ಗೋಕಾಕ:ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಕೊಳವಿ ಗ್ರಾಮಸ್ಥರ ಆಗ್ರಹ
ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಕೊಳವಿ ಗ್ರಾಮಸ್ಥರ ಆಗ್ರಹ
ಗೋಕಾಕ ಡಿ 20 : ಮೂಲಭೂತ ಸೌಕರ್ಯಗಳನ್ನು ಒದಗಿಸುವ ಕುರಿತು ತಾಲೂಕಿನ ಕೊಳವಿ ಗ್ರಾಮಸ್ಥರು ಶುಕ್ರವಾರದಂದು ಗ್ರಾ.ಪಂ ಗೆ ತೆರಳಿ ಮನವಿ ಸಲ್ಲಿಸಿದರು.
ಮೂಲಭೂತ ಸೌಕರ್ಯಗಳಾದ ಶೌಚಾಲಯ,ನೀರು ಸರಬರಾಜು, ಗಟಾರ ಸ್ವಚ್ಛತೆ,ಗಟಾರ ನಿರ್ಮಾಣ ಕುರಿತು ಹಲವು ಬೇಡಿಕೆಗಳು ಇದ್ದು ಸಾಕಷ್ಟು ಸಲ ಗ್ರಾಮ ಪಂಚಾಯತ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಮನವಿ ಮಾಡಿಕೊಂಡರು ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಮನವಿಯಲ್ಲಿ ಆರೋಪಿಸಿದ್ದಾರೆ.
ಈ ಸಂದರ್ಭದಲ್ಲಿ ರೈತ ಮುಖಂಡ ಯಲ್ಲಪ್ಪ ತಿಗಡಿ, ಗ್ರಾಮಸ್ಥರಾದ ಮಹಾದೇವಿ ಕಳ್ಳಿಗುದ್ದಿ, ನಿರ್ಮಲಾ ಮಟ, ಮಹಾದೇವಿ ಭಜಂತ್ರಿ, ಮಲ್ಲವ್ವ ಜನಕಟ್ಟಿ, ಶೈಲಾ ಪಾತ್ರೋಟ, ನಿರ್ಮಲಾ ಯರಗಟ್ಟಿ, ಸೀತವ್ವ ತಿಗಡಿ, ಪಾರ್ವತಿ ಪಾತ್ರೋಟ, ನೀಲವ್ವ ಯರಗಟ್ಟಿ, ವಿಜಯ ಹುಲ್ಲೋಳ್ಳಿ, ಅಪ್ಪಣ್ಣಾ ಜನಕಟ್ಟಿ, ಪಾಂಡು ಮಾಲದಿನ್ನಿ, ಯಲ್ಲಪ್ಪ ಹಿರಟ್ಟಿ, ಉಮೇಶ ಪಾಟೀಲ, ರಾಜು ವನಕೆ ಸೇರಿದಂತೆ ಇತರರು ಇದ್ದರು.