RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ಬಡ ದಲಿತ ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ದಿಟ್ಟ ಹೆಜ್ಜೆ ಇಟ್ಟ ಧೀರ ಮಹಿಳೆ ಸಾವಿತ್ರಿ ಬಾ ಪುಲೆ : ಬಸವರಾಜ ಖಾನಪ್ಪನವರ

ಗೋಕಾಕ:ಬಡ ದಲಿತ ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ದಿಟ್ಟ ಹೆಜ್ಜೆ ಇಟ್ಟ ಧೀರ ಮಹಿಳೆ ಸಾವಿತ್ರಿ ಬಾ ಪುಲೆ : ಬಸವರಾಜ ಖಾನಪ್ಪನವರ 

ಬಡ ದಲಿತ ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ದಿಟ್ಟ ಹೆಜ್ಜೆ ಇಟ್ಟ ಧೀರ ಮಹಿಳೆ ಸಾವಿತ್ರಿ ಬಾ ಪುಲೆ : ಬಸವರಾಜ ಖಾನಪ್ಪನವರ

ಗೋಕಾಕ ಜ 3 : ಬಡ ದಲಿತ ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ದಿಟ್ಟ ಹೆಜ್ಜೆ ಇಟ್ಟ ಧೀರ ಮಹಿಳೆ ಸಾವಿತ್ರಿ ಬಾ ಪುಲೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ತಾಲೂಕಾಧ್ಯಕ್ಷ ಬಸವರಾಜ ಖಾನಪ್ಪನವರ ಹೇಳಿದರು .

ಗುರುವಾರದಂದು ನಗರದ ಕರವೇ ಕಛೇರಿಯಲ್ಲಿ ಹಮ್ಮಿಕೊಂಡಿದ್ದ ಸಾವಿತ್ರಿ ಬಾ ಪುಲೆ ಅವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಪುಲೆ ಅವರ ಭಾವಚಿತ್ರಕ್ಕೆ ಗೌರವ ಸರ್ಮಪಿಸಿ ಮಾತನಾಡಿದರು
19 ನೇ ಶತಮಾನದಲ್ಲಿ ಮಹಿಳೆಯರು ಮನೆ ಬಿಟ್ಟು ಹೋರಗೆ ಕಾಲಿಡುವುದೆ ಅಫರಾದ ವೆಂದು ಭಾವಿಸುತ್ತಿದ್ದ ಕಾಲದಲ್ಲಿ ದಲಿತ ಹೆಣ್ಣು ಮಕ್ಕಳ ಶಿಕ್ಷಣದ ಬಗ್ಗೆ ಧ್ವನಿ ಎತ್ತಿ ದೇಶಾದ್ಯಂತ ಕಾಂತ್ರಿಯನ್ನೇ ಎಬ್ಬಿಸಿ ಕುಟುಂಬಸ್ಥರಿಂದ ಬಹಿಷ್ಕಾರಕ್ಕೆ ಒಳಗಾಗಿಯು ತನ್ನ ಧೀಟತನ್ನದಿಂದ ಬಡ ಮಹಿಳೆಯರಿಗೆ ಶಿಕ್ಷಣ ನೀಡಲು ಮುಂದಾಗಿ ದೇಶ ಪ್ರಥಮ ಮಹಿಳಾ ಶಿಕ್ಷಕಿಯಾಗಿ ಹೊರಹೋಮ್ಮಿದರು ಇವರ ಆದರ್ಶಗಳನ್ನು ಮೈಗೂಡಿಸಿಕೊಂಡು ನಾವಿಂದು ಮುನ್ನಗ್ಗಬೇಕಾಗಿದೆ ಎಂದು ಖಾನಪ್ಪನವರ ಹೇಳಿದರು

ಈ ಸಂದರ್ಭದಲ್ಲಿ ಸಾದಿಕ ಹಲ್ಯಾಳ , ಕೃಷ್ಣಾ ಖಾನಪ್ಪನವರ , ಮುಗುಟ ಪೈಲವಾನ , ರಾಜು ಕೆಂಚನಾನಗುಡ್ಡ , ಶ್ರೀಮತಿ ವಿದ್ಯಾ ದಾಮಿಮಠ , ಶ್ರೀಮತಿ ಶಾಮಲಾ ಹುಬ್ಬಳ್ಳಿಕರ , ಶ್ರೀಮತಿ ಗೌರವ ಕೆ‌. , ಲಾಲಸಾಬ ಮುಲ್ಲಾ , ಪ್ರತೀಕ ಪಾಟೀಲ , ರಘು ವಾಗುಲೆ , ಸೇರಿದಂತೆ ಅನೇಕರು ಇದ್ದರು

 

Related posts: