ಮೂಡಲಗಿ:ದೈಹಿಕವಾಗಿ ಮಾನಸಿಕ ಸದೃಢರಾಗಲು ಸದಾ ಸಾತ್ವಿಕ ಆಹಾರ ಸೇವನೆ ಮಾಡಬೇಕು : ಕರಿಬಸವರಾಜು
ದೈಹಿಕವಾಗಿ ಮಾನಸಿಕ ಸದೃಢರಾಗಲು ಸದಾ ಸಾತ್ವಿಕ ಆಹಾರ ಸೇವನೆ ಮಾಡಬೇಕು : ಕರಿಬಸವರಾಜು
ಮೂಡಲಗಿ ಡಿ 28 : ದೈಹಿಕವಾಗಿ ಮಾನಸಿಕ ಸದೃಢರಾಗಲು ಸದಾ ಸಾತ್ವಿಕ ಆಹಾರ ಸೇವನೆ ಮಾಡಬೇಕು ಅದರ ಜೊತೆಯಲ್ಲಿ ದೃಢಕಾರ ಶರೀರ ಹೊಂದಲು ರಾಗಿ ಅಂತಹ ದ್ರವ ರೂಪದ ಆಹಾರ ಸೇವನೆಯಿಂದ ಅನಾರೋಗ್ಯಕ್ಕೆ ಮುಕ್ತಿ ಕಾಣಲು ಸಾದ್ಯ ಎಂದು ಮೂಡಲಗಿ ಬಿ.ಇ.ಒ ಕಛೇರಿಯ ಇ.ಸಿ.ಒ ಟಿ ಕರಿಬಸವರಾಜು ಅಭಿಪ್ರಾಯಪಟ್ಟರು.
ಅವರು ಗುರುವಾರದಂದು ನಗರದ ಸರಕಾರಿ ಕನ್ನಡ ಗಂಡು ಮತ್ತು ಹೆಣ್ಣು ಮಕ್ಕಳ ಶಾಲೆಯಲ್ಲಿ ಶ್ರೀ ಸಾಯಿ ಸೇವಾ ಸಮಿತಿ ಹಾಗೂ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತನ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಮಕ್ಕಳಿಗೆ ಉಚಿತ ಸಾಯಿ ಪ್ರೋಟಿನ್ ರಾಗಿ ಅಂಬಲಿ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಆರೋಗ್ಯವಂತ ಶರೀರ ಹೊಂದಲು ಸಸ್ಯಹಾರ ಜೊತೆಯಲ್ಲಿ ಅತೀ ಹೆಚ್ಚು ಪ್ರೋಟಿನ್ ಅಂಶಗಳುಳ್ಳ ಆಹಾರ ಸೇವನೆ ಮಾಡಬೇಕು. ವಿದ್ಯಾರ್ಥಿಗಳಿಗೆ ಆಹಾರದ ಕ್ರಮ ಹಾಗೂ ಅದರಿಂದಾಗುವ ಪ್ರಯೋಜನಗಳ ಕುರಿತು ವಿವರಸ ಬೇಕು. ಮೂಡಲಗಿ ವಲಯ ವ್ಯಾಪ್ತಿಯ ಸದ್ಯ 7 ಸಿ ಆರ್ ಸಿ ಗಳಿಗೆ ಒಟ್ಟು 150 ಕೆ.ಜಿಯಷ್ಟು ರಾಗಿಯ ಸಾಯಿ ಪ್ರೋಟಿನ್ ಕೊಟ್ಟಿದ್ದು ಸಮಿತಿ ಹಾಗೂ ಪರಿಷತ್ ಕೈಗೊಂಡಿರುವ ಕಾರ್ಯ ಮೆಚ್ಚುವಂತಹದಾಗಿದೆ ಎಂದು ಹೇಳಿದರು.
ಸಿ.ಎಮ್ ಹಂಜಿ ಮಾತನಾಡಿ, ಸಾಯಿ ಸೇವಾ ಸಮಿತಿ ಮೂಡಲಗಿಯಲ್ಲಿ ತನ್ನದೆಯಾದ ಧಾರ್ಮಿಕವಾಗಿ ಅಭ್ಯುದಯ ಹೊಂದುತ್ತಿರುವ ಸಂಸ್ಥೆಯಾಗಿದೆ. ಯಾವುದೇ ಸಾಮಾಜಿಕ ಕಟ್ಟಳೆಗಳಿರದೆ ಸೇವಾ ಮನೊಬಾವದಿಂದ ಎಲ್ಲರೂ ಸೇರಿ ಮಾಡುವಂತಹ ಕಾರ್ಯಕ್ರಮಗಳು ನಡೆಯುತ್ತಿದ್ದು ಇದರಲ್ಲಿ ಎಲ್ಲರೂ ಪಾಲ್ಗೊಂಡು ತನು ಮನ ದನ ಸಹಾಯದೊಂದಿಗೆ ಸಹಕರಿಸಿದ್ದಾರೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಸಾಹಿತ್ಯ ಪರೀಷತ್ ಅಧ್ಯಕ್ಷ ಎಸ್ ವಾಯ್ ದ್ಯಾಗಾನಟ್ಟಿ, ಸಾಯಿ ಸಮಿತಿಯ ಕೆ.ಆರ್ ಕೊತ್ತಲ, ಆರ್.ಎಮ್ ಮಹಾಲಿಂಗಪೂರ,ಎಸ್ಸಿ ಎಸ್ಟಿ ನೌಕರ ಸಂಘದ ಅಧ್ಯಕ್ಷ ಎ.ಪಿ ಪರಸನ್ನವರ, ಬಿ.ಆರ್.ಪಿಗಳಾದ ಕೆ.ಎಲ್.ಮೀಶಿ, ಬಿ.ಎಮ್ ನಂದಿ, ಐ.ಎ ಪಾಟೀಲ್, ಹನಮಂತ ಸೊರಗಾವಿ, ಭೀಮಶಿ ನಾಯಿಕ, ಎಸ್ ಜಿ ಮಿಲಾನಟ್ಟಿ, ರವಿ ನಂದಗಾವಿ, ವೀಣಾ ಗಾಡವಿ, ನಿರ್ಮಲಾ ವರ್ಲಿ, ಪ್ರಧಾನ ಗುರುಗಳಾದ ಮಹಾದೇವಿ ಕೊಣ್ಣೂರ, ಎಸ್.ವಿ ಕೋಪರ್ಡೆ ಹಾಗೂ ಶಾಲಾ ಶಿಕ್ಷಕ ಸಿಬ್ಬಂದಿ ವಿದ್ಯಾರ್ಥಿಗಳು ಹಾಜರಿದ್ದರು.