ಬೆಳಗಾವಿ:ಸಚಿವರ ಕಾಲಿಗೆ ಬಿದ್ದು ನಮಸ್ಕರಿಸಿ ಚರ್ಚೆಗೆ ಗ್ರಾಸವಾದ ಬೆಳಗಾವಿ ಮೇಯರ್
ಸಚಿವರ ಕಾಲಿಗೆ ಬಿದ್ದು ನಮಸ್ಕರಿಸಿ ಚರ್ಚೆಗೆ ಗ್ರಾಸವಾದ ಬೆಳಗಾವಿ ಮೇಯರ್
ಬೆಳಗಾವಿ ಡಿ 25 : ಸಂಪುಟ ದರ್ಜೆ ಸಚಿವರಾಗಿ ಮೊದಲ ಭಾರಿ ಬೆಳಗಾವಿ ನಗರಕ್ಕೆ ಆಗಮಿಸಿದ ನೂತನ ಸಚಿವ ಸತೀಶ ಜಾರಕಿಹೊಳಿ ಆವರ ಕಾಲಿಗೆ ಬಿದ್ದು ನಮಸ್ಕರಿಸಿದ ಬೆಳಗಾವಿ ಮೇಯರ್ ಸಾರ್ವಜನಿಕರ ಚರ್ಚೆಗೆ ಎಡೆಮಾಡಿಕೊಟ್ಟಿದ್ದಾರೆ
ನಗರದ ಚೆನ್ನಮ್ಮ ವೃತ್ತದಲ್ಲಿ ಪ್ರಥಮ ಪ್ರಜೆ ಮೇಯರ್ ಬಸಪ್ಪ ಚಿಕ್ಕಲದಿನ್ನಿ ಸಾರ್ವಜನಿಕವಾಗಿಯೇ ಸತೀಶ್ ಜಾರಕಿಹೊಳಿ ಕಾಲಿಗೆ ಬಿದ್ದು ನಮಸ್ಕರಿಸಿದ್ದಾರೆ.
ಜೊತೆಗೆ ಮೇಯರ್ ಸೇವಕ ಕೂಡ ಜಾರಕಿಹೊಳಿ ಕಾಲಿಗೆ ಬಿದ್ದಿದ್ದು ಚರ್ಚೆಗೆ ಕಾರಣವಾಗಿದೆ. ಜಾರಕಿಹೊಳಿ ಮತ್ತುಬಸಪ್ಪ ಅವರ ಮಧ್ಯೆ ಎಷ್ಟೇ ಆತ್ಮೀಯತೆ ಇದ್ದರೂ , ಬಸಪ್ಪ ಅವರ ಹುದ್ದೆಯಿಂದ ಅವರನ್ನು ನಾಡಿನ ಮೊದಲ ಪ್ರಜೆ ಎಂದು ಕರೆಯಲಾಗುತ್ತದೆ. ಹುದ್ದೆಯ ಗೌರವ ಮರೆತು ಈ ರೀತಿ ಕಾಲಿಗೆ ಬಿದ್ದಿದ್ದು , ಸರಿಯಲ್ಲ ಎಂಬ ಮಾತು ಕೇಳಿಬರುತ್ತಿದೆ.
ನಗರದಲ್ಲಿ ರಾಷ್ಟ್ರಪತಿ, ರಾಜ್ಯಪಾಲ ಹುದ್ದೆಯಷ್ಟೇ ಗೌರವ ಮೇಯರ್ ಹುದ್ದೆಗಿರುತ್ತದೆ. ಬಸಪ್ಪ ಚಿಕ್ಕಲದಿನ್ನಿ ಮೇಯರ್ ಹುದ್ದೆಗೆ ಅಪಮಾನ ಮಾಡಿದ್ದಾರೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿವೆ.