RNI NO. KARKAN/2006/27779|Friday, October 18, 2024
You are here: Home » breaking news » ಗೋಕಾಕ:ಶ್ರೀ ಚನ್ನಬಸವೇಶ್ವರ ವಿದ್ಯಾಪೀಠದ ಶ್ರೀ ಸಿದ್ಧಲಿಂಗೇಶ್ವರ ಬಿ.ಸಿ.ಎ ಮಹಾವಿದ್ಯಾಲಯದ ವಿದ್ಯಾರ್ಥಿಗಳ ಸಾಧನೆ

ಗೋಕಾಕ:ಶ್ರೀ ಚನ್ನಬಸವೇಶ್ವರ ವಿದ್ಯಾಪೀಠದ ಶ್ರೀ ಸಿದ್ಧಲಿಂಗೇಶ್ವರ ಬಿ.ಸಿ.ಎ ಮಹಾವಿದ್ಯಾಲಯದ ವಿದ್ಯಾರ್ಥಿಗಳ ಸಾಧನೆ 

ಶ್ರೀ ಚನ್ನಬಸವೇಶ್ವರ ವಿದ್ಯಾಪೀಠದ
ಶ್ರೀ ಸಿದ್ಧಲಿಂಗೇಶ್ವರ ಬಿ.ಸಿ.ಎ ಮಹಾವಿದ್ಯಾಲಯದ ವಿದ್ಯಾರ್ಥಿಗಳ ಸಾಧನೆ.

ಗೋಕಾಕ ಡಿ 31 : ಬೆಳಗಾವಿ ರಾಣಿಚನ್ನಮ್ಮಾ ವಿಶ್ವವಿದ್ಯಾಲಯದ ಬಿ.ಸಿ.ಎ 1,3,5ನೇ ಸೆಮಿಸ್ಟರ ನೆವಂಬರ್-2018ರ ಫಲಿತಾಂಶ ಪ್ರಕಟಗೊಂಡಿದ್ದು, ಗೋಕಾಕದ ಶ್ರೀ ಶೂನ್ಯಸಂಪಾದನ ಮಠದ ಶ್ರೀ ಚನ್ನಬಸವೇಶ್ವರ ವಿದ್ಯಾಪೀಠದ ಶ್ರೀ ಸಿದ್ಧಲಿಂಗೇಶ್ವರ ಬಿ.ಸಿ.ಎ ಮಹಾವಿದ್ಯಾಲಯದ 1,3,5ನೇ ಸೆಮಿಸ್ಟರ ಫಲಿತಾಂಶವು ಉತ್ತಮವಾಗಿದೆ.

ಗೋಕಾಕ ನಗರದಲ್ಲಿ 2011-12ನೇ ಸಾಲಿನಿಂದ ಪ್ರಥಮ ಬಾರಿಗೆ ಪ್ರಾರಂಭವಾಗಿರುವ ಏಕೈಕ ಬಿ.ಸಿ.ಎ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. 1ನೇ ಸೆಮೆಸ್ಟರ್ ವಿದ್ಯಾರ್ಥಿಗಳು :-ಸಾಗರ ಬೆಳವಿ (90.57% ) ಪ್ರಥಮ, ದಯಾನಂದ ಗೋಕಾವಿ(87.43%) ದ್ವಿತಿಯ, ನೇತ್ರಾ ದಳವಾಯಿ (86.43%) ತೃತೀಯ, ಸ್ಥಾನ ಪಡೆದಿದ್ದಾರೆ. ಮತ್ತು 3ನೇ ಸೆಮೆಸ್ಟರ್ ವಿದ್ಯಾರ್ಥಿಗಳು :- ರಾಜೇಶ್ವರಿ ಪತ್ತಾರ (88.14%) ಪ್ರಥಮ, ವೈಷ್ಣವಿ ತಲ್ಲಿ (85.57%) ದ್ವಿತಿಯ, ಮನೋಜ ಕೊಕ್ಕರಿ ( 83.14%) ತೃತೀಯ, ಹಾಗೂ
5ನೇ ಸೆಮೆಸ್ಟರ್ ವಿದ್ಯಾರ್ಥಿಗಳು :- ಕೌಸರ ಮುಲ್ಲನ್ನವರ ( 88.00%) ಪ್ರಥಮ, ಜ್ಯೋತಿ ಗುಬ್ಯಾಗೋಳ (87.14%) ದ್ವಿತಿಯ, ವಿನೋದ ದೇಸಾಯಿ 86.29% ತೃತೀಯ, ಹೀಗೆ ಉತ್ತಮ ಅಂಕಗಳನ್ನು ಪಡೆದು ವಿಶ್ವವಿದ್ಯಾಲಯ ಮಟ್ಟದಲ್ಲಿ ಡಿಸ್ಟಿಂಕ್ಷನ್‍ನಲ್ಲಿ ಪಾಸಾಗಿದ್ದಾರೆ.
ಮಹಾವಿದ್ಯಾಲದಲ್ಲಿಕ್ರಮವಾಗಿ ಪ್ರಥಮ, ದ್ವಿತಿಯ, ತೃತಿಯ ಸ್ಥಾನ ಪಡೆದುಕೀರ್ತಿತಂದಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಯನ್ನು ಮೆಚ್ಚಿ ಶ್ರೀ ಮಠದ ಶ್ರೀ ಮುರುಘರಾಜೇಂದ್ರ ಸ್ವಾಮೀಜಿ, ಪ್ರಾಚಾರ್ಯರು, ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗದವರು ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.

Related posts: