ಗೋಕಾಕ:ಬೆಟಗೇರಿ ಗ್ರಾಮದ ವ್ಯಾಪ್ತಿಯ ಎಲ್ಲ ಹೊಲ-ಗದ್ದೆಗಳಲ್ಲಿ ಹಿಂಗಾರು ಬೆಳೆಗಳ ಕುರಿತು ವೀಕ್ಷೆಣೆಯ ಕಾರ್ಯ
ಬೆಟಗೇರಿ ಗ್ರಾಮದ ವ್ಯಾಪ್ತಿಯ ಎಲ್ಲ ಹೊಲ-ಗದ್ದೆಗಳಲ್ಲಿ ಹಿಂಗಾರು ಬೆಳೆಗಳ ಕುರಿತು ವೀಕ್ಷೆಣೆಯ ಕಾರ್ಯ
ಬೆಟಗೇರಿ ಜ 10 : ಕಂದಾಯ ಹಾಗೂ ಕೃಷಿ ಇಲಾಖೆಯ ಸಹಯೋಗದೊಂದಿಗೆ ತೇವಾಂಶ ಕೊರತೆಯಿಂದ ಹಾನಿಯಾಗಿರುವ ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ವ್ಯಾಪ್ತಿಯ ಎಲ್ಲ ಹೊಲ-ಗದ್ದೆಗಳಲ್ಲಿ ಹಿಂಗಾರು ಬೆಳೆಗಳ ಕುರಿತು ವೀಕ್ಷೆಣೆಯ ಕಾರ್ಯ ಮಂಗಳವಾರದಂದು ನಡೆಯಿತು.
ತಾಪಂ ಸದಸ್ಯ ಲಕ್ಷ್ಮಣ ನೀಲಣ್ಣವರ ಮಾತನಾಡಿ, ಕೃಷಿ ಇಲಾಖೆಯಿಂದ ದೊರಕುವ ವಿವಿಧ ಸಹಾಯ ಸೌಲಭ್ಯಗಳು ಸೇರಿದಂತೆ ಮುಂಗಾರು ಮತ್ತು ಹಿಂಗಾರು ಹಂಗಾಮಿನ ಬೆಳೆಗಳ ಪೋಷಣೆ, ಪಾಲನೆ, ಔಷಧೋಪಚಾರಗಳ ಸಂಪೂರ್ಣ ಮಾಹಿತಿಯನ್ನು ಕೂಡಲೆ ಇಲ್ಲಿಯ ರೈತರಿಗೆ ನೀಡಿ, ಈ ಭಾಗದ ನೇಗಿಲಯೋಗಿಗಳ ಒಡನಾಡಿಯಾದ ಸಹಾಯಕ ಕೃಷಿ ಅಧಿಕಾರಿ ಎಮ್.ಐ.ಪತ್ತಾರ ಅವರು ಅವಿರತವಾಗಿ ಸಲ್ಲಿಸುತ್ತಿರುವ ಪ್ರಾಮಾಣಿಕ ಸೇವೆಯನ್ನು ಈ ಸಂದರ್ಭದಲ್ಲಿ ಶ್ಲಾಘಿಸಿದರು.
ಗ್ರಾಮ ಲೆಕ್ಕಾಧಿಕಾರಿ ಜೆ.ಎಮ್.ನದಾಫ್, ಸಹಾಯಕ ಕೃಷಿ ಅಧಿಕಾರಿ ಎಮ್.ಐ.ಪತ್ತಾರ, ಶಿವಾಜಿ ನೀಲಣ್ಣವರ, ರೈತ ಸಂಘದ ಮುಖಂಡ ಮುತ್ತೆಪ್ಪ ಕುರುಬರ, ರುದ್ರಪ್ಪ ಕಾಡವ್ವಗೋಳ ಸೇರಿದಂತೆ ರೈತರು, ಇತರರು ಇದ್ದರು.