ಗೋಕಾಕ:ಆಕ್ಸಫರ್ಡ ಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟ
ಆಕ್ಸಫರ್ಡ ಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟ
ಗೋಕಾಕ ಡಿ 20 : ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಪಾಲಕರು, ಶಿಕ್ಷಕರು ಹಾಗೂ ಶಿಕ್ಷಣ ಸಂಸ್ಥೆಯವರು ಪರಸ್ಪರ ಸಹಕಾರ ಮನೋಭಾವದಿಂದ ಕಾರ್ಯನಿರ್ವಹಿಸುವಂತೆ ಧಾರವಾಡದ ಸಾರ್ವಜನಿಕ ಶಿಕ್ಷಣ ಇಲಾಖೆಯ ವಿಷಯ ಪರಿವೀಕ್ಷಕ ಬಿ ವೈ ಭಜಂತ್ರಿ ಹೇಳಿದರು.
ಗುರುವಾರದಂದು ನಗರದ ಆಕ್ಸಫರ್ಡ ಶಾಲೆಯ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ, ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡುತ್ತ, ಪಠ್ಯೇತರ ಚಟುವಟಿಕೆಗಳಲ್ಲಿ ಮಕ್ಕಳು ಪಾಲ್ಗೊಳ್ಳುವದರಿಂದ ಉತ್ಸಾಹ ಬರಿತರಾಗಿ ಪಠ್ಯದಲ್ಲೂ ಹೆಚ್ಚಿನ ಆಸಕ್ತಿ ತೊರಿಸುತ್ತಾರೆ. ಅವರಲ್ಲಿಯ ಪ್ರತಿಭೆಯನ್ನು ಗುರುತಿಸಿ ಪ್ರೋತಸಾಹಿಸಿ ಪ್ರತಿಭಾನ್ವಿತರನ್ನಾಗಿ ಮಾಡಲು ಹೇಳಿದರು.
ವೇದಿಕೆಯ ಮೇಲೆ ಶಾಲಾ ಸುಧಾರಣಾ ಸಮೀತಿಯ ಅಧ್ಯಕ್ಷ ಭೀಮಶಿ ಭರಮನ್ನವರ, ಪದಾಧಿಕಾರಿಗಳಾದ ಪ್ರತಾಪ ಕುಲಕರ್ಣಿ, ಕೃಷ್ಣಪ್ಪ ಮುಳಗುಂದ, ವಿಠ್ಠಲ ಮುರ್ಕಿಬಾವಿ, ಕೆಂಪಣ್ಣ ಪಾತ್ರೂಟ, ಅಭಿಮುಲ್ಲಾ ಚಪ್ಪಾ, ಸಂಸ್ಥೆಯ ಕಾರ್ಯದರ್ಶಿ ಎ ಎಸ್ ಭಜಂತ್ರಿ, ಪ್ರಾಚಾರ್ಯೆ ಜೆ ಎ ಭಜಂತ್ರಿ ಇದ್ದರು.