RNI NO. KARKAN/2006/27779|Wednesday, November 6, 2024
You are here: Home » breaking news » ಗೋಕಾಕ:ಇಂದಿನ ದಿನಗಳಲ್ಲಿ ರೈತರು ಮಣ್ಣು ಮತ್ತು ನೀರನ್ನು ಸಂರಕ್ಷಣೆ ಮಾಡಬೇಕು : ಬಾಳಪ್ಪಾ ಬೆಳಕೂಡ

ಗೋಕಾಕ:ಇಂದಿನ ದಿನಗಳಲ್ಲಿ ರೈತರು ಮಣ್ಣು ಮತ್ತು ನೀರನ್ನು ಸಂರಕ್ಷಣೆ ಮಾಡಬೇಕು : ಬಾಳಪ್ಪಾ ಬೆಳಕೂಡ 

ಇಂದಿನ ದಿನಗಳಲ್ಲಿ ರೈತರು ಮಣ್ಣು ಮತ್ತು ನೀರನ್ನು ಸಂರಕ್ಷಣೆ ಮಾಡಬೇಕು : ಬಾಳಪ್ಪಾ ಬೆಳಕೂಡ

ಗೋಕಾಕ ಡಿ 24 : ಇಂದಿನ ದಿನಗಳಲ್ಲಿ ರೈತರು ಮಣ್ಣು ಮತ್ತು ನೀರನ್ನು ಸಂರಕ್ಷಣೆ ಮಾಡಬೇಕು ಅಲ್ಲದೆ ರಾಸಾಯನಿಕ ಹಾಗೂ ಕೀಟನಾಶಕಗಳನ್ನು ಕಡಿಮೆ ಮಾಡಿ ಮಣ್ಣು ಮತ್ತು ಪರಿಸರವನ್ನು ಕಾಪಾಡಿ ಮುಂದಿನ ಪೀಳಿಗೆಗೆ ಅನೂಕುಲ ಮಾಡಿಕೊಡಬೇಕು ಎಂದು ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ರಾಜ್ಯ ಪ್ರತಿನಿಧಿ ಬಾಳಪ್ಪಾ ಬೆಳಕೂಡ ಹೇಳಿದರು.
ಅವರು ರವಿವಾರದಂದು ಇಲ್ಲಿಯ ಎಪಿಎಂಸಿ ಸಭಾಭವನದಲ್ಲಿ ಕೃಷಿ ಇಲಾಖೆ ಮತ್ತು ಕೃಷಿಕ ಸಮಾಜ ಇವರ ಸಂಯುಕ್ತ ಆಶ್ರಯದಲ್ಲಿ ಮಾಜಿ ಪ್ರಧಾನಿ ಚೌಧರಿ ಚರಣ ಸಿಂಗ್ ರವರ ಹುಟ್ಟು ಹಬ್ಬದ ಅಂಗವಾಗಿ ರಾಷ್ಟ್ರವ್ಯಾಪ್ತಿ ಆಚರಿಸಲ್ಪಡುವ ರೈತ ದಿನಾಚರಣೆ ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ರೈತರು ಕೇವಲ ಒಂದೇ ಬೆಳೆಯನ್ನು ಬೆಳೆಯದೇ ಒಂದಕ್ಕಿಂತ ಹೆಚ್ಚು ಬೆಳೆಗಳನ್ನು ಬೆಳೆದು ತಮ್ಮ ಆರ್ಥಿಕ ಮಟ್ಟವನ್ನು ಹೆಚ್ಚಿಸಿಕೊಳ್ಳಬೇಕೆಂದು ಹೇಳಿದರು.
ತಾಲೂಕ ಸಹಾಯಕ ಕೃಷಿ ನಿರ್ದೇಶಕ ಎಂ.ಎಂ. ನದಾಫ ಮಾತನಾಡಿ ಮಾಜಿ ಪ್ರಧಾನಿ ಚೌಧರಿ ಚರಣಸಿಂಗ ರವರು ರೈತರ ಕಷ್ಟಗಳಿಗೆ ಪರಿಹಾರ ನೀಡಿರುವದಲ್ಲದೆ ಕೃಷಿ ಉತ್ಪನ್ ಮಾರುಕಟ್ಟೆಗಳ ಸ್ಥಾಪನೆ ಮಾಡಿದರಲ್ಲದೆ ಜಮೀನ್ದಾರಿ ಪದ್ಧತಿಯನ್ನು ರದ್ದು ಪಡಿಸಿ ರೈತ ಪರ ಕಾಳಜಿ ಹೊಂದಿದ್ದರು ಎಂದು ಹೇಳಿದರು.
ಜಿ.ಪಂ ಸದಸ್ಯ ಹಾಗೂ ಸ್ಥಾಯಿ ಸಮೀತಿ ಸದಸ್ಯ ಗೋವಿಂದ ಕೊಪ್ಪದ ರೈತರನ್ನು ಉದ್ದೇಶಿಸಿ ಸರ್ಕಾರದಿಂದ ಸಾಕಷ್ಟು ಸಹಾಯಧನ ಕೊಟ್ಟರೂ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ತುಂಬಾ ನೋವಿನ ಸಂಗತಿ ಎಂದರು. ರೈತರು ಸಾಲಮನ್ನಾಕ್ಕಿಂತಲೂ ಬೆಳೆದ ಬೆಳೆಗಳಿಗೆ ಯೋಗ್ಯ ಬೆಲೆ ಪಡೆಯುವುದಕ್ಕಾಗಿ ಹೋರಾಟ ಮಾಡಬೇಕು. ರೈತರು ವೈಜ್ಞಾನಿಕವಾಗಿ ಕೃಷಿಯನ್ನು ಮಾಡಿದರೆ ಹೆಚ್ಚಿನ ಆದಾಯ ಪಡೆಯಲು ಸಾಧ್ಯ ಎಂದರು.
ಕೃಷಿ ವಿಜ್ಞಾನಿ ಡಾ| ಕಾಚಾಪೂರ ಹಾಗೂ ಬಡ್ರ್ಸ ಕೃಷಿ ವಿಜ್ಞಾನ ಕೇಂದ್ರ ತುಕ್ಕಾನಟ್ಟಿಯ ವಿಜ್ಞಾನಿ ಎನ್. ಆರ್.ಸಾಲಿಮಠವರು ಮಣ್ಣಿನ ಮಹತ್ವ, ಮಣ್ಣು ಪರೀಕ್ಷೆ ಹಾಗೂ ಮಣ್ಣಿನಲ್ಲಿ ಲಬ್ಯವಿರುವ ಪೋಶಕಾಂಶಗಳ ಕುರಿತು ವಿವರವಾಗಿ ರೈತರಿಗೆ ತಿಳಿಸಿದರು. ಎಪಿಎಂಸಿ ಅದ್ಯಕ್ಷ ಅಡಿವೆಪ್ಪ ಕಿತ್ತೂರ ಅಧ್ಯಕ್ಷತೆ ವಹಿಸಿದ್ದರು.
ಇದೇ ಸಂದರ್ಭದಲ್ಲಿ ವಿವಿಧ ಕೃಷಿ ಚಟುವಟಿಕೆಗಳಲ್ಲಿ ಸಾಧನೆಗೈದ ತಾಲೂಕಿನ 9 ಜನ ಪ್ರಗತಿಪರ ರೈತರನ್ನು ಗುರುತಿಸಿ ಇಲಾಖೆಯಿಂದ ಸನ್ಮಾನಿಸಲಾಯಿತು.
ಪ್ರಗತಿಪರ ರೈತರಾದ ಶಿವನಗೌಡ ಪಾಟೀಲ, ರಾಮಚಂದ್ರ ಲಗಳಿ, ಸುರೇಶ ಅಳಗುಂಡಿ ಅನಿಸಿಕೆ ವ್ಯಕ್ತ ಪಡಿಸಿದರು. ಕೃಷಿ ಅಧಿಕಾರಿ ಲೀಲಾ ಕೌಜಗೇರಿ ಸ್ವಾಗತಿಸಿದರು. ಛಾಯಾ ಪಾಟೀಲ ನಿರೂಪಿಸಿದರು. ಶೈಲಜಾ ಬೆಳ್ಳಂಕಿಮಠ ವಂದಿಸಿದರು. ಕೃಷಿ ಇಲಾಖೆಯ ಕೃಷಿ ಅಧಿಕಾರಿಗಳು, ಸಹಾಯಕ ಕೃಷಿ ಅಧಿಕಾರಿಗಳು, ಆತ್ಮ ಸಿಬ್ಬಂದಿ ಹಾಗೂ ಅನುವುಗಾರರು ಇದ್ದರು.

Related posts: