RNI NO. KARKAN/2006/27779|Monday, September 16, 2024
You are here: Home » breaking news » ಗೋಕಾಕ:ರಾಷ್ಟ್ರದ ಉನ್ನತಿ ಮತ್ತು ಪ್ರಗತಿಯಲ್ಲಿ ವಾಜಪೇಯಿ ಅವರ ಪಾತ್ರ ಹಿರಿದಾಗಿತ್ತು : ಬಸಗೌಡ ಪಾಟೀಲ

ಗೋಕಾಕ:ರಾಷ್ಟ್ರದ ಉನ್ನತಿ ಮತ್ತು ಪ್ರಗತಿಯಲ್ಲಿ ವಾಜಪೇಯಿ ಅವರ ಪಾತ್ರ ಹಿರಿದಾಗಿತ್ತು : ಬಸಗೌಡ ಪಾಟೀಲ 

ರಾಷ್ಟ್ರದ ಉನ್ನತಿ ಮತ್ತು ಪ್ರಗತಿಯಲ್ಲಿ ವಾಜಪೇಯಿ ಅವರ ಪಾತ್ರ ಹಿರಿದಾಗಿತ್ತು : ಬಸಗೌಡ ಪಾಟೀಲ

ಗೋಕಾಕ ಡಿ 25 : ರಾಷ್ಟ್ರದ ಸರ್ವತೋಮುಖ ಅಭಿವೃದ್ಧಿಯಲ್ಲಿ ಮಾಜಿ ಪ್ರಧಾನಿ ದಿ.ಅಟಲ್ ಬಿಹಾರಿ ವಾಜಪೇಯಿ ಅವರ ಪಾತ್ರ ಗಣನೀಯವೆಂದು ಜಿಲ್ಲಾ ಸಹಕಾರಿ ಯುನಿಯನ್ ಅಧ್ಯಕ್ಷ ಬಸಗೌಡ ಪಾಟೀಲ(ಮೆಳವಂಕಿ) ಹೇಳಿದರು.
ಇಲ್ಲಿಯ ಎನ್‍ಎಸ್‍ಎಫ್ ಅತಿಥಿ ಗೃಹದಲ್ಲಿ ಅರಭಾವಿ ಮಂಡಲ ಬಿಜೆಪಿ ಮಂಗಳವಾರದಂದು ಹಮ್ಮಿಕೊಂಡಿದ್ದ ಭಾರತರತ್ನ ಅಟಲ್ ಬಿಹಾರಿ ವಾಜಪೇಯಿ ಅವರ 94ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ದಿ. ವಾಜಪೇಯಿ ಅವರು ದೇಶದ ಪ್ರಧಾನಿಯಾಗಿದ್ದ ಅವಧಿಯಲ್ಲಿ ಭಾರತ ದೇಶ ವಿಶ್ವದಲ್ಲಿಯೇ ಬಲಾಢ್ಯ ರಾಷ್ಟ್ರವಾಗಿತ್ತು. ರಾಷ್ಟ್ರದ ಉನ್ನತಿ ಮತ್ತು ಪ್ರಗತಿಯಲ್ಲಿ ವಾಜಪೇಯಿ ಅವರ ಪಾತ್ರ ಹಿರಿದಾಗಿತ್ತು. ವಾಜಪೇಯಿ ಅವರು, ಕೇವಲ ರಾಜಕಾರಣಿಯಾಗಿರದೇ ಉತ್ತಮ ಕವಿಯಾಗಿದ್ದರು. ಅತ್ಯುತ್ತಮ ವಾಗ್ಮಿಯಾಗಿದ್ದ ಇವರು ಬಹುಮುಖ ಪ್ರತಿಭೆಯುಳ್ಳ ಮಹಾನ್ ಮೇಧಾವಿ ರಾಷ್ಟ್ರ ಭಕ್ತರಾಗಿದ್ದರೆಂದು ಶ್ಲಾಘಿಸಿದರು.
ಗೋಕಾಕ ಟಿಎಪಿಸಿಎಂಎಸ್ ನಿರ್ದೇಶಕ ಅಶೋಕ ನಾಯಿಕ ಮಾತನಾಡಿ, ದಿ. ವಾಜಪೇಯಿ ಅವರಂತೆಯೇ ಈಗಿನ ಪ್ರಧಾನಿ ನರೇಂದ್ರ ಮೋದಿಯವರು ರಾಷ್ಟ್ರದ ಸರ್ವಾಂಗೀಣ ವಿಕಾಸಕ್ಕೆ ಹಗಲಿರುಳು ದುಡಿಯುತ್ತಿದ್ದಾರೆ. ವಾಜಪೇಯಿ ಅವರ ಹಾದಿಯಲ್ಲಿ ಸಾಗಿರುವ ಮೋದಿ ಅವರು, ಮತ್ತೊಂದು ಅವಧಿಗೆ ಪ್ರಧಾನಿಯಾಗುವರೆಂದು ವಿಶ್ವಾಸ ವ್ಯಕ್ತಪಡಿಸಿದರು.
ಯುವ ಧುರೀಣ ನಾಗಪ್ಪ ಶೇಖರಗೋಳ ಅವರು, ಅಜಾತಶತ್ರು, ದಿ. ಅಟಲ್ ಬಿಹಾರಿ ವಾಜಪೇಯಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.
ದಲಿತ ಸಂಘಟನೆಯ ಮುಖಂಡ ಲಕ್ಷ್ಮಣ ತೆಳಗಡೆ, ರೈತ ಸಂಘಟನೆಯ ಧುರೀಣ ಗಣಪತಿ ಈಳಿಗೇರ, ಎನ್‍ಎಸ್‍ಎಫ್ ಅತಿಥಿ ಗೃಹದ ನಿಂಗಪ್ಪ ಕುರಬೇಟ, ಲಕ್ಕಪ್ಪ ಲೋಕುರಿ, ಚನ್ನಮಲ್ಲಿಕಾರ್ಜುನ ಯಕ್ಷಂಬಿ, ಪಿ.ಶಿವಪ್ಪ, ಅರಭಾವಿ ಪಪಂ ಸದಸ್ಯ ಕುಮಾರ ಪೂಜೇರಿ, ಗುತ್ತಿಗೆದಾರ ಪಾಂಡುರಂಗ ಪಾಟೀಲ, ರಾಮಸ್ವಾಮಿ ಗದಾಡಿ, ಮಾರುತಿ ಹರಿಜನ, ನಾಗಪ್ಪ ಮಾದರ, ಬಿಜೆಪಿ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Related posts: