ಗೋಕಾಕ:ಏಸು ಕ್ರಿಸ್ತನ ತತ್ವಾದರ್ಶಗಳು ಇಂದಿಗೂ ಪ್ರಸ್ತುತ : ನಾಗಪ್ಪ ಶೇಖರಗೋಳ
ಏಸು ಕ್ರಿಸ್ತನ ತತ್ವಾದರ್ಶಗಳು ಇಂದಿಗೂ ಪ್ರಸ್ತುತ : ನಾಗಪ್ಪ ಶೇಖರಗೋಳ
ಗೋಕಾಕ ಡಿ 25 : ದೇವರನ್ನು ಪೂರ್ಣ ಮನಸ್ಸಿನಿಂದ ಆತ್ಮ ಹಾಗೂ ಸತ್ಯದಿಂದ ಆರಾಧಿಸುವ ಏಸು ಕ್ರಿಸ್ತನ ತತ್ವಾದರ್ಶಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಯುವ ಧುರೀಣ ನಾಗಪ್ಪ ಶೇಖರಗೋಳ ಹೇಳಿದರು.
ಇಲ್ಲಿಯ ಎನ್‍ಎಸ್‍ಎಫ್ ಅತಿಥಿ ಗೃಹದಲ್ಲಿ ತಾಲೂಕಾ ಕ್ರೈಸ್ತ ಸಮುದಾಯ ಟ್ರಸ್ಟ್ ಹಮ್ಮಿಕೊಂಡಿದ್ದ ಕ್ರಿಸ್‍ಮಸ್ ಹಬ್ಬದಲ್ಲಿ ಕೇಕ್ ಕತ್ತರಿಸಿ ಅವರು ಮಾತನಾಡಿದರು.
ಜಗತ್ತು ಸುಂದರವಾಗಿ ಕಂಡಾಗ ಮಾತ್ರ ಪ್ರತಿ ಮನುಕುಲ ದೈವಿಸ್ವರೂಪಿಯಾಗುತ್ತದೆ. ಜಾತಿ-ಮತ-ಪಂಥಗಳ ಯಾವ ಬೇಧಭಾವವಿಲ್ಲದೇ ಆಚರಿಸುವ ಕ್ರಿಸ್‍ಮಸ್ ಹಬ್ಬವು ಶಾಂತಿ, ಪ್ರೀತಿ ಹಾಗೂ ಏಕತೆಯ ಸಂಕೇತವಾಗಿದೆ. ಪ್ರಪಂಚದಲ್ಲಿಯೇ ಕ್ರೈಸ್ತ ಧರ್ಮ ಶ್ರೇಷ್ಠ ಧರ್ಮವಾಗಿದೆ ಎಂದು ಶೇಖರಗೋಳ ಹೇಳಿದರು.
ಟ್ರಸ್ಟ್ ಗೌರವಾಧ್ಯಕ್ಷ ಎಬಿನೇಜರ್ ಕರಬನ್ನವರ ಪ್ರಾಸ್ತಾವಿಕವಾಗಿ ಮಾತನಾಡಿ, ಶಾಸಕ ಬಾಲಚಂದ್ರ ಜಾರಕಿಹೊಳಿ ಮತ್ತು ಅವರ ಸಹೋದರರಿಗೆ ಇನ್ನೂ ಹೆಚ್ಚಿನ ಉನ್ನತ ಅಧಿಕಾರ, ಆಯುರಾರೋಗ್ಯ ಭಾಗ್ಯ ಕರುಣಿಸಲಿ ಎಂದು ಏಸುವಿನಲ್ಲಿ ಪ್ರಾರ್ಥಿಸಿದರು.
ಕ್ರಿಸ್‍ಮಸ್ ಹಬ್ಬದ ಪ್ರಯುಕ್ತ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಪರವಾಗಿ ಶೇಖರಗೋಳ ಅವರು ಕೇಕ್ ಕತ್ತರಿಸಿ ಸಮಾಜ ಬಾಂಧವರಿಗೆ ಕ್ರಿಸಮಸ್ ಹಬ್ಬದ ಶುಭಾಷಯ ಕೋರಿದರು.
ಘಟಪ್ರಭಾ ಯೋಜನಾ ಮಟ್ಟದ ನೀರು ಬಳಕೆದಾರರ ಮಹಾಮಂಡಳದ ಅಧ್ಯಕ್ಷ ಅಶೋಕ ಖಂಡ್ರಟ್ಟಿ, ಎನ್‍ಎಸ್‍ಎಫ್ ಅತಿಥಿ ಗೃಹದ ನಿಂಗಪ್ಪ ಕುರಬೇಟ, ಗುತ್ತಿಗೆದಾರರಾದ ಬಾಳಪ್ಪ ಗೌಡರ, ಮಹಾದೇವ ಹಾರೂಗೇರಿ, ಉದ್ದಪ್ಪ ಪಡದಲ್ಲಿ ಮುಂತಾದವರು ಉಪಸ್ಥಿತರಿದ್ದರು.
ಪೌಲ್ ವೇದ ಪಾರಾಯಣ ಮಾಡಿದರು. ಥಾಮಸ್ ಪ್ರಾರ್ಥಿಸಿದರು. ರೇ.ಅಬ್ರಾಹಿಂ ಅಂತ್ಯಾಶೀರ್ವಾದ ಮಾಡಿದರು.
ಗೋಕಾಕ ತಾಲೂಕಿನ ಎಲ್ಲ ಸಭಾ ಪಾಲಕರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.