ಅಥಣಿ :ಮಾತಿನಲ್ಲಿ ಒಂದಾಗದೆ ಕಾರ್ಯದಲ್ಲಿ ಒಂದಾಗಿ : ಜಾರಕಿಹೊಳಿ ಸಹೋದರರಿಗೆ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಸಲಹೆ
ಮಾತಿನಲ್ಲಿ ಒಂದಾಗದೆ ಕಾರ್ಯದಲ್ಲಿ ಒಂದಾಗಿ : ಜಾರಕಿಹೊಳಿ ಸಹೋದರರಿಗೆ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಸಲಹೆ
ಅಥಣಿ ಜೂ 30 : ಜಾರಕಿಹೊಳಿ ಸಹೋದರರು ಮಾತಿನಲ್ಲಿ ಒಂದಾಗದೆ ಕಾರ್ಯದಲ್ಲಿ ಒಂದಾಗಿ ಪಕ್ಷವನ್ನು ತಳಮಟ್ಟದಿಂದ ಬಲಿಷ್ಠ ಗೋಳಿಸಬೇಕೆಂದು ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಹೇಳಿದರು
ಅಥಣಿಯಲ್ಲಿ ಹಮ್ಮಿಕೊಂಡಿದ್ದ ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ರಮೇಶ ಮತ್ತು ಸತೀಶ ಇಬ್ಬರು ರಾಮ ಲಕ್ಷ್ಮಣ ಇದ್ದಂತೆ ವೇದಿಕೆಗಳಲ್ಲಿ ಒಗ್ಗಟು ತೋರಿಸದೆ ಪಕ್ಷ ಸಂಘಟನೆಯಲ್ಲಿ ಒಗ್ಗಟು ತೋರಿದರೆ ಮಾತ್ರ ಕಾಂಗ್ರೆಸ್ ಪಕ್ಷಕ್ಕೆ ಜಿಲ್ಲೆಯಲ್ಲಿ ಹೆಚ್ಚಿನ ಸ್ಥಾನ ಪಡೆಯಲು ಸಾಧ್ಯ ಆ ದೀಸೆಯಲ್ಲಿ ಇಬ್ಬರು ಸಹೋದರರು ಭಿನ್ನಾಭಿಪ್ರಾಯಗಳನ್ನು ಬದಿಗೋತ್ತಿ ಎಲ್ಲರನ್ನು ಒಟ್ಟಿಗೆ ತಗೆದುಕೊಂಡು ಹೋಗಬೇಕೆಂದು ಪರಮೇಶ್ವರ್ ಜಾರಕಿಹೊಳಿ ಸಹೋದರರಿಗೆ ಕಿವಿ ಮಾತು ಹೇಳಿದರು