ಘಟಪ್ರಭಾ:ಹುಣಶ್ಯಾಳ ಪಿ.ಜಿ ಗ್ರಾಮದಲ್ಲಿ ಕರ್ನಾಟಕ ಯುವ ಸೇನೆ ಸಂಘಟನೆಯ ಗ್ರಾಮ ಘಟಕ ಉದ್ಘಾಟನೆ
ಹುಣಶ್ಯಾಳ ಪಿ.ಜಿ ಗ್ರಾಮದಲ್ಲಿ ಕರ್ನಾಟಕ ಯುವ ಸೇನೆ ಸಂಘಟನೆಯ ಗ್ರಾಮ ಘಟಕ ಉದ್ಘಾಟನೆ
ಘಟಪ್ರಭಾ ಜ 10 : ಸಮೀಪದ ಹುಣಶ್ಯಾಳ ಪಿ.ಜಿ ಗ್ರಾಮದಲ್ಲಿ ಕರ್ನಾಟಕ ಯುವ ಸೇನೆ ಸಂಘಟನೆಯ ಗ್ರಾಮ ಘಟಕವನ್ನು ಜಿಲ್ಲಾಧ್ಯಕ್ಷ ವೀರಣ್ಣಾ ಸಂಗಮನವರ ಬುಧವಾರ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಯುವಕರು ದುಷ್ಚಟಗಳಿಗೆ ಬಲಿಯಾಗದೇ ಸಂಘಟನೆಯ ಮೂಲಕ ಸಮಾಜದ ಒಳತಿಗೆ ಶ್ರಮಿಸಬೇಕು. ಯುವಕರನ್ನು ಒಗ್ಗೂಡಿಸಿ ಗ್ರಾಮದ ಅಭಿವೃಧಿಯ ಜೊತೆಗೆ ಕನ್ನಡ ಭಾಷೆ, ನಾಡು, ನುಡಿ, ನೆಲ, ಜಲ, ಹಾಗೂ ಅನ್ಯಾಯ ಬೃಷ್ಠಾಚಾರದ ವಿರುದ್ಧ ಯಾವಾಗಲೂ ಯುವಕರು ಹೋರಾಟಕ್ಕೆ ಮುಂದಾಗಬೇಕೆಂದು ಹೇಳಿದರು.
ತಾಲೂಕಾ ಅಧ್ಯಕ್ಷ ದಸ್ತಗೀರ ಜಮಾದಾರ ಮಾತನಾಡಿ, ರಾಷ್ಟ್ರ ಬಲಿಷ್ಠವಾಗಬೇಕಾದರೆ ಯುವಕರ ಪಾತ್ರ ಮಹತ್ವದಾಗಿದೆ. ಅವರಿಂದಲೇ ಕನ್ನಡ ಭಾಷೆ ಶಕ್ತಿಯುತವಾಗಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಸಂಘಟನೆಯ ರಾಜ್ಯ ಉಪಾಧ್ಯಕ್ಷರಾದ ಕೆಂಪಣ್ಣಾ ಚೌಕಶಿ, ಭರಮಣ್ಣಾ ಗಾಡಿವಡ್ಡರ, ಭೀಮಶಿ ಗಂಟೆನ್ನವರ, ಸ್ವಾಮಿ ಕೋಮಾರಿ, ಶಂಕರ ಮುಗ್ಗನ್ನವರ, ಗ್ರಾಮ ಘಟಕ ಗೌರವಾಧ್ಯಕ್ಷ ಬಾಬು ಶೇಗುಣಸಿ, ಅಧ್ಯಕ್ಷ ಸಂತಾಪ ಮ್ಯಾಗಡಿ, ಉಪಾಧ್ಯಕ್ಷ ರಮ್‍ಜಾನ ನದಾಫ, ತಾ.ಪಂ ಸದಸ್ಯರಾದ ಬಸವರಾಜ ಹುಕ್ಕೇರಿ, ಗ್ರಾ.ಪಂ ಅಧ್ಯಕ್ಷ ರಾಮನಾಯ್ಕ ನಾಯಿಕ, ಉಪಾಧ್ಯಕ್ಷರಾದ ಜಗದೀಶ ಹುಕ್ಕೇರಿ, ಸದಸ್ಯರಾದ ಅವಣ್ಣಾ ಡಬ್ಬನವರ, ನಿಜಗುಣಿ ಅಥಣಿ, ಪ್ರಕಾಶ ತಳವಾರ, ಹಿರಿಯರಾದ ಹಾಜಿಸಾಬ ನದಾಫ, ಶಾಬುದ್ದಿನ ನದಾಫ, ಮಲೀಕ ನದಾಫ, ದಸ್ತಗೀರಸಾಬ ನದಾಫ, ಅಪ್ಪಾಸಾಬ ನದಾಫ, ನೂರುದ್ದೀನ ಶೇಗುಣಶಿ ಸೇರಿದಂತೆ ಸಂಘಟನೆಯ ನೂರಾರು ಕಾರ್ಯಕರ್ತರು ಯುವಕರು ಇದ್ದರು.