RNI NO. KARKAN/2006/27779|Friday, November 22, 2024
You are here: Home » breaking news » ಗೋಕಾಕ:ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಪಾಲಕರು ಶ್ರಮಿಸಬೇಕು : ಜಿ ಬಿ ಬಳಿಗಾರ

ಗೋಕಾಕ:ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಪಾಲಕರು ಶ್ರಮಿಸಬೇಕು : ಜಿ ಬಿ ಬಳಿಗಾರ 

ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಪಾಲಕರು ಶ್ರಮಿಸಬೇಕು : ಜಿ ಬಿ ಬಳಿಗಾರ

ಗೋಕಾಕ ಡಿ 22: ಮನು ಕುಲದ ಆಶಾ ಕುಸುಮಗಳಾದ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಪಾಲಕರು ಶ್ರಮಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಜಿ ಬಿ ಬಳಿಗಾರ ಹೇಳಿದರು.
ಅವರು, ಶುಕ್ರವಾರದಂದು ಸಂಜೆ ನಗರದ ಆಕ್ಸಫರ್ಡ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನವನ್ನು ಉದ್ಘಾಟಿಸಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡುತ್ತಿದ್ದರು.
ಮಕ್ಕಳಿಗೆ ಗುಣಮಟ್ಟದ ಶಿಕ್ಷಣದೊಂದಿಗೆ ಉತ್ತಮ ಸಂಸ್ಕಾರ ನೀಡಿ, ಅವರನ್ನು ಸಮಾಜದ ಉನ್ನತ ವ್ಯಕ್ತಿಗಳನ್ನಾಗಿ ಮಾಡಬೇಕು. ಇಂದಿನ ಯಾಂತ್ರಿಕ ಯುಗದಲ್ಲಿ ಅವರನ್ನು ರಾಷ್ಟ್ರ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರತಿಭಾನ್ವಿತರಾಗಿ ಮಾಡಲು ತಮ್ಮ ಹೆಚ್ಚಿನ ಸಮಯವನ್ನು ಅವರ ಶಿಕ್ಷಣದತ್ತ ಗಮನಹರಿಸಬೇಕು. ಮಕ್ಕಳು ಕೇಳುವ ಕುತುಹಲಕಾರಿ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಿ ಅವರ ಜ್ಞಾನ ಮಟ್ಟವನ್ನು ಹೆಚ್ಚಿಸಬೇಕೆಂದು ಹೇಳಿದರು.
ವೇದಿಕೆಯ ಮೇಲೆ ನಗರಸಭೆ ಪೌರಾಯುಕ್ತ ಎಮ್ ಎಚ್ ಅತ್ತಾರ, ಉಪ ನೊಂದಣಾಧಿಕಾರಿ ಕೆ ಎಮ್ ಮಾಲವಾಡಿ, ಲಯನ್ ಸಂಸ್ಥೆಯ ಜಿ ಎಸ್ ಸಿದ್ಧಾಪೂರಮಠ, ಶಾಲೆಯ ಕಾರ್ಯದರ್ಶಿ ಎ ಎಸ್ ಭಜಂತ್ರಿ, ಪ್ರಾಚಾರ್ಯೆ ಜೆ ಎ ಭಜಂತ್ರಿ, ಶಾಲಾ ಸುಧಾರಣಾ ಸಲಹಾ ಸಮೀತಿಯ ಅಧ್ಯಕ್ಷ ಭೀಮಶಿ ಭರಮನ್ನವರ, ಪದಾಧಿಕಾರಿಗಳಾದ ಶರ್ಫುದ್ದಿನ್ ಹುಸೇನಸಾಬ, ಕೃಷ್ಣಪ್ಪ ಮುಳಗುಂದ, ಕೆಂಪಣ್ಣ ಪಾತ್ರೂಟ, ಪ್ರಶಾಂತ ಸೋಪಿನಮಠ, ವಿಠ್ಠಲ ಮುರ್ಕಿಭಾವಿ, ಪ್ರತಾಪ ಕುಲಕರ್ಣಿ, ಅಬಿಬುಲ್ಲಾ ಚಪ್ಪು, ಮುತ್ತೆಪ್ಪ ಪಾಟೀಲ ಇದ್ದರು.
ಮಕ್ಕಳಿಂದ ಸಾಂಸ್ಕಂತಿಕ ಕಾರ್ಯಕ್ರಮ ಜರುಗಿದವು. ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.

Related posts: