RNI NO. KARKAN/2006/27779|Thursday, November 7, 2024
You are here: Home » breaking news » ಗೋಕಾಕ:ಪ್ರಥಮ ವಾರ್ಷಿಕೋತ್ಸವ ಹಾಗೂ ಇ-ಸ್ಟ್ಯಾಂಪಿಂಗ್ ಸೇವೆಯ ಉದ್ಘಾಟನೆ

ಗೋಕಾಕ:ಪ್ರಥಮ ವಾರ್ಷಿಕೋತ್ಸವ ಹಾಗೂ ಇ-ಸ್ಟ್ಯಾಂಪಿಂಗ್ ಸೇವೆಯ ಉದ್ಘಾಟನೆ 

ಪ್ರಥಮ ವಾರ್ಷಿಕೋತ್ಸವ ಹಾಗೂ ಇ-ಸ್ಟ್ಯಾಂಪಿಂಗ್ ಸೇವೆಯ ಉದ್ಘಾಟನೆ

ಬೆಟಗೇರಿ ಡಿ 29 : ಗ್ರಾಮೀಣ ವಲಯದ ಸಹಕಾರಿ ಸಂಘ-ಸಂಸ್ಥೆಗಳು ಸಮಗ್ರ ಪಗ್ರತಿ ಸಾಧಿಸಬೇಕಾದರೆ ಸ್ಥಳೀಯರ ಸಹಾಯ ಸಹಕಾರ ಅತ್ಯಂತ ಅಗತ್ಯ ಎಂದು ಯರಗಟ್ಟಿಯ ಬಸವೇಶ್ವರ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸೈಟಿ ಲಿ. ಪ್ರಧಾನ ಕಛೇರಿಯ ಆಡಳಿತ ಮಂಡಳಿ ಸಂಸ್ಥಾಪಕ ಅಧ್ಯಕ್ಷ ಎಮ್. ಎಸ್. ಹಾದಿಮನಿ ಹೇಳಿದರು.
ಅವರು, ಶನಿವಾರದಂದು ಯರಗಟ್ಟಿಯ ಬಸವೇಶ್ವರ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸೈಟಿ ಲಿ. ಇದರ ಸಮೀಪದ ಮಮದಾಪೂರ ಗ್ರಾಮದ ತೃತೀಯ ಶಾಖೆಯಲ್ಲಿ ನಡೆದ ಪ್ರಥಮ ವಾರ್ಷಿಕೋತ್ಸವ ಹಾಗೂ ಇ-ಸ್ಟ್ಯಾಂಪಿಂಗ್ ಸೇವೆಯ ಉದ್ಘಾಟನೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸ್ಥಳೀಯ ವೇದಮೂರ್ತಿ ಚರಮೂರ್ತೇಶ್ವರ ಸ್ವಾಮಿಜಿ ಮಹಾಲಕ್ಷ್ಮೀ ಪೂಜೆ ಹಾಗೂ ಸಹಕಾರಿ ಧುರೀಣ ಲಕ್ಷ್ಮಣ ಕೇತನ್ನವರ ಇವರಿಗೆ ಮೊದಲನೆ ಇ-ಸ್ಟಾಂಪ್ ವಿತರಣೆ ಮಾಡುವದರೊಂದಿಗೆ ಇ-ಸ್ಟಾಂಪ್ ಉದ್ಘಾಟನೆ ನೆರವೇರಿಸಿದರು. ಎಸ್. ಜಿ. ಪತ್ತಾರ, ಪಿ. ಬಿ. ತೇಣಗಿ, ಬಿ ಡಿ ಭೂಶನ್ನವರ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ಎಮ್ ಎಸ್ ಶೀಲವಂತರ, ಡಿ. ಎಮ್. ಅಂಗಡಿ, ಜಿ. ಎಮ್. ಶೆಟ್ಟರ, ಎಮ್ ಎಮ್ ತೋಟಗಿ, ಬಿ ಪಿ ಪಟ್ಟಣಶೆಟ್ಟಿ, ಎಸ್ ಎಮ್ ಹಾದಿಮನಿ, ಎಮ್.ಎಸ್ ಅರಳಿಮಟ್ಟಿ, ಎಸ್ ಎನ್ ಅರಳಿಮಟ್ಟಿ, ಎಮ್ ಎಸ್ ಹಿತ್ತಲಮನಿ, ಎಸ್ ಆರ್ ಕಮತ, ಎಲ್ ಆರ್ ಕೇತನ್ನವರ, ಆಯ್ ಬಿ ಮನ್ನಿಕೇರಿ, ಎಸ್ ಎಸ್ ಸೊಂಡೂರ, ಬಿ ಎಸ್ ಗಾಣಗಿ, ವಿ ಎಸ್ ಹಾದಿಮನಿ, ಸಿ ಎಮ್ ಗಾಣಗಿ, ಎಸ್ ಎಸ್ ದಯಣ್ಣವರ, ಎಸ್ ಎಮ್ ಪಟಗುಂದಿ, ಎಸ್ ಎಮ್ ಅರಳಿಮಟ್ಟಿ, ಎಮ್ ಬಿ ಹಾದಿಮನಿ, ಯರಗಟ್ಟಿ ಪ್ರಧಾನ ಕಛೇರಿಯ ಆಡಳಿತ ಮಂಡಳಿ ಸದಸ್ಯರು, ಮಮದಾಪೂರ ಶಾಖೆಯ ಸಲಹಾ ಸಮಿತಿ ಸದಸ್ಯರು, ಸ್ಥಳೀಯ ಹಾಗೂ ಸುತ್ತಲಿನ ಹಳ್ಳಿಗಳ ಗಣ್ಯರು, ಇತರರು ಇದ್ದರು.
ಪ್ರಧಾನ ಕಛೇರಿಯ ಪ್ರಭಾರ ವ್ಯವಸ್ಥಾಪಕ ಎಸ್ ಎಮ್ ಮಹಾಲಿಂಗಪೂರ ಸ್ವಾಗತಿಸಿದರು. ಮಮದಾಪೂರ ಶಾಖೆಯ ವ್ಯವಸ್ಥಾಪಕ ವಿಶ್ವನಾಥ ಬಾಚ್ಯಾಳ ನಿರೂಪಿಸಿದರು. ಕುಮಾರಿ ಎ ಎಸ್ ಪಟಾತ ವಂದಿಸಿದರು.

Related posts: