RNI NO. KARKAN/2006/27779|Friday, November 22, 2024
You are here: Home » breaking news » ಘಟಪ್ರಭಾ:ನಾಡು ಕಟ್ಟುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ : ಡಿಡಿಪಿಐ ಎಂ.ಜಿ.ದಾಸರ

ಘಟಪ್ರಭಾ:ನಾಡು ಕಟ್ಟುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ : ಡಿಡಿಪಿಐ ಎಂ.ಜಿ.ದಾಸರ 

ನಾಡು ಕಟ್ಟುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ : ಡಿಡಿಪಿಐ ಎಂ.ಜಿ.ದಾಸರ

ಘಟಪ್ರಭಾ ಡಿ 28 : ನಾಡು ಕಟ್ಟುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ ಎಂದು ಡಿಡಿಪಿಐ ಎಂ.ಜಿ.ದಾಸರ ಹೇಳಿದರು.
ಅವರು ಶುಕ್ರವಾರದಂದು ಇಲ್ಲಿಯ ಕರ್ನಾಟಕ ಆರೋಗ್ಯ ಧಾಮದ ಸಾಂಸ್ಕøತಿಕ ಭವನದಲ್ಲಿ ಭಾರತ ಸೇವಾದಳ ಜಿಲ್ಲಾ ಸಮಿತಿ ಚಿಕ್ಕೋಡಿ ಮತ್ತು ಬೆಳಗಾವಿ ಸಾರ್ವಜನಿಕ ಶಿಕ್ಷಣ ಇಲಾಖೆ ಸೇವಾದಳ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಹತ್ತು ದಿನಗಳವರೆಗೆ ನಡೆಯುವ ಜಿಲ್ಲಾ ಮಟ್ಟದ ಶಿಕ್ಷಕರ ಸಹಾಯಕ ಶಿಕ್ಷಣ ಶಿಬಿರದ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಶಿಕ್ಷಕರು ನಾಡು ಕಟ್ಟುವದರಲ್ಲಿ ನಿರತರಾದರೇ ಸೈನಿಕರು ಕಟ್ಟಿದ ನಾಡನ್ನು ಕಾಯುವಲ್ಲಿ ನಿರತರಾಗಿದ್ದಾರೆ. ಶಿಕ್ಷಕರು ವಿದ್ಯಾರ್ಥಿಗಳಲ್ಲಿ ರಾಷ್ಟ್ರ ಪ್ರೇಮ, ದೇಶ ಭಕ್ತಿ, ಶಿಸ್ತು, ಉತ್ತಮ ಸಂಸ್ಕಾರವನ್ನು ಬೆಳೆಸಿ ಸಮೃದ್ದಿ ಸಮಾಜವನ್ನು ನಿರ್ಮಾಣ ಮಾಡುವುದನ್ನು ಕಲಿಸಬೇಕು. ವೃತ್ತಿ,ವ್ಯಕ್ತಿ,ದೇಶದ ಬಗ್ಗೆ ಪ್ರೀತಿಯಿಂದ ಗೌರವಿಸಬೇಕು. ವೃತ್ತಿಯ ಜೊತೆಗೆ ದಕ್ಷತೆ ಕಾಪಾಡಿಕೊಳ್ಳಬೇಕು. ಶಿಕ್ಷಕ ರಾಷ್ಟ್ರವನ್ನು ಸಮೃದ್ಧವಾಗಿ ರೂಪಿಸುವ ಶಿಲ್ಪಿಯಾಗಿದ್ದಾನೆ. ಮಕ್ಕಳಿಗೆ ತಾಯಿಯೇ ಮೊದಲು ಗುರುವಾದರೇ,ವಿದ್ಯಾದಾನ ಮಾಡಿ ಜೀವನ ರೂಪಿಸುವ ಶಿಕ್ಷಕರು ಕೂಡಾ ಗುರುವಾಗಿದ್ದಾರೆ. ದೇಶಕ್ಕೆ ಅನ್ನ ನೀಡುವ ಅನ್ನದಾತನನ್ನು ಸ್ಮರಿಸಿ ಇವತ್ತು ನಾವು ಜೀವನ ಸಾಗಿಸಬೇಕಾಗಿದೆ. ರೈತ, ಸೈನಿಕ, ಶಿಕ್ಷಕ ದೇಶದ ಮೂರು ಆಧಾರ ಸ್ತಂಭವಾಗಿದ್ದಾರೆ ಎಂದರು.
ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಕೆಎಚ್‍ಐ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ| ಘನಶ್ಯಾಮ ವೈದ್ಯ ಅವರು ಡಾ| ನಾ.ಸು.ಹರ್ಡೀಕರ ಅವರು ಭಾರತ ಸೇವಾದಳದ ಸಂಸ್ಥಾಪಕರಾಗಿದ್ದು ಅವರಲ್ಲಿ ಶಿಸ್ತು ಮತ್ತು ಜನಸೇವೆಯೇ ಅವರ ಉಸಿರಾಗಿತ್ತು. ಶಿಕ್ಷಕರು ಮುಂದಿನ ಪೀಳಿಗೆಯ ಮಕ್ಕಳಿಗೆ ಶಿಸ್ತಿನ ಜೊತೆಗೆ ಸ್ವಚ್ಛತೆಯ ಹಾಗೂ ಉತ್ತಮ ಪರಿಸರ ಬಗ್ಗೆ ಅರಿವು ಮೂಡಿಸಿ ಅವರ ವಿದ್ಯಾರ್ಥಿ ಜೀವನವನ್ನು ಉಜ್ವಲಗೊಳಿಸಿಬೇಕೆಂದರು.
ಅಧ್ಯಕ್ಷತೆ ವಹಿಸಿದ್ದ ಹಿರಿಯ ಪತ್ರಕರ್ತ ಹಾಗೂ ಭಾರತ ಸೇವಾದಳದ ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾ ಅಧ್ಯಕ್ಷ ಪ್ರಕಾಶ ದೇಶಪಾಂಡೆ ಮಾತನಾಡಿ ಮಕ್ಕಳನ್ನು ಸಮಾಜಮುಖಿಗೆ ತರುವಂತಹ ಕಾರ್ಯ ಶಿಕ್ಷಕರು ಮಾಡಬೇಕು ಅವರಿಗೆ ರಾಷ್ಟ್ರ,ದೇಶ, ಧ್ವಜದ ಬಗ್ಗೆ ತಿಳಿಸಬೇಕು.ಮಕ್ಕಳಲ್ಲಿ ಕನ್ನಡತನದ ಬಗ್ಗೆ ಅರಿವು ಮೂಡಿಸಿ ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಎಂದರು.
ಈ ಸಂದರ್ಭದಲ್ಲಿ ಭಾರತ ಸೇವಾದಳದ ಕೇಂದ್ರ ಸಮಿತಿಯ ಸದಸ್ಯ ರಾಜೇಂದ್ರ ಮಾಳಗಿ, ಬಿಇಒಗಳಾದ ಜಿ.ಬಿ.ಬಳಿಗಾರ, ಅಜೀತ ಮನ್ನಿಕೇರಿ,ಎ.ಸಿ.ಗಂಗಾಧರ, ಡಾ| ಸ್ವಾತಿ ವೈದ್ಯ, ವಿಭಾಗ ಸಂಘಟಕರು,ಶಿಬಿರಾಧಿಪತಿ ಬಸವರಾಜ ಹಟ್ಟಿಗೌಡರ, ಎಸ್.ಎಚ್.ಗಿರಡ್ಡಿ, ವಿಜಯಕುಮಾರ ಸೋಲೆಗಾವಿ, ಬಿಆರ್‍ಸಿ ಮಾಳಗಿ,ಎಸ್.ಎಸ್.ಅಥಣಿ ಸೇರಿದಂತೆ ಇತರರು ಇದ್ದರು.
ಸಮಾರಂಭಕ್ಕಿಂತ ಪೂರ್ವದಲ್ಲಿ ಭಾರತ ಸೇವಾದಳದ ಸಂಸ್ಥಾಪಕರಾದ ದಿ.ಡಾ| ನಾ.ಸು.ಹರ್ಡೀಕರ ಅವರ ಸಮಾಧಿಗೆ ಗಣ್ಯರು ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಶಿಬಿರಾರ್ಥಿಗಳು ಉಪಸ್ಥಿತರಿದ್ದರು. ಚಿಕ್ಕೋಡಿ ಮತ್ತು ಬೆಳಗಾವಿ ಶೈಕ್ಷಣಿಕ ಜಿಲ್ಲೆಯ ನೂರಾರು ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು. ರಾಷ್ಟ್ರಗೀತೆಯೊಂದಿಗೆ ಸಮಾರಂಭವು ಮುಕ್ತಾಯಗೊಂಡಿತು.

Related posts: