RNI NO. KARKAN/2006/27779|Wednesday, December 18, 2024
You are here: Home » breaking news » ಘಟಪ್ರಭಾ:ರಸ್ತೆ ಕಾಮಗಾರಿಗೆ ಗ್ರಾ.ಪಂ ಅಧ್ಯಕ್ಷ ಮಹ್ಮದರಫೀಕ ಮಕಾನದಾರ ಚಾಲನೆ

ಘಟಪ್ರಭಾ:ರಸ್ತೆ ಕಾಮಗಾರಿಗೆ ಗ್ರಾ.ಪಂ ಅಧ್ಯಕ್ಷ ಮಹ್ಮದರಫೀಕ ಮಕಾನದಾರ ಚಾಲನೆ 

ರಸ್ತೆ ಕಾಮಗಾರಿಗೆ ಗ್ರಾ.ಪಂ ಅಧ್ಯಕ್ಷ ಮಹ್ಮದರಫೀಕ ಮಕಾನದಾರ ಚಾಲನೆ

ಘಟಪ್ರಭಾ ಜ 10 : ಸಮೀಪದ ಶಿಂದಿಕುರಬೇಟ ಗ್ರಾಮದ ಎಸ್ ಟಿ ಕಾಲನಿಯಲ್ಲಿ ಶಾಸಕ ರಮೇಶ ಜಾರಕಿಹೊಳಿ ಅವರ ಅನುದಾನದಡಿಯ ಎಸ್‍ಸಿಪಿ ಯೋಜನೆಯಡಿಯಲ್ಲಿ ರಸ್ತೆ ಕಾಮಗಾರಿಗೆ ಗ್ರಾ.ಪಂ ಅಧ್ಯಕ್ಷ ಮಹ್ಮದರಫೀಕ ಮಕಾನದಾರ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು ಗ್ರಾಮೀಣಾಭಿವೃದ್ದಿಗೆ ಗ್ರಾಮಸ್ಥರ ಸಹಕಾರ ಅಗತ್ಯವಾಗಿದೆ. ಈ ಭಾಗದ ಶಾಸಕರಾದ ರಮೇಶ ಜಾರಕಿಹೊಳಿ ಅವರ ನೇತ್ರತ್ವದಲ್ಲಿ ಕಾರ್ಮಿಕ ಮುಖಂಡ ಅಂಬಿರಾವ್ ಪಾಟೀಲ ಅವರ ಮಾರ್ಗದರ್ಶನದಲ್ಲಿ ಹಲವಾರು ಅಭಿವೃದ್ದಿ ಕಾಮಗಾರಿಗಳನ್ನು ಮಾಡಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾ.ಪಂ ಸದಸ್ಯ ನಿಂಗಪ್ಪ ಬಂಬಲಾಡಿ, ಗ್ರಾ.ಪಂ ಸದಸ್ಯರುಗಳದ ಭೀಮಶಿ ಬಿರನಾಳಿ, ಮಾರುತಿ ಜಾಧವ, ವಿಠ್ಠಲ ಶಿವಾಪೂರಿ, ತಿಮ್ಮಣ್ಣಾ ಗಾಡಿವಡ್ಡರ, ವಿಠ್ಠಲ ಕಾಶಪ್ಪಗೋಳ, ಜೈಬುನ್ನಿಸಾ ಬಡೇಖಾನ, ಶ್ರೀಕಾಂತ ಕಾಳ್ಯಾಗೋಳ, ಅಶೋಕ ಮಲಕನ್ನವರ ಸೇರಿದಂತೆ ಗ್ರಾಮಸ್ಥರು ಇದ್ದರು.

Related posts: