RNI NO. KARKAN/2006/27779|Sunday, September 8, 2024
You are here: Home » breaking news » ಗೋಕಾಕ:ಜ.27 ರಂದು ಬೆಟಗೇರಿ ಹಾಲು ಉತ್ಪಾದಕರ ಸಹಕಾರಿ ಸಂಘದ ಚುನಾವಣೆ

ಗೋಕಾಕ:ಜ.27 ರಂದು ಬೆಟಗೇರಿ ಹಾಲು ಉತ್ಪಾದಕರ ಸಹಕಾರಿ ಸಂಘದ ಚುನಾವಣೆ 

ಜ.27 ರಂದು ಬೆಟಗೇರಿ ಹಾಲು ಉತ್ಪಾದಕರ ಸಹಕಾರಿ ಸಂಘದ ಚುನಾವಣೆ

ಬೆಟಗೇರಿ:ಗ್ರಾಮದ ಹಾಲು ಉತ್ಪಾದಕರ ಸಹಕಾರಿ ಸಂಘದ ಆಡಳಿತ ಮಂಡಳಿ ಸದಸ್ಯರ ಆಯ್ಕೆಗಾಗಿ ಪ್ರಸಕ್ತ ವರ್ಷದ ಚುನಾವಣೆ ದಿನಾಂಕದಿಂದ ಮುಂದಿನ 5 ವರ್ಷಗಳ ಅವಧಿಗೆ ಇದೇ ರವಿವಾರ ಜ.27 ರಂದು ಚುನಾವಣೆ ನಡೆಯಲಿದೆ.
ಜ.12ರಿಂದ ಸ್ಪರ್ಧಿಸಲ್ಛಿಸುವ ಅಭ್ಯರ್ಥಿಗಳು ನಾಮಪತ್ರಗಳನ್ನು ಸಂಘದ ಕಾರ್ಯಾಲಯದಲ್ಲಿ ಸಲ್ಲಿಸಬಹುದು, ನಾಮನಿರ್ದೇಶನ ಪತ್ರ ಸ್ವೀಕರಿಸುವದು ಜ.19 ಕೊನೆಯ ದಿನವಾಗಿದ್ದು, ಜ.20 ನಾಮಪತ್ರಗಳ ಪರಿಶೀಲನೆ ಬಳಿಕ ಕ್ರಮಬದ್ಧ ಅಭ್ಯರ್ಥಿಗಳ ಯಾದಿ ಪ್ರಕಟನೆ, ಜ.21ರಂದು ಮಧ್ಯಾಹ್ನ 3 ಗಂಟೆಗೆ ನಾಮಪತ್ರ ವಾಪಸ ಪಡೆಯುವದು, 3:30 ಗಂಟೆಗೆ ಸ್ಪರ್ಧಾಳು ಉಮೇದುವಾರರ ಪಟ್ಟಿ ಪ್ರಕಟಿಸುವದು, 4 ಗಂಟೆಗೆ ಚುನಾವಣಾಧಿಕಾರಿಗಳಿಂದ ಅಭ್ಯರ್ಥಿಗಳಿಗೆ ಚಿಹ್ನೆ ಹಂಚುವ ಪ್ರಕ್ರಿಯೆ ನಡೆಯಲಿದೆ.
ಜ.22 ರಂದು ಚಿಹ್ನೆಗಳೊಂದಿಗೆ ಕ್ರಮಬದ್ಧ ಸ್ಪರ್ಧಾಳುಗಳ ಉಮೇದುವಾರರ ಪಟ್ಟಿ ಪ್ರಕಟಿಸುವುದು, ಜ.27 ರಂದು ಸಂಘದ ಕಾರ್ಯಾಲಯದಲ್ಲಿ ಮುಂಜಾನೆ 8ಗಂಟೆಯಿಂದ ಸಾಯಂಕಾಲ 4ಗಂಟೆ ತನಕ ಮತದಾನ, ನಂತರ ಮತಗಳ ಎಣಿಕೆ ಕಾರ್ಯ ಜರುಗಿದ ಬಳಿಕ ಚುನಾವಣಾ ಫಲಿತಾಂಶ ಘೋಷಣೆ, ನೋಟಿಸ್ ಬೋರ್ಡಿನ ಮೇಲೆ ವಿಜೇತ ಅಭ್ಯರ್ಥಿಗಳ ಯಾದಿ ಪ್ರಕಟಿಸಲಾಗುವುದು.
ಸಾಮಾನ್ಯ ಮತದಾರ ಮತಕ್ಷೇತ್ರದಿಂದ 7 ಜನ, ಮಹಿಳಾ ಕಾಯ್ದಿಟ್ಟ ಮತಕ್ಷೇತ್ರದಿಂದ 2, ಹಿಂದುಳಿದ ಅ ವರ್ಗ ಕಾಯ್ದಿಟ್ಟ ಮತಕ್ಷೇತ್ರದಿಂದ 2, ಪರಿಶಿಷ್ಟ ಪಂಗಡ ಕಾಯ್ದಿಟ್ಟ ಮತಕ್ಷೇತ್ರದಿಂದ 1, ಪರಿಶಿಷ್ಟ ಜಾತಿ ಕಾಯ್ದಿಟ್ಟ ಮತಕ್ಷೇತ್ರದಿಂದ 1, ಹೀಗೆ ಒಟ್ಟು 13 ಸಂಘದ ಸದಸ್ಯರ ಸ್ಥಾನಗಳ ಆಯ್ಕೆಗಾಗಿ ಚುನಾವಣೆ ಜರುಗಲಿದೆ. ಸಂಘದ ಕಾರ್ಯಾಲಯದ ನೋಟಿಸ್ ಫಲಕದ ಮೇಲೆ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಹಲವಾರು ಸೂಚನೆ, ನಿಯಮ ಹಾಗೂ ಚುನಾವಣೆ ಕುರಿತು ಮಾಹಿತಿಯನ್ನು ಅಂಟಿಸಲಾಗಿದೆ ಎಂದು ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಸುತ್ತಿರುವ ಗೋಕಾಕ ಸಹಕಾರ ಇಲಾಖೆಯ ಎಸ್.ಬಿ.ಬಿರಾದಾರ ಪಾಟೀಲ, ಸಂಘದ ಮುಖ್ಯ ಕಾರ್ಯನಿರ್ವಾಹಕ ಎನ್.ಎ.ನೀಲಣ್ಣವರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Related posts: