ಗೋಕಾಕ:ಪರಿಸರ ರಕ್ಷಣೆಯ ಮನೋಭಾವವನ್ನು ಬೆಳೆಸಿಕೊಳ್ಳಿ: ಎ.ವಾಯ್.ಹಾದಿಮನಿ
ಪರಿಸರ ರಕ್ಷಣೆಯ ಮನೋಭಾವವನ್ನು ಬೆಳೆಸಿಕೊಳ್ಳಿ: ಎ.ವಾಯ್.ಹಾದಿಮನಿ
ಗೋಕಾಕ ಜ 13 : ವಿದ್ಯಾರ್ಥಿಗಳು ಗಿಡಮರಗಳನ್ನು ಉಳಿಸಿ, ಬೆಳೆಸಿ ಪರಿಸರ ರಕ್ಷಣೆಯ ಮನೋಭಾವವನ್ನು ಬೆಳೆಸಿಕೊಳ್ಳುವಂತೆ ಇಲ್ಲಿಯ ಸರ್ಕಾರಿ ಪದವಿಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಎ.ವಾಯ್.ಹಾದಿಮನಿ ಹೇಳಿದರು.
ನಗರದ ಸರ್ಕಾರಿ ಪದವಿಪೂರ್ವ ಮಹಾವಿದ್ಯಾಲಯದ ರಾಷ್ಟ್ರೀಯ ಹಸಿರು ಪಡೆ ಹಮ್ಮಿಕೊಂಡ ಪರಿಸರ ಸಂರಕ್ಷಣೆ ಮತ್ತು ಅದರ ಮಹತ್ವದ ಕುರಿತು ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ನೀರನ್ನು ಮಿತವಾಗಿ ಬಳಸಬೇಕು. ಪ್ರತಿಯೊಬ್ಬರು ತಮ್ಮ ಜನ್ಮದಿನಾಚರಣೆಗಳನ್ನು ಸಸಿ ನೆಟ್ಟು ಆಚರಿಸಿ ಅವುಗಳನ್ನು ಬೆಳೆಸಲು ಕಂಕಣಬದ್ಧರಾಗಬೇಕು. ಪರಿಸರ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳ ಮಹತ್ವದಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಹಸಿರು ಪಡೆಯ ಮುಖ್ಯಸ್ಥ ಡಾ|| ಪರಮೇಶ್ವರ, ಉಪನ್ಯಾಸಕ ಪಿ.ಎನ್.ಕಾಮತ ಸೇರಿದಂತೆ ವಿದ್ಯಾಲಯದ ಉಪನ್ಯಾಸಕರು ಸಿಬ್ಬಂದಿಯವರು ಇದ್ದರು.
ಪರಿಸರ ರಕ್ಷಣೆ ಮತ್ತು ಅದರ ಮಹತ್ವ ಕುರಿತು ಹಸಿರು ಪಡೆಯಿಂದ ಜಾಗೃತಿ ಜಾಥಾ, ಪ್ರಬಂಧ ಸ್ಪರ್ಧೆ, ರಸಪ್ರಶ್ನೆ ಮತ್ತು ಚರ್ಚಾ ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.