RNI NO. KARKAN/2006/27779|Wednesday, November 6, 2024
You are here: Home » breaking news » ಗೋಕಾಕ:ಸಾಹಿತ್ತಿಕವಾಗಿ , ಸಾಮಾಜಿಕವಾಗಿ ,ರಾಜಕೀಯವಾಗಿ ರಾಜ್ಯದಲ್ಲಿ ಗೋಕಾಕ ನಗರ ತಮ್ಮದೇ ಆದ ಛಾಪು ಮೂಡಿಸಿದೆ : ನಾಡೋಜ ಡಾ.ಮಹೇಶ ಜೋಶಿ

ಗೋಕಾಕ:ಸಾಹಿತ್ತಿಕವಾಗಿ , ಸಾಮಾಜಿಕವಾಗಿ ,ರಾಜಕೀಯವಾಗಿ ರಾಜ್ಯದಲ್ಲಿ ಗೋಕಾಕ ನಗರ ತಮ್ಮದೇ ಆದ ಛಾಪು ಮೂಡಿಸಿದೆ : ನಾಡೋಜ ಡಾ.ಮಹೇಶ ಜೋಶಿ 

ಸಾಹಿತ್ತಿಕವಾಗಿ , ಸಾಮಾಜಿಕವಾಗಿ ,ರಾಜಕೀಯವಾಗಿ ರಾಜ್ಯದಲ್ಲಿ ಗೋಕಾಕ ನಗರ ತಮ್ಮದೇ ಆದ ಛಾಪು ಮೂಡಿಸಿದೆ : ನಾಡೋಜ ಡಾ.ಮಹೇಶ ಜೋಶಿ

ಗೋಕಾಕ ಜ 1: ಸಾಹಿತ್ತಿಕವಾಗಿ , ಸಾಮಾಜಿಕವಾಗಿ ,ರಾಜಕೀಯವಾಗಿ ರಾಜ್ಯದಲ್ಲಿ ಗೋಕಾಕ ನಗರ ತಮ್ಮದೇ ಆದ ಛಾಪು ಮೂಡಿಸಿದೆ ಎಂದು ನಾಡೋಜ ಡಾ.ಮಹೇಶ ಜೋಶಿ ಹೇಳಿದರು

ಕನ್ನಡ ಜೋತಿ ಪ್ರಶಸ್ತಿ ಸ್ವೀಕರಿಸಲು ನಗರಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಸ್ಥಳೀಯ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ನಗರದ ಸುಜಾತ ಲಾಡ್ಜ್ ನಲ್ಲಿ ಹಮ್ಮಿಕೊಂಡ ಸರಳ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು

ಕೃಷ್ಣಮೂರ್ತಿ ಪುರಾಣಿಕ , ಬಸವರಾಜ ಕಟ್ಟಮನಿ , ಪ್ರೋ.ಕೆ.ಜಿ.ಕುಂದಣಗಾರ , ಬೆಟಗೇರಿ ಕೃಷ್ಣಶರ್ಮಾ ಸೇರಿದಂತೆ ಅನೇಕ ಮಹಾನ ಚೇತನಗಳ ಬಾಳಿ ಬದುಕಿದ ನಾಡು ಗೋಕಾವಿ ಇಂತಹ ಪವಿತ್ರ ಭೂಮಿಯಲ್ಲಿ ನನ್ನನ್ನು ಕರೆಯಿಸಿ ಗೌರವಿಸುತ್ತಿರುವದು ತುಂಬಾ ಸಂತೋಷ ತಂದಿದೆ ಕೃಷ್ಣಮೂರ್ತಿ ಪುರಾಣಿಕರು ನನ್ನ ದೂರದ ಸಂಬಧಿ ಆಗಿರುವದರಿಂದ ನನಗೂ ಗೋಕಾಕಕ್ಕೂ ಅವಿನಾಭಾವ ಸಂಬಂಧ ವಿದೆ ಹಾಗಾಗಿ ನಾನು ಗೋಕಾಕನ್ನು ಮತ್ತು ಗೋಕಾಕಿನ ಜನತೆಯನ್ನು ತುಂಬಾ ಇಷ್ಟ ಪಡುತ್ತೆನೆಂದ ಜೋಶಿ ತಮ್ಮ ಹಳೆಯ ನೆನಪುಗಳನ್ನು ಮೆಲಕು ಹಾಕಿದರು .

ಕಸಾಪ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ವರ್ಧೆ : ಬರುವ ಕಸಾಪ ಚುನಾವಣೆಗೆ ರಾಜದ್ಯಕ್ಷ ಸ್ಥಾನಕ್ಕೆ ಸ್ವರ್ಧಿಸುವ ಇಂಗಿತ ವ್ಯಕ್ತ ಪಡಿಸಿದ ನಾಡೋಜ ಡಾ. ಮಹೇಶ ಜೋಶಿಯವರು ರಾಜ್ಯದ ಎಲ್ಲ ಕನ್ನಡ ಪರ ಸಂಘಟನೆಗಳನ್ನು ಒಗ್ಗೂಡಿಸಿಕೊಂಡು ಕನ್ನಡವನ್ನು ಗಟ್ಟಿ ಗೋಳಿಸಲು ಪ್ರಮಾಣಿಕವಾಗಿ ಪ್ರಯತ್ನಿಸಲಾಗುವದು ಎಂದು ಜೋಶಿ ಹೇಳಿದರು

ಕರವೇ ಅಧ್ಯಕ್ಷ ಬಸವರಾಜ ಖಾನಪ್ಪನವರ ಮಾತನಾಡಿ ನಾಡೋಜ ಡಾ.ಮಹೇಶ ಜೋಶಿ ನಾಡು ಕಂಡ ಅಪ್ರತಿಮ ವ್ಯಕ್ತಿ , ಕನ್ನಡವನ್ನು ಗಟ್ಟಗೋಳಿಸುವ ನೀಟ್ಟಿನಲ್ಲಿ ಸಾಕಷ್ಟು ಶ್ರಮವಹಿಸಿದ್ದಾರೆ ಇವರ ಸೇವೆಯನ್ನು ಗುರುತಿಸಿ ಗೋಕಾಕಿನ ಕಪ್ಪರಟ್ಟಿ- ಕಳ್ಳಿಗುದ್ದಿ ಶ್ರೀ ಮಠವು ಇವರಿಗೆ ಕನ್ನಡ ಜ್ಯೋತಿ ಪ್ರಶಸ್ತಿ ನೀಡಿ ಗೌರವಿಸುತ್ತಿರುವದು ಶ್ಲಾಘನೀಯವಾಗಿದೆ ಇವರು ಸೇವೆ ಈ ನಾಡಿಗೆ ಇನ್ನಷ್ಟು, ಮತ್ತಷ್ಟು ಲಭಿಸಲಿ ಎಂದು ಶುಭ ಹಾರೈಸಿದರು

ಈ ಸಂದರ್ಭದಲ್ಲಿ ಸಾದಿಕ ಹಲ್ಯಾಳ ,ಸಾಹಿತಿ ಜಯಾನಂದ ಮಾದರ , ಎಸ.ಕೆ.ಮಠದ , ಕೃಷ್ಣಾ ಖಾನಪ್ಪನವರ , ಮುಗುಟ ಪೈಲವಾನ , ಮಂಜುನಾಥ್ ಪ್ರಭುನಟ್ಟಿ , ಹನಿಪಸಾಬ ಸನದಿ , ಆನಂದ ಖಾನಪ್ಪನವರ , ಲಕ್ಟಪ ನಂದಿ , ತೆಲೆಪ್ಪಗೋಳ , ಮಲ್ಲಿಕಜಾನ ತಳವಾರ , ಅಜೀಜ ಮೋಕಾಶಿ , ಸೇರಿದಂತೆ ಅನೇಕರು ಇದ್ದರು

Related posts: