ಘಟಪ್ರಭಾ:ಶಿಂದಿಕುರಬೇಟದಲ್ಲಿ ಶ್ರೀ ಸಿದ್ದರಾಮೇಶ್ವರ ಜಯಂತಿ ಆಚರಣೆ
ಶಿಂದಿಕುರಬೇಟದಲ್ಲಿ ಶ್ರೀ ಸಿದ್ದರಾಮೇಶ್ವರ ಜಯಂತಿ ಆಚರಣೆ
ಘಟಪ್ರಭಾ ಜ 15 : ಸಮೀಪದ ಶಿಂದಿಕುರಬೇಟ ಗ್ರಾಮದ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಜಯಂತಿಯನ್ನು ಆಚರಿಸಲಾಯಿತು. ಶ್ರೀ ದುರ್ಗಾದೇವಿ ದೇವಋಷಿ ನಾಗಪ್ಪ ಪೂಜೇರಿ ಅವರು ಶ್ರೀ ಸಿದ್ದರಾಮೇಶ್ವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ್ದರು. ಈ ಸಂದರ್ಭದಲ್ಲಿ ಪಿಕೆಪಿಎಸ್ ಉಪಾಧ್ಯಕ್ಷ ಬಡಪ್ಪ ಗಾಡಿವಡ್ಡರ, ಸಂಜು ಗಾಡಿವಡ್ಡರ, ಗ್ರಾ.ಪಂ ಮಾಜಿ ಸದಸ್ಯ ಭೀಮಶಿ ಗಾಡಿವಡ್ಡರ, ಯಲ್ಲಪ್ಪ ಗಾಡಿವಡ್ಡರ, ಶಿಕ್ಷಕ ಪಿ.ಎಚ್.ಗೋಸಬಾಳ, ದುಂಡಪ್ಪ ಗಾಡಿವಡ್ಡರ, ಶಿವಾನಂದ ಪೂಜೇರಿ ಸೇರಿದಂತೆ ಭೋವಿ ವಡ್ಡರ ಸಮಾಜದ ಹಿರಿಯರು, ಯುವಕರು ಇದ್ದರು.