ಗೋಕಾಕ:ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಸೂಲಗಿತ್ತಿ ನರಸಮ್ಮ ನಿಧನಕ್ಕೆ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ತೀವ್ರ ಸಂತಾಪ
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಸೂಲಗಿತ್ತಿ ನರಸಮ್ಮ ನಿಧನಕ್ಕೆ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ತೀವ್ರ ಸಂತಾಪ
ಬೆಟಗೇರಿ ಡಿ 25 : ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಸೂಲಗಿತ್ತಿ ನರಸಮ್ಮ ನಿಧನಕ್ಕೆ ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ತೀವ್ರ ಸಂತಾಪ ಶೋಕ ವ್ಯಕ್ತಪಡಿಸಿದ್ದಾರೆ.
ಗ್ರಾಮದ ಅಂಗನವಾಡಿಯಲ್ಲಿ ಮಂಗಳವಾರದಂದು ಸೂಲಗಿತ್ತಿ ನರಸಮ್ಮ ಅವರ ನಿಧನದ ಹಿನ್ನಲೆಯಲ್ಲಿ ಒಂದು ನಿಮಿಷ ಮೌನ ಆಚರಣೆ ಕಾರ್ಯಕ್ರಮ ನಡೆದ ಬಳಿಕ ಸ್ಥಳೀಯ ಅಂಗನವಾಡಿ ಕಾರ್ಯಕರ್ತೆ ಶೋಭಾ ವೀರ್ಣೆಕರ ಮಾತನಾಡಿ, ಗ್ರಾಮೀಣ ವಲಯದ ಬಡ ಕುಟುಂಬದ ಸ್ತ್ರೀಯರಿಗೆ ನಿಸ್ವಾರ್ಥ ಸೇವೆಯ ಹೆರಿಗೆ ಮಾಡಿಸಲು ನರಸಮ್ಮನವರ ಹಗಲಿರುಳು ಪ್ರಯತ್ನಿಸಿ, ಸಾವಿರಾರು ಹೆರಿಗೆ ಮಾಡಿಸಿದ್ದಾರೆ. ಸೂಲಗಿತ್ತಿ ನರಸಮ್ಮ ಅವರ ನಿಸ್ವಾರ್ಥ ಸಾಮಾಜಿಕ ಸೇವೆಯ ಆದರ್ಶಗಳು ಶ್ಲಾಘನೀಯವಾಗಿವೆ ಎಂದರು.
ಕಸ್ತೂರಿ ಕಂಬಾರ, ಪ್ರಭಾವತಿ ಮಲ್ಲಾಪೂರ, ಪಾರ್ವತಿ ಭಜಂತ್ರಿ, ಭಾಗವ್ವ ಕೋಣಿ, ಲಕ್ಷ್ಮೀ ಬಳಿಗಾರ, ಅಚಿಜನಾ ಬಡಿಗೇರ, ಸಕುಬಾಯಿ ಕಂಬಾರ, ಮಾಲಾ ದೇಯಣ್ಣವರ, ಬಾಳವ್ವ ಚಂದರಗಿ, ಶೋಭಾ ಮುಧೋಳ, ವೀಣಾ ಪುರಂದರೆ, ಲಕ್ಷ್ಮೀಬಾಯಿ ವಡೇರ, ಭಾಗ್ಯಶ್ರೀ ಪಾಟೀಲ ಸೇರಿದಂತೆ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು, ಮಹಿಳೆಯರು, ಇತರರು ಇದ್ದರು.