ಗೋಕಾಕ:18ನೇ ಸತೀಶ ಶುಗರ್ಸ್ ಅವಾಡ್ರ್ಸಗೆ ವೇದಿಕೆ ಸಜ್ಜು! ಕರದಂಟು ನಾಡಲ್ಲಿ 3 ದಿನಗಳ ಕಾಲ ನಡೆಯಲಿದೆ ಬಾಹುಬಲಿ ದರ್ಬಾರ!!
18ನೇ ಸತೀಶ ಶುಗರ್ಸ್ ಅವಾಡ್ರ್ಸಗೆ ವೇದಿಕೆ ಸಜ್ಜು!
ಕರದಂಟು ನಾಡಲ್ಲಿ 3 ದಿನಗಳ ಕಾಲ ನಡೆಯಲಿದೆ ಬಾಹುಬಲಿ ದರ್ಬಾರ!!
ಗೋಕಾಕ ಜ 17 : ಎರಡನೇ ರಾಜಧಾನಿ ಎಂದೇ ಪ್ರಖ್ಯಾತ ಹೊಂದಿದ ಬೆಳಗಾವಿ. ಜಿಲ್ಲೆಯಲ್ಲಿರುವ ಒಂದು ಪ್ರಸಿದ್ಧ ನಗರ ಗೋಕಾಕ ಕರದಂಟು ನಾಡು. ಕಳೆದ ಸುಮಾರು 18 ವರ್ಷಗಳಿಂದ ಕ್ರೀಡೆ, ಕಲೆ, ಸಾಹಿತ್ಯ, ಸಂಗೀತ ಹೀಗೆ ಸಾಂಸ್ಕøತಿಕ ನೆಲೆಗಟ್ಟುಗಳನ್ನು ಗಟ್ಟಿಗೊಳಿಸುವ ಪ್ರಯತ್ನದೊಂದಿಗೆ ಸಾಂಸ್ಕøತಿಕ ನಗರ ಎಂಬ ಬಿರುದಾಂಕಿತಕ್ಕೆ ಭಾಜಿನವಾಗುತ್ತಿದೆ. ಈ ಸುದೀರ್ಘ ಪಯಣದಲ್ಲಿ ವಿವಿಧ ಕ್ಷೇತ್ರಗಳಿಂದ ಹಲವಾರು ಪ್ರತಿಭೆಗಳನ್ನು ಜಿಲ್ಲೆ, ರಾಜ್ಯ, ರಾಷ್ಟ್ರಕ್ಕೆ ಕೊಡುಗೆಯಾಗಿ ನೀಡಿರುವ ಸಾಂಸ್ಕøತಿಕ ನಗರಿ ಗೋಕಾಕ ಇದೀಗ ಮತ್ತೊಂದು ಮೈಲುಗಲ್ಲಿಗೆ ಸಾಕ್ಷಿಯಾಗುತ್ತಿದೆ. ಇದೇ ದಿ.18ರಿಂದ 20ರವರೆಗೆ ಮೂರು ದಿನಗಳ ಕಾಲ ಕರದಂಟಿನ ನಾಡಿನಲ್ಲಿ ಸಾಂಸ್ಕøತಿಕ ಬಾಹುಬಲಿ ದರ್ಬಾರ ನಡೆಯಲಿದೆ. ಇದಕ್ಕಾಗಿ ಬಾಹುಬಲಿ ಚಲನಚಿತ್ರದ ಮಾಹಿಷ್ಮತಿ ಸಾಮ್ರಾಜ್ಯ ಹೋಲುವ ಭವ್ಯ ವೇದಿಕೆ ಸಜ್ಜಾಗುತ್ತಿದೆ.
ಹೌದು ದಿನಾಂಕ 18 ರಿಂದ 3 ದಿನಗಳ ಕಾಲ ಸತೀಶ ಜಾರಕಿಹೊಳಿ ಫೌಂಡೇಶನ ಅಡಿಯಲ್ಲಿ ನಡೆಯುವ 18ನೇ ಸತೀಶ ಶುಗರ್ಸ್ ಅವಾಡ್ರ್ಸ್ ಸಾಂಸ್ಕøತಿಕ ಹಬ್ಬಕ್ಕೆ ಬಾಹುಬಲಿ ಚಲನಚಿತ್ರದ ಮಾಹಿಷ್ಮತಿ ಸಾಮ್ರಾಜ್ಯ ಮಾದರಿಯ ಬಹು ದೊಡ್ಡ ವೇದಿಕೆ ನಿರ್ಮಾಣವಾಗಿದೆ. ಈ ಭವ್ಯ ಅಲಂಕೃತಿಕ ಐತಿಹಾಸಿಕ ವೇದಿಕೆಯಲ್ಲಿ ಪ್ರತಿ ದಿನ ಸಾಯಂಕಾಲ 5 ರಿಂದ 10 ರವರೆಗೆ ತಾಲೂಕಿನ ಪ್ರತಿಭಾನ್ವಿತ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಜಾನಪದ ನೃತ್ಯ, ಜಾನಪದ ಗಾಯನ, ಭಾವಗೀತೆ, ಗಾಯನ, ಸಮೂಹ ನೃತ್ಯ, ಸೋಲೋ ಡ್ಯಾನ್ಸ್, ಸಾಧಕರಿಗೆ ಸನ್ಮಾನ ಸೇರಿದಂತೆ ಇನ್ನೀತರ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ನಡೆಸಿಕೊಡಲು ಎಲ್ಲಾ ತಯಾರಿಗಳನ್ನು ಮಾಡಿಕೊಂಡಿದ್ದಾರೆ. 3 ದಿನಗಳ ಕಾಲ ನಡೆಯುವ ಸತೀಶ ಶುಗರ್ಸ್ ಅವಾಡ್ರ್ಸ್ ಸಾಂಸ್ಕøತಿಕ ಹಬ್ಬದಲ್ಲಿ ಒಟ್ಟು 1600 ವಿದ್ಯಾರ್ಥಿ, ವಿದ್ಯಾರ್ಥಿನಿಯರು “ಬಾಹುಬಲಿ ಚಲನಚಿತ್ರದ ಮಾಹಿಷ್ಮತಿ ಸಾಮ್ರಾಜ್ಯ” ಮಾದರಿಯ ಐತಿಹಾಸಿಕ ವೇದಿಕೆಯಲ್ಲಿ ತಮ್ಮ ಪ್ರತಿಭೆಗಳನ್ನು ತೋರ್ಪಡಿಸಲಿದ್ದಾರೆ. ಸತೀಶ ಶುಗರ್ಸ್ ಅವಾಡ್ರ್ಸ್ನ ಮುಖ್ಯ ಸಂಘಟಕ ಎಸ್.ಎ.ರಾಮಗಾನಟ್ಟಿ, ರಿಯಾಜ ಚೌಗಲಾ ಅವರ ಮಾರ್ಗದರ್ಶನದಲ್ಲಿ ಸ್ಥಳೀಯ ಚಿತ್ರಕಲಾವಿದ ಮಹಾನಿಂಗ ಹೊಸಕೋಟಿ, ಫೆಬ್ರಿಕೇಶನ್ ಕಯೂಮ ಚೌಗಲಾ ಸೇರಿದಂತೆ 10 ಜನರ ನುರಿತ ತಂಡ ವೇಸ್ಟ್ ಬ್ಯಾನರ್ ಮತ್ತು ಕಬ್ಬಿನದ ತುಣುಕುಗಳನ್ನು ಬಳಸಿ ವೇದಿಕೆ ನಿರ್ಮಾಣ ಕಾರ್ಯದಲ್ಲಿ ತೊಡಗಿಕೊಂಡಿದೆ.
ಕಳೆದ 18 ವರ್ಷಗಳಿಂದ ಹಲವು ಬಗೆಗಳ ವೇದಿಕೆ ನಿರ್ಮಿಸಿದ ಈ ತಂಡ ಈ ಸಾರಿ ಗೋಕಾಕ ನಗರದ ವಾಲ್ಮೀಕಿ ಕ್ರೀಡಾಂಗಣದಲ್ಲಿ ಬಾಹುಬಲಿ ಚಲನಚಿತ್ರದ ಮಾಹಿಷ್ಮತಿ ಸಾಮ್ರಾಜ್ಯ ನಿರ್ಮಿಸಿ ಹೊಸ ಇತಿಹಾಸಕ್ಕೆ ಮುಂದಾಗಿರುವುದು ಗೋಕಾಕ ನಗರದ ಕಲಾಸಕ್ತರನ್ನು ಕೈ ಮಾಡಿ ಕರೆಯುತ್ತಿದೆ.