RNI NO. KARKAN/2006/27779|Sunday, December 15, 2024
You are here: Home » breaking news » ಗೋಕಾಕ : ಪೌರ ಕಾರ್ಮಿಕರಿಗೆ ವಿದೇಶ ಅಧ್ಯಯನ ಭಾಗ್ಯ : ಸಚಿವರಿಂದ ಶುಭ ಹಾರೈಕೆ

ಗೋಕಾಕ : ಪೌರ ಕಾರ್ಮಿಕರಿಗೆ ವಿದೇಶ ಅಧ್ಯಯನ ಭಾಗ್ಯ : ಸಚಿವರಿಂದ ಶುಭ ಹಾರೈಕೆ 

ಗೋಕಾಕ ಪೌರ ಕಾರ್ಮಿಕರಿಗೆ ವಿದೇಶ ಅಧ್ಯಯನ ಭಾಗ್ಯ : ಸಚಿವರಿಂದ ಶುಭ ಹಾರೈಕೆ

ಗೋಕಾಕ ಜೂ 29: ಸರಕಾರದಿಂದ ಆಯೋಜನೆಗೊಂಡ ಪೌರ ಕಾರ್ಮಿಕರ ವಿದೇಶ ಅಧ್ಯಯನ ಪ್ರವಾಸಕ್ಕೆ ಗೋಕಾಕ ನಗರಸಭೆಯ ಪೌರ ಕಾರ್ಮಿಕರರಾದ ವಿಜಯ ಭಾಗನ್ನವರ , ನಾಗಪ್ಪ ಶಿಫ್ರೀ , ನಾಗರಾಜ ಕೊಂಚಿಕೋರವರ , ದಾನಿಯಲ ಕೋಲಾ ಅವರು ಆಯ್ಕೆಯಾಗಿದ್ದಾರೆ

ಜುಲೈ 4 ರಿಂದ 9 ರವರೆಗೆ ಸಿಂಗಾಪುರ ದೇಶಕ್ಕೆ ಅಧ್ಯಯನ ಪ್ರವಾಸಕ್ಕೆ ತೆರಳುತ್ತಿರುವ ಸದರಿ ಪೌರ ಕಾರ್ಮಿಕರಿಗೆ ಇಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು ತಮ್ಮ ಗೃಹ ಕಛೇರಿಯಲ್ಲಿ ಕರೆಯಿಸಿಕೊಂಡು ಅವರಿಗೆ ಸತ್ಕರಿಸಿ ಶುಭ ಹಾರೈಸಿದರು

ಈ ಸಂದರ್ಭದಲ್ಲಿ ನಗರಸಭೆ ಹಿರಿಯ ಸದಸ್ಯ ಎಸ್.ಎ.ಕೋತವಾಲ , ಜಿ.ಪಂ ಸದಸ್ಯರಾದ ಟಿ.ಆರ್.ಕಾಗಲ , ಮಡೆಪ್ಪಾ ತೋಳಿನವರ , ಎಪಿಎಂಸಿ ನಿರ್ದೇಶಕ ಬಸವರಾಜ ಸಾಯನ್ನವರ , ನಗರಸಭೆ ಅಧಿಕಾರಿಗಳಾದ ಎಂ.ಎಚ್.ಅತ್ತಾರ , ರವಿ ರಂಗಸುಭೆ , ತಾಂಬೋಳೆ , ಗಜಾಕೋಶ , ಕೋಳಿ , ತಡಸಲೂರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು

Related posts: