಬೃಹತ ಪ್ರತಿಭಟನೆ

ಗೋಕಾಕ ಡಿ 17 : ಕಂದಾಯ ಇಲಾಖೆಯ ಗ್ರಾಮ ಸಹಾಯಕರನ್ನು ಡಿ ಗ್ರೂಪ್ ನೌಕರರೆಂದು ಘೋಷಿಸಲು ಸರ್ಕಾರ ಒತ್ತಾಯ ಮಾಡುವುದಕ್ಕಾಗಿ ದಿ. 18 ರಂದು ಬೆಳಗಾವಿಯ ಸುವರ್ಣ ಸೌಧದ ಮುಂದೆ ಬೃಹತ ಪ್ರತಿಭಟನೆ ಹಾಗೂ ಅನಿರ್ಧಿಷ್ಠಾವಧಿ ಮುಷ್ಕರ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಕಂದಾಯ ಇಲಾಖೆ ಗ್ರಾಮ ಸಹಾಯಕ ಸಂಘದ ಜಿಲ್ಲಾ ಉಪಾಧ್ಯಕ್ಷ ವೆಂಕಟೇಶ ಕೆಳಗೇರಿ ಹಾಗೂ ತಾಲೂಕಾ ಸಂಘಟನಾ ಕಾರ್ಯದರ್ಶಿ ರವಿಂದ್ರ ಮಾದರ ಅವರು ಜಂಟಿಯಾಗಿ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿರುವ ಅವರು ಕಳೆದ 4 ದಶಕಗಳಿಂದ ನಮ್ಮ ಬೇಡಿಕೆ ಈಡೇರಿಕೆಗಾಗಿ ಹಲವಾರು ಹೋರಾಟ, ಪ್ರತಿಭಟನೆಗಳನ್ನು ಹಮ್ಮಿಕೊಂಡರು ಕೂಡಾ ಸರ್ಕಾರ ನಮ್ಮ ಬೇಡಿಕೆ ಈಡೇರಿಲ್ಲ, ನಾವು ಮಾಡುವ ಕೆಲಸಕ್ಕೆ ಸೇವಾ ಭದ್ರತೆ, ಸಹಾಯ ಸೌಲಭ್ಯ, ಪ್ರತಿ ತಿಂಗಳು ನಮಗೆ ವೇತನ ದೊರೆಯುತ್ತಿಲ್ಲ, 6-8 ತಿಂಗಳಿಗೊಮ್ಮೆ ನಮ್ಮ ವೇತನ ನಮ್ಮ ಕೈ ಸೇರಬೇಕಾದರೇ ಮೇಲಾಧಿಕಾರಿಗಳ ಹಾಗೂ ಸರ್ಕಾರದ ಬಾಗಿಲನ್ನು ತಟ್ಟಬೇಕಾಗುತ್ತದೆ. ಇದರಿಂದಾಗಿ ನಮ್ಮ ಕುಟುಂಬ ನಿರ್ವಹಣೆ ಮಾಡಲು ತುಂಬಾ ಕಷ್ಟವಾಗುತ್ತಿದೆ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ 10 ಸಾವಿರಕ್ಕೂ ಹೆಚ್ಚು ಜನ ಗ್ರಾಮ ಸಹಾಯಕರಾಗಿ ಸೇವೆ ಸಲ್ಲಿಸುತ್ತಿದ್ದೇವೆ. ಅನೇಕ ಬಾರಿ ಪ್ರತಿಭಟನೆಗಳನ್ನು ನಡೆಸಿ ಸರ್ಕಾರದ ಗಮನ ಸೆಳೆಯ ಕಾರ್ಯವನ್ನು ನಮ್ಮ ಸಂಘಟನೆ ಮುಖಾಂತರ ಮಾಡಿದ್ದೇವೆ. ಕಳೆದ 2013ರಲ್ಲಿ ಬೆಳಗಾವಿ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ನಮ್ಮ ಸಂಘದಿಂದ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾಗ ಸ್ಥಳಕ್ಕೆ ಭೇಟಿ ನೀಡಿದ ಮಾಜಿ ಮುಖ್ಯಮಂತ್ರಿಗಳಾದ ಸಿದ್ದಾರಾಮಯ್ಯನವರ ನಮ್ಮನ್ನು ಡಿ ಗ್ರೂಪ್ ನೌಕರರೆಂದು ಘೋಷಣೆಯನ್ನು ಮಾಡುತ್ತೇನೆ ಎಂದಾಗ ನಾವು ತಾತ್ಕಲಿಕವಾಗಿ ಸತ್ಯಾಗ್ರಹವನ್ನು ಹಿಂಪಡೆದ್ದೇವೆ. ಅದರಂತೆ ಸಿದ್ದರಾಮಯ್ಯನವರು ಉನ್ನತ ಮಟ್ಟದ ಅಧಿಕಾರಿಗಳ ಸಭೆಯನ್ನು ಕರೆದು ಚರ್ಚಿಸಿ, ಅಡ್ವೋಕೇಟ್ ಜನರಲ್‍ರಾದ ಡಾ. ರವಿವರ್ಮ ಕುಮಾರ ಅವರು ಕಡತ ಪರಿಶೀಲನೆ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ತಿಳಿಸಿದ್ದರು. ಡಾ. ರವಿವರ್ಮ ಕುಮಾರ ಅವರ ತಮ್ಮ ವರದಿಯಲ್ಲಿ ಡಿಗ್ರೂಪ್ ನೌಕರರೆಂದು ಪರಿಗಣಿಸಲು ಕಾನೂನಿನ ಯಾವುದೇ ಅಡೆತಡೆ ಇರುವದಿಲ್ಲವೆಂದು ವರದಿಯಲ್ಲಿ ತಿಳಿಸಿರುತ್ತಾರೆ. ಅಲ್ಲದೇ ಇನ್ನೂರ್ವ ಅಡ್ವೋಕೇಟ್ ಜನರಲ್‍ರಾದ ಆರ್. ಮದಸೂಧನ ಅವರು ವರದಿಯು ಕೂಡಾ ನಮ್ಮ ಪರವಾಗಿ ಇದೆ. ಇವೆಲ್ಲ ವರದಿಗಳನ್ನು ಸರ್ಕಾರ ಗೌಪ್ಯವಾಗಿಟ್ಟು ನಮಗೆ ವಂಚನೆಯನ್ನು ಮಾಡುತ್ತಿದೆ ಎಂದು ತಿಳಿದ್ದಾರೆ.
ನ್ಯಾಯಸಮ್ಮತವಾದ ನಮ್ಮ ಹೋರಾಟಕ್ಕೆ ರಾಜ್ಯದ ಸಮ್ಮಿಶ್ರ ಸರ್ಕಾರ ಗೌರವ ನೀಡಿ ನಮ್ಮನ್ನು ಡಿಗ್ರೂಪ್ ನೌಕರರೆಂದು ಪರಿಗಣಿಸುವವರೆಗೂ ನಮ್ಮ ಹೋರಾಟ ನಿರಂತರವಾಗಿರುತ್ತದೆ. ದಿ. 18 ರ ಹೋರಾಟದಲ್ಲಿ ಜಿಲ್ಲೆಯ ಎಲ್ಲ ಗ್ರಾಮ ಸಹಾಯಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಹಾಗೂ ಕಂದಾಯ ಇಲಾಖೆಗೆ ತಮ್ಮ ಕೆಲಸ ಕಾರ್ಯಗಳಿಗಾಗಿ ಆಗಮಿಸುವ ಸಾರ್ವಜನಿಕರು ಕೂಡಾ ಸಹಕರಿಸಬೇಕೆಂದು ಕೇಳಗೆರಿ ಹಾಗೂ ಮಾದರ ಅವರು ಪ್ರಕಟನೆಯಲ್ಲಿ ಕೋರಿದ್ದಾರೆ.

Related posts: