ಖಾನಾಪುರ:ಕಕ್ಕೇರಿ ಪಿಕೆಪಿಎಸ್ ಪ್ರಗತಿಪರ ಪೇನಲ್ ಗೆ ಸಂಪೂರ್ಣ ಬಹುಮತ:
ಕಕ್ಕೇರಿ ಪಿಕೆಪಿಎಸ್ ಪ್ರಗತಿಪರ ಪೇನಲ್ ಗೆ ಸಂಪೂರ್ಣ ಬಹುಮತ:
ಖಾನಾಪುರ ಜ 13 : ಗಡಿನಾಡು ಬೆಳಗಾವಿ ಜಿಲ್ಲೆಯ, ಮಲೆನಾಡಿನ ಸೆರಗಿನಲ್ಲಿರುವ ಖಾನಾಪುರ ತಾಲೂಕಿನ ಪೂರ್ವಭಾಗದ ಐತಿಹಾಸಿಕವಾಗಿ ಪುಣ್ಯಕ್ಷೇತ್ರವೆಂದು ಪ್ರಸಿದ್ದಿ ಪಡೆದಿರುವ ಕಕ್ಕೇರಿ ಗ್ರಾಮಕ್ಕೆ ಒಂದು ವಿಶೇಷತೆ ಇದೆ. ಏಕೆಂದರೆ ಗ್ರಾಮವು ತಾಯಿ ಬಿಷ್ಟಾದೇವಿಯಿಂದ ಅಷ್ಟೇ ಅಲ್ಲದೇ ರಾಜಕಾರಣದಲ್ಲಿ ತನ್ನದೇ ಆದ ವಿಶಿಷ್ಟತೆಯನ್ನು ಹೊಂದಿದೆ. ಹೀಗಾಗಿ ತಾಲೂಕಿನ ರಾಜಕಾರಣದ ಉಗಮಸ್ಥಾನ ಈ ಗ್ರಾಮ ಎಂದರೂ ತಪ್ಪಾಗಲಿಕ್ಕಿಲ್ಲ. ಏಕೆಂದರೇ ಪೂರ್ವಭಾಗದ ಹತ್ತಾರೂ ಗ್ರಾಪಂ ಗಳನ್ನು ಒಳಗೊಂಡ ಗ್ರಾಮಗಳಿಗೆ ಪ್ರತಿಷ್ಟೆತೆಯ ಕಣವಾಗಿದ್ದ ಈ ಪಿಕೆಪಿಎಸ್ ಚುನಾವನೆಯು ಸ್ಥಳಿಯರಾದ ಇಬ್ಬರೂ ತಾಲೂಕಾಮಟ್ಟದ ಪ್ರಭಾವಿ ರಾಜಕಾರಣಿಗಳಾದ ವಕೀಲ ಸಿ.ಬಿ.ಅಂಬೋಜಿ ಹಾಗೂ ಭಾಗ್ಯಲಕ್ಷ್ಮೀ ಸಕ್ಕರೆ ಕಾರ್ಖಾನೆ ಮಾಜಿ ಚೆರಮನ್ ರಿಯಾಜ ಪಾಟೀಲ ನೇತೃತ್ವದ ಪ್ರಗತಿಪರ ಪೇನಲ್ ಗೆ ಸಂಪೂರ್ಣ ಬಹುಮತ ಭರ್ಜರಿ ಜಯ ಸಾಧಿಸಿದೆ.
ತಾಲೂಕಿನ ಕಕ್ಕೇರಿ ಗ್ರಾಮದಲ್ಲಿ ಶುಕ್ರವಾರದಂದು ನಡೆದ 8 ಗ್ರಾಮದ ರೈತರನ್ನು ಒಲಗೊಂಡ ಕಕ್ಕೇರಿ ಪಿಕೆಪಿಎಸ್ ಚುನಾವಣೆಯಲ್ಲಿ ಪ್ರಗತಿಪರ ಪೇನಲ್ ಗೆ ಸಂಪೂರ್ಣ ಬಹುಮತ ಪಡೆದು ಭರ್ಜರಿ ಜಯ ಸಾಧಿಸಿ, ಮತ್ತೊಮ್ಮೆ ಅಧಿಕಾರಗೆ ಏರಿದರು.
ಖಾನಾಪುರ ತಾಲೂಕಿನಾದ್ಯಂತ ಈ ಗ್ರಾಮದ ಪಿಕೆಪಿಎಸ್ ಚುನಾವಣೆ ಎಲ್ಲ ರಾಜಕೀಯ ಪಕ್ಷಗಳಿಗೆ ಮತ್ತು ರಾಜಕಾರಣಿಗಳಿಗೆ ಪ್ರತಿಷ್ಠೆಯ ಕಣವಾಗಿ ಹೊರಹೊಮ್ಮಿತ್ತು. ಆದ್ದರಿಂದ ತಾಲೂಕಿನ ಸಮಸ್ತ ರಾಜಕಾರಣಿಗಳ ಲಕ್ಷ ಕಕ್ಕೇರಿಯ ಕಡೆ ಕೇಂದ್ರಿಕೃತವಾಗಿತ್ತು. ಏಕೆಂದರೆ ಗ್ರಾಮದ ಇಬ್ಬರೂ ಪ್ರಭಾವಿ ನಾಯಕರ ನೇತೃತ್ವದಲ್ಲಿ ನಡೆದ ಈ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿ ಎದುರಾಳಿ ಮಾಜಿ ಮಂಡಳ ಪಂಚಾಯತ ಚೆರಮನ್ ಯಲ್ಲಪ್ಪಾ ಗುಪಿತ ನೇತೃತ್ವದ ಪೆನಲ್ ಗೆ ಹೀನಾಯವಾಗಿ ಸೋಲಿನ ರುಚಿಯನ್ನಯ ನೀಡಿದರು.
ಇದೇ ಜ.12ರ ಶುಕ್ರವಾರದಂದು ಗ್ರಾಮದ ಹಿರಿಯ ರಾಜಕಾರಣಿಗಳಾದ ವಕೀಲ ಸಿ.ಬಿ.ಅಂಬೋಜಿ ಮತ್ತು ರಿಯಾಜ ಪಟೇಲ ಅವರ ನೇತೃತ್ವದಲ್ಲಿ ನಡೆದ ಕಕ್ಕೇರಿ ಪಿಕೆಪಿಎಸ್ ಚುನಾವಣೆಯಲ್ಲಿ ಪ್ರಗತಿಪರ ಪೆನಲ್ ಸಂಪೂರ್ಣ ಬಹುಮತ ಪಡೆದು ಮತ್ತೆ ಅಧಿಕಾರದ ಗದ್ದುಗೆ ಏರಿದರು. ಇಲ್ಲಿ ನಡೆದ ಚುನಾವಣೆಯಲ್ಲಿ ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸಿ ಸಿ.ಬಿ.ಅಂಬೋಜಿ, ನಾಮದೇವ ಕುಂಬಾರಕೊಪ್ಪ, ಪ್ರಬು ಅಂಬಡಗಟ್ಟಿ, ಯಲ್ಲಪ್ಪ ತಾರೀಹಾಳ ಮತ್ತು ವಾಸುದೇವ ಮಾಂಡವಿ 5 ಜನರು ಮತದಾನದ ಮೂಲಕ ಆಯ್ಕೆಯಾದರೆ, ಇನ್ನೂಳಿದ 7ಜನರು ಮೀಸಲಾತಿ ಕ್ಷೇತ್ರದಿಂದ ಅವಿರೋಧ ಆಯ್ಕೆಯಾಗಿದ್ದಾರೆ. ಅದರಲ್ಲಿ ಮಹಿಳಾ ಕ್ಷೇತ್ರದಿಂದ ಜಯಶ್ರೀ ಬಿರ್ಜೆ, ನೀಲವ್ವ ಬೈಲೂರಕರ, ಹಿಂದುಳಿದ ಅ ವರ್ಗ ಕ್ಷೇತ್ರದಿಂದ ಪರಮೇಶ್ವರ ಕುರುಬರ, ಅಸ್ಪಾಕಅಹ್ಮದ ಪಾಟೀಲ, ಪ.ಜಾ ಕ್ಷೇತ್ರದಿಂದ ಶಂಕರ ತಳವಾರ, ಪ.ಪಂ ಕ್ಷೇತ್ರದಿಂದ ವಿಠ್ಠಲ ಕಿತ್ತೂರ ಹಾಗೂ ಬಿನ್ ಸಾಲಗಾರ ಕ್ಷೇತ್ರದಿಂದ ಗೋಪಾಲ ವಿರಾಪೂರ ಅವಿರೋಧ ಆಯ್ಕೆಯಾಗಿದ್ದಾರೆ.
ಗ್ರಾಮದ ರಾಜಕೀಯ ವಿಶೇಷತೆ: ಪಿಕೆಪಿಎಸ್ ಚುನಾವಣೆಯಲ್ಲಿ ಕಳೆದ 30ವರ್ಷಗಳಿಂದ ಅಂಬೋಜಿ ಮನೆತನದ ನೇತೃತ್ವದಲ್ಲಿ ನಡೆದ ಪೆನಲ್ ಗೆಲುವು
ಸಾಧಿಸುತ್ತಾ ಬಂದಿದ್ದು, ಒಳ್ಳೆಯ ಆಡಳಿತವನ್ನು ನೀಡಿ ರೈತ ಶೇರುದಾರರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಕಳೆದ 2014ರಲ್ಲಿ ನಡೆದ ಕಕ್ಕೇರಿ ಪಿಕೆಪಿಎಸ್ ಚುನಾವಣೆಯಲ್ಲಿ ವಕೀಲ ಸಿ.ಬಿ.ಅಂಬೋಜಿ ನೇತೃತ್ದ ಪೆನಲ್ ಮತದಾನದ ಮೂಲಕ ಭರ್ಜರಿ ಗೆಲುವು ಸಾಧಿಸಿ, ವಕೀಲ ಸಿ.ಬಿ.ಅಂಬೋಜಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದರು. ಅದೇ ರೀತಿಯಾಗಿ 2015ರಲ್ಲಿ ನಡೆದ ಗ್ರಾಪಂ ಚುನಾವನೇಯಲ್ಲೂ ವಕೀಲ ಸಿ.ಬಿ.ಅಂಬೋಜಿ ನೇತೃತ್ವದ ಪೆನಲ್ ಭರ್ಜರಿ ಜಯ ಸಾಧಿಸಿ ಅಧಿಕಾರವನ್ನು ವಹಿಸಿಕೊಂಡು ಜನತೆಗೆ ಒಳ್ಳೆಯ ಆಡಳಿತ ನೀಡುತ್ತಿದೆ.
ನಮ್ಮ ಕಕ್ಕೇರಿ ಪಿಕೆಪಿಎಸ್ ಗೆ ಸಂಭಂಧಿಸಿದ ಕಕ್ಕೇರಿ, ಚುಂಚವಾಡ, ಕರಿಕಟ್ಟಿ, ರಾಮಾಪೂರ, ಭೂರಣಕಿ, ಸುರಾಪುರ, ಮಾಸ್ಕೆನಟ್ಟಿ ಮತ್ತು ಸುರಪುರ ಕೇರವಾಡ ಈ 8 ಗ್ರಾಮಗಳ ರೈತರು ನನ್ನ ಮೇಲೆ ವಿಶ್ವಾಸವಿಟ್ಟು ಕಳೆದ 20ವರ್ಷಗಳಿಂದ ಮತಚಲಾಯಿಸಿ ಅಧಿಕಾರ ನೀಡಿ ಆಶೀರ್ವದಿಸುತ್ತರಿದ್ದಾರೆ, ಜೋತೆಗೆ ರೈತರ ಅನುಕೂಲವಾಗುವ ನಿಟ್ಟಿನಲ್ಲಿ ನಮ್ಮ ಪಿಕಡಪಿಎಸ್ ನಲ್ಲಿ ಸುಗ್ಗಿ ಕಾಲಕ್ಕೆ ಅನುಗುಣವಾಗಿ ಬೀಜ, ರಸಗೊಬ್ಬರ ಮತ್ತು ಕೃಷಿ ಔಷಧಿಗಳನ್ನು ಸಬ್ಸಿಡಿ ದರದಲ್ಲಿ ನೀಡಲಾಗುತ್ತಿದೆ. ಜೋತೆಗೆ ಗ್ರಾಮದ ಜನತೆಗೆ ಪ್ರತಿತಿಂಗಳು ರೇಶನ ಮತ್ತು ಸೀಮೆಎಣ್ಣೆ ಸಹ ವಿತರಿಸಲಾಗುತ್ತಿದೆ. ಇದರ ಜೋತೆಗೆ ಹಿಂದಿನ ಆಡಳಿತದಲ್ಲಿ 18ಲಕ್ಷ ರೂ. ವೆಚ್ಚದ ಮಳಿಗೆಗಳನ್ನು ನಿರ್ಮಿಸಿ ಬಾಡಿಗೆ ಪಡೆದು ಪಿಕೆಪಿಎಸ್ ಗೆ ಆದಾಯ ಬರುವ ಹಾಗೇ ಮಾಡಿದ್ದೆವೆ. ಇದರ ಜೋತೆಗೆ ಮುಂದಿನ ವರ್ಷ ಹೈನುಗಾರಿಕೆಯ ವಿಶೇಷ ಕಾರ್ಯಕ್ರಮಗಳನ್ನು ಮಾಡುತ್ತೆವೆ ಎಂದರು.
ವಕೀಲ ಸಿ.ಬಿ.ಅಂಬೋಜಿ, ಅಧ್ಯಕ್ಷರು ಪಿಕೆಪಿಎಸ್ ಕಕ್ಕೇರಿ.