ಗೋಕಾಕ:18ನೇ ಸತೀಶ ಶುಗರ್ಸ್ ಅವಾಡ್ರ್ಸ ಪ್ರಾಥಮಿಕ ಶಾಲಾ ವಿಭಾಗದ ಭಾಷಣ ಸ್ಪರ್ಧೆಯಲ್ಲಿ ಲಕ್ಷ್ಮೀ ಮಂಗಿ ಪ್ರಥಮ
18ನೇ ಸತೀಶ ಶುಗರ್ಸ್ ಅವಾಡ್ರ್ಸ ಪ್ರಾಥಮಿಕ ಶಾಲಾ ವಿಭಾಗದ ಭಾಷಣ ಸ್ಪರ್ಧೆಯಲ್ಲಿ ಲಕ್ಷ್ಮೀ ಮಂಗಿ ಪ್ರಥಮ
ಗೋಕಾಕ ಜ 19 : ನಗರದ ವಾಲ್ಮೀಕಿ ಕ್ರೀಡಾಂಗಣದಲ್ಲಿ ಹಾಕಿದ ಭವ್ಯ ರಂಗ ಸಜ್ಜಿಕೆಯಲ್ಲಿ 18ನೇ ಸತೀಶ ಶುಗರ್ಸ್ ಅವಾಡ್ರ್ಸ ಶುಕ್ರವಾರದಂದು ನಡೆದ ಅಂತಿಮ ಹಂತದ ಸಾಂಸ್ಕøತಿಕ ಸ್ಪರ್ಧೆಯಲ್ಲಿ ವಿಜೇತರ ಯಾದಿ,
ಪ್ರೌಢಶಾಲಾ ವಿಭಾಗ, ಜಾನಪದ ಗಾಯನ ಸ್ಪರ್ಧೆ:- ನಾಗನೂರಿನ ಚೈತನ್ಯ ಪ್ರೌಢಶಾಲೆಯ ಐಶ್ವರ್ಯಾ ತಳವಾರ(ಪ್ರಥಮ), ಘಟಪ್ರಭಾ ಸರಸ್ವತಿ ಆಂಗ್ಲ ಮಾಧ್ಯಮ ಶಾಲೆಯ ಮಹಾಲಕ್ಷೀ ದೊಡಮನಿ (ದ್ವೀತಿಯ) ಕಲ್ಲೋಳಿಯ ಪಿಜೆ ಎನ್ ಶಾಲೆಯ ಭಾರತಿ ಮಂಟೂರ (ತೃತೀಯ),
ಪ್ರೌಢ ಶಾಲಾ ವಿಭಾಗ ಸೋಲೋ ಡ್ಯಾನ್ಸ್ ಸ್ಪರ್ಧೆ: ಕಲ್ಲೋಳಿಯ ಪಿಕೆ ಎನ್ ಪ್ರೌಢಶಾಲೆಯ ಈರಪ್ಪ ಕಡಾಡಿ (ಪ್ರಥಮ), ಗೋಕಾಕ ಜಿಇಎಸ್ ಶಾಲೆಯ ಸುಮಂಗಲಾ ಪಾಟೀಲ (ದ್ವಿತೀಯ), ಕಲ್ಲೋಳಿಯ ಶ್ರೀ ಬಸವೇಶ್ವರ ಶಾಲೆಯ ಅಮೀತ ಕಲಾಲ (ತೃತೀಯ)
ಪ್ರಾಥಮಿಕ ಶಾಲಾ ವಿಭಾಗದ ಗಾಯನ ಸ್ಪರ್ಧೆ: ಕಲ್ಲೋಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸುಪ್ರೀಯಾ ಮಠಪತಿ (ಪ್ರಥಮ), ಘಟಪ್ರಭಾದ ಕೆಆರ್ ಎಚ್ ಕನ್ನಡ ಮಾಧ್ಯಮ ಶಾಲೆಯ ಕಾಳಪ್ಪ ಭಜಂತ್ರಿ (ದ್ವೀತಿಯ), ಗೋಕಾಕ ಕೆಎಲ್ ಇ ಶಾಲೆಯ ಸುಜನಾ ನದಾಫ (ತೃತೀಯ),
ಪ್ರಾಥಮಿಕ ಶಾಲಾ ವಿಭಾಗದ ಭಾಷಣ ಸ್ಪರ್ಧೆ: ಮೆಳವಂಕಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಲಕ್ಷ್ಮೀ ಮಂಗಿ (ಪ್ರಥಮ), ಗೋಕಾಕನ ನವಚೇತನ ಶಾಲೆಯ ಸಂಜನಾ ಗಾನೂರ (ದ್ವೀತಿಯ), ಗೋಕಾಕನ ಮಯೂರ ಶಾಲೆಯ ಅಶ್ವಿನಿ ಬಡಿಗೇರ (ತೃತೀಯ) ಸ್ಥಾನ ಪಡೆದಿದ್ದಾರೆ.
ಪ್ರಾಥಮಿಕ ಶಾಲಾ ವಿಭಾಗದ ಸಮೂಹ ನೃತ್ಯ ಸ್ಪರ್ಧೆ: ಕೊಳವಿಯ ಶಾರದಾ ಪ್ರಾಥಮಿಕ ಶಾಲಾ ತಂಡ (ಪ್ರಥಮ), ಘಟಪ್ರಭಾದ ಶ್ರೀ ಶಿವಾನಂದ ಶಾಲಾ ತಂಡ (ದ್ವಿತೀಯ), ಗೋಕಾಕನ ಶಪರ್ಡ್ ಮಿಷನ್ ಶಾಲಾ ತಂಡ (ತೃತೀಯ) ಸ್ಥಾನ ಪಡೆದಿದ್ದಾರೆ.
ಜಾನಪದ ಗಾಯನ, ಸೋಲೋ ಡ್ಯಾನ್ಸ, ಭಾಷಣ, ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಹತ್ತು ಸಾವಿರ ರೂಗಳು ದ್ವೀತಿಯ ಸ್ಥಾನ ಏಳು ಸಾವಿರ, ತೃತೀಯ ಐದು ಸಾವಿರ ರೂಗಳು, ಹಾಗೂ ಸಮೂಹ ನೃತ್ಯದಲ್ಲಿ ಪ್ರಥಮ ಮೂವತ್ತು ಸಾವಿರ, ದ್ವೀತಿಯ ಇಪ್ಪತ್ತು ಸಾವಿರ, ತೃತೀಯ ಸ್ಥಾನ ಹದಿನೈದು ಸಾವಿರ ರೂಗಳ ನಗದು ಹಾಗೂ ಟ್ರೋಫಿಗಳನ್ನು ನೀಡಲಾಯಿತು.
ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಜಿ.ಪಂ ಸದಸ್ಯರುಗಳಾದ ಟಿ.ಆರ್.ಕಾಗಲ, ಮಡ್ಡೆಪ್ಪ ತೋಳಿನವರ, ನಿವೃತ್ತ ಕೃಷಿ ಅಧಿಕಾರಿ ವೈ.ಬಿ.ಪಾಟೀಲ, ಚಿಕ್ಕೋಡಿ ಡಯಟ್ ಪ್ರಾಚಾರ್ಯ ಗಜಾನನ ಮನ್ನಿಕೇರಿ, ಮೂಡಲಗಿ ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ, ಚಿಕ್ಕೋಡಿಯ ಅಕ್ಷರದಾಸೋಹ ಶಿಕ್ಷಣಾಧಿಕಾರಿ ಡಿ.ಎಸ್.ಕುಲಕರ್ಣಿ, ವಲಯ ಅರಣ್ಯಾಧಿಕಾರಿ ಕೆ.ಎನ್.ವಣ್ಣೂರ, ಸಿಪಿಐಗಳಾದ ವಿರೇಶ ದೊಡಮನಿ, ಸುಂದ್ರೇಶ ಹೊಳೆನ್ನವರ, ಶ್ರೀಧರ ಸತಾರೆ, ಡಾ: ಬಿ.ಬಿ.ಘೋಡಗೇರಿ, ನ್ಯಾಯವಾದಿಗಳ ಸಂಘದ ಅಧ್ಯಕ್ಷ ಉದಯಕುಮಾರ ಸಿಂಪಿ, ಶಿವಾನಂದ ಪಾಟೀಲ, ಎ.ಬಿ.ಮಲಬನ್ನವರ ಸೇರಿದಂತೆ ಇತರ ಗಣ್ಯರು ಉಪಸ್ಥಿತರಿದ್ದು ವಿಜೇತರಿಗೆ ಬಹುಮಾನ ವಿತರಿಸಿದರು. ಕಾರ್ಯಕ್ರಮವನ್ನು ಎ.ಜಿ.ಕೋಳಿ ಸ್ವಾಗತಿಸಿದರು. ಆರ್.ಎಲ್.ಮಿರ್ಜಿ ನಿರೂಪಿಸಿದರು.ಟಿ.ಬಿ.ಬಿಲ್ ವಂದಿಸಿದರು.