ಗೋಕಾಕ:ದಿ.18 ರಿಂದ 20 ರ ವರೆಗೆ ಸತೀಶ ಶುಗರ್ಸ್ ಅವಾಡ್ರ್ಸ: ಅಂತಿಮ ಹಂತದ ಸಾಂಸ್ಕಂತಿಕ ಸ್ಪರ್ಧೆಗಳು
ದಿ.18 ರಿಂದ 20 ರ ವರೆಗೆ ಸತೀಶ ಶುಗರ್ಸ್ ಅವಾಡ್ರ್ಸ: ಅಂತಿಮ ಹಂತದ ಸಾಂಸ್ಕಂತಿಕ ಸ್ಪರ್ಧೆಗಳು
ಗೋಕಾಕ ಜ 15 : ಸತೀಶ ಜಾರಕಿಹೊಳಿ ಫೌಂಡೇಶನ್ ಆಯೋಜಿತ 18ನೇ ಸತೀಶ ಶುಗರ್ಸ ಅವಾಡ್ರ್ಸ ಗೋಕಾಕ ತಾಲೂಕಿನ ಪ್ರಾಥಮಿಕ,ಪ್ರೌಢ,ಕಾಲೇಜು ವಿಭಾಗಗಳ ಅಂತಿಮ ಹಂತದ ಸಾಂಸ್ಕøತಿಕ ಸ್ಪರ್ಧೆಗಳು ದಿ. 18ರಿಂದ 20 ರವರೆಗೆ ಮೂರು ದಿನಗಳ ಕಾಲ ನಗರದ ಮಹರ್ಷಿ ವಾಲ್ಮೀಕಿ ಕ್ರೀಡಾಂಗಣದಲ್ಲಿ ವರ್ಣರಂಜಿತ ಭವ್ಯ ವೇದಿಕೆ ಮೇಲೆ ಅತ್ಯಂತ ವಿಜೃಂಭಣೆಯಿಂದ ಜರುಗಲಿವೆ ಎಂದು ಸಂಘಟಕರಾದ ಎಸ್.ಎ.ರಾಮಗಾನಟ್ಟಿ ಹಾಗೂ ರಿಯಾಜ ಚೌಗಲಾ ತಿಳಿಸಿದರು.
ಅವರು ಮಂಗಳವಾರದಂದು ನಗರದ ವಾಲ್ಮೀಕಿ ಕ್ರೀಡಾಂಗಣದಲ್ಲಿಯ ಭವ್ಯ ವೇದಿಕೆ ಬಳಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡುತ್ತ ಅಂತಿಮ ಹಂತದ ಸ್ಪರ್ಧೆಗಳ ವಿವರ ನೀಡಿದರು.
ದಿ.18ರಂದು ಕಳೆದ ಸಾಲಿನ ಸ್ಪರ್ಧಾ ವಿಜೇತರಿಂದ ಕಾರ್ಯಕ್ರಮ ಉದ್ಘಾಟನೆಗೊಳ್ಳುವುದು. ಸಂಜೆ 5 ಗಂಟೆಗೆ ಪ್ರೌಢಶಾಲಾ ವಿಭಾಗದ ಜಾನಪದ ಗಾಯನ ಸ್ಪರ್ಧೆ, ಸೋಲೋ ಡ್ಯಾನ್ಸ್ ಸ್ಪರ್ಧೆ ಮತ್ತು ಪ್ರಾಥಮಿಕ ಶಾಲಾ ವಿಭಾಗದ ಗಾಯನ ಸ್ಪರ್ಧೆ, ಸಮೂಹ ನೃತ್ಯ ಸ್ಪರ್ಧೆ ನಂತರ ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸಾಧನೆಗೈದ ಪ್ರತಿಭಾವಂತರಿಗೆ ಸನ್ಮಾನ,ಪ್ರಾಥಮಿಕ ವಿಭಾಗದ ಭಾಷಣ ಹಾಗೂ ಸದರೀ ದಿನದ ಸಾಂಸ್ಕøತಿಕ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಗುವುದು.
ದಿ.19ರಂದು ಪ್ರೌಢಶಾಲಾ ವಿಭಾಗದ ಗಾಯನ, ಸಮೂಹ ನೃತ್ಯ ಸ್ಪರ್ಧೆ, ಪ್ರಾಥಮಿಕ ವಿಭಾಗದ ಸೋಲೋ ಡ್ಯಾನ್ಸ್ ಹಾಗೂ ಕಾಲೇಜು ವಿಭಾಗದ ಸೋಲೋ ಡ್ಯಾನ್ಸ್ ಸ್ಪರ್ಧೆ ನಂತರ ಪ್ರೌಢಶಾಲೆ ಮತ್ತು ಕಾಲೇಜು ವಿಭಾಗದ ಭಾಷಣ ಹಾಗೂ ಸದರೀ ದಿನದ ಸಾಂಸ್ಕøತಿಕ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಗುವುದು.
ದಿ.20 ರಂದು ಪ್ರೌಢಶಾಲಾ ವಿಭಾಗದ ಜಾನಪದ ನೃತ್ಯ ಸ್ಪರ್ಧೆ,ಕಾಲೇಜು ವಿಭಾಗದ ಗಾಯನ, ಸಮೂಹ ನೃತ್ಯ ಸ್ಪರ್ಧೆಗಳು ನಡೆಯಲಿದ್ದು ನಂತರ ಪ್ರತಿಭಾವಚಿತ ವಿದ್ಯಾರ್ಥಿಗಳಿಗೆ ಹಾಗೂ ಸದರೀ ದಿನದ ಸಾಂಸ್ಕøತಿಕ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ ಜರುಗಲಿದೆ.
ಸ್ಪರ್ಧಾ ವಿಜೇತರಿಗೆ ಟ್ರೋಫಿಗಳು ಹಾಗೂ ನಗದು ಬಹುಮಾನ ನೀಡಿ ಗೌರವಿಸಲಾಗುವುದು.
ಮೂರು ದಿನಗಳ ಕಾಲ ನಡೆಯುವ 18ನೇ ಸತೀಶ ಶುಗರ್ಸ ಅವಾಡ್ರ್ಸ ಅಂತಿಮ ಹಂತದ ಸಾಂಸ್ಕøತಿಕ ಸ್ಪರ್ಧೆಗಳ ಕಾರ್ಯಕ್ರಮದಲ್ಲಿ ನಾಡಿನ ಕನ್ನಡ ಚಲನಚಿತ್ರಗಳ ನಟರು, ನಟಿಯರು, ಸಾಮಾಜಿಕ ಚಿಂತಕರು, ಕವಿ-ಸಾಹಿತಿಗಳು, ಬುದ್ದಿಜೀವಿಗಳು ಹಾಗೂ ರಾಜಕೀಯ ಮುಖಂಡರುಗಳು ಭಾಗವಹಿಸಲಿದ್ದಾರೆಂದು ಎಸ್.ಎ.ರಾಮಗಾನಟ್ಟಿ ಮತ್ತು ರಿಯಾಜ ಚೌಗಲಾ ತಿಳಿಸಿದರು.