ಘಟಪ್ರಭಾ:ಯೋಗ ಶಾಸ್ತ್ರವನ್ನು ಅರಿತಕೊಂಡರೆ ಆರೋಗ್ಯದ ರಹಸ್ಯಗಳು ತಿಳಿಯುತ್ತವೆ : ಡಾ.ಪುಟ್ಟಸ್ವಾಮಿ
ಯೋಗ ಶಾಸ್ತ್ರವನ್ನು ಅರಿತಕೊಂಡರೆ ಆರೋಗ್ಯದ ರಹಸ್ಯಗಳು ತಿಳಿಯುತ್ತವೆ : ಡಾ.ಪುಟ್ಟಸ್ವಾಮಿ
ಘಟಪ್ರಭಾ ಡಿ 29 : ಆಲೋಪತಿ ಔಷಧಿಗಳ ದುಷ್ಪರಿಣಾಮಗಳನ್ನು ಅರಿತ ಜನರು ಈಗ ಆಯುರ್ವೇದ ಕಡೆ ಹೆಚ್ಚು ಒಲವು ತೋರುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ ಎಂದು ಮಂಡ್ಯದ ಯೋಗ ಗುರು ಡಾ.ಪುಟ್ಟಸ್ವಾಮಿ ಹೇಳಿದರು.
ಅವರು ಶುಕ್ರವಾರ ಸಂಜೆ ಸ್ಥಳೀಯ ಎಸ್.ಡಿ.ಟಿ ಕಾಲೇಜ ಸಭಾಂಗಣದಲ್ಲಿ ವಿವೇಕಾನಂದ ಯೋಗ ಟ್ರಸ್ಟ್ ಮಂಡ್ಯ (ರಿ) ಹಾಗೂ ಕಾರ್ಯನಿರತ ಪತ್ರಕರ್ತರ ಸಂಘ (ರಿ) ಘಟಪ್ರಭಾ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ 10 ದಿನಗಳ ಉಚಿತ ಯೋಗ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡುತ್ತ, ಯೋಗ ಶಾಸ್ತ್ರವನ್ನು ಅರಿತಕೊಂಡರೆ ಆರೋಗ್ಯದ ರಹಸ್ಯಗಳು ತಿಳಿಯುತ್ತವೆ. ಯೋಗದಿಂದ ಅಸಾಧ್ಯವಾದದ್ದನ್ನು ಸಾಧಿಸಲು ಸಾಧ್ಯವಾಗುತ್ತದೆ. ನಮ್ಮ ಆಹಾರ ಪದ್ದತಿಯನ್ನು ಬದಲಿಸಿದರೆ ಮಾತ್ರ ನಾವು ಆರೋಗ್ಯವಂತರಾಗಿರಲು ಸಾಧ್ಯವೆಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕಾರ್ಯಕ್ರಮದ ಸಂಘಟರಾದ ಸುರೇಶ ಪಾಟೀಲ, ಯೋಗ ಗುರು ಡಾ.ಪುಟ್ಟಸ್ವಾಮಿ ಅವರು ಯೋಗ ಪಂಡಿತರಾಗಿದ್ದರೂ ಸಹ ಅವರ ಸರಳ ಜೀವನ ಶೈಲಿಯನ್ನು ನೋಡಿದರೆ ನಮಗೆ ಆಶ್ಚರ್ಯವಾಗುತ್ತದೆ. ಅಂತರರಾಷ್ಟ್ರೀಯ ಯೋಗ ಪಟು ಆಗಿದ್ದರೂ ಸಹ 10 ದಿನಗಳ ವರೆಗ ನಮಗೆ ಯೋಗ ಶಿಕ್ಷಣ ನೀಡಿದ್ದು, ನಮ್ಮೆಲ್ಲರ ಸೌಭಾಗ್ಯ. ಶಿಬಿರದಲ್ಲಿ ಅವರಿಂದ ಆಯುರ್ವೇದಿಕ ಔಷಧಿ ಪಡೆದುಕೊಂಡ ಜನರಲ್ಲಿ ಅನೇಕರು ಚೇತರಿಕೆ ಕಂಡಿದ್ದು ಖುಷಿ ತಂದಿದೆ ಎಂದರು.
ಈ ಸಂದರ್ಭದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘ ಘಟಪ್ರಭಾ ಇವರಿಂದ ಯೋಗ ಗುರು ಡಾ.ಪುಟ್ಟಸ್ವಾಮಿ ಅವರನ್ನು ಸನ್ಮಾನಿಸಿ ಗೌರವಿಸÀಲಾಯಿತು.
ದಿವ್ಯ ಸಾನಿಧ್ಯ ವಹಿಸಿದ ಧುಪದಾಳ ಸಿದ್ಧಾರೂಡ ಮಠದ ಶ್ರೀ ಭೀಮಾನಂದ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಧುಪದಾಳ ಗ್ರಾ.ಪಂ ಅಧ್ಯಕ್ಷ ಎಸ್.ಐ.ಬೆಣವಾಡಿ ವಹಿಸಿದ್ದರು. ವೇದಿಕೆ ಮೇಲೆ ಹಿರಿಯರಾದ ಎಸ್.ಎಚ್.ಗಿರಡ್ಡಿ, ಕೆ.ಡಿ.ವಾಲಿಕಾರ, ಮಡಿವಾಳಪ್ಪಾ ಮುಚಳಂಬಿ, ಜಿ.ಎಸ್.ರಜಪೂತ, ಮಂಗಲಾ ಕುರಣಗಿ ಇದ್ದರು.
ಈ ಸಂದರ್ಭದಲ್ಲಿ ಈಶ್ವರ ಗೌಗಲಾ, ಡಾ.ತೇರನಿ, ಮಲ್ಲಿಕಾರ್ಜುನ ರಾಜನ್ನವರ, ದಿಲಾವರ ಬಾಳೇಕುಂದ್ರಿ, ಸಲೀಮ ಕಬ್ಬೂರ, ಶಂಕರ ಕುರಣಗಿ, ಮಲ್ಲಪ್ಪಾ ಹುಕ್ಕೇರಿ ಸೇರಿದಂತೆ ಅನೇಕ ಶಿಬಿರಾರ್ಥಿಗಳು ಇದ್ದರು.
ಕಾರ್ಯಕ್ರಮವನ್ನು ಡಾ. ಭೀಮಪ್ಪಾ ಖೇಮಾಳೆ ನಿರೂಪಿಸಿ, ವಂದಿಸಿದರು.