RNI NO. KARKAN/2006/27779|Saturday, October 19, 2024
You are here: Home » ಬೆಳಗಾವಿ ಗ್ರಾಮೀಣ » ಬಸವ ಜಯಂತಿ ಅಂಗವಾಗಿ ಮೇ 1 ರಂದು ಬೃಹತ ಶೋಭಾಯಾತ್ರೆ : ನೀಲಕಂಠ ಕಪ್ಪಲಗುದ್ದಿ ಮಾಹಿತಿ

ಬಸವ ಜಯಂತಿ ಅಂಗವಾಗಿ ಮೇ 1 ರಂದು ಬೃಹತ ಶೋಭಾಯಾತ್ರೆ : ನೀಲಕಂಠ ಕಪ್ಪಲಗುದ್ದಿ ಮಾಹಿತಿ 

ಬಸವ ಜಯಂತಿ ಅಂಗವಾಗಿ ಮೇ 1 ರಂದು ಬೃಹತ ಶೋಭಾಯಾತ್ರೆ : ನೀಲಕಂಠ ಕಪ್ಪಲಗುದ್ದಿ  ಮಾಹಿತಿ

ಗೋಕಾಕ ::   ವಿಶ್ವಗುರು ಬಸವಣ್ಣ ನವರ 884 ನೇ  ಜಯಂತಿ ಅಂಗವಾಗಿ   ಮೇ 1 ರಂದು ನಗರದಲ್ಲಿ ಶೂನ್ಯ ಸಂಪಾದನಾ ಮಠ  ಗೋಕಾಕ ಮತ್ತು ವೀರಶೈವ ಲಿಂಗಾಯತ ಯುವ ವೇದಿಕೆ ಸಂಯುಕ್ತಾಶ್ರಯದಲ್ಲಿ  ತಾಲೂಕಾ ಮಟ್ಟದ ಬಸವ ಜಯಂತಿ ಉತ್ಸವ ಹಾಗೂ  ಬೃಹತ ಶೋಭಾಯಾತ್ರೆ ಹಮ್ಮೀಕೊಳ್ಳಲಾಗಿದೆ ಎಂದು ಉತ್ಸವ ಸಮಿತಿ ಅಧ್ಯಕ್ಷ ನೀಲಕಂಠ ಕಪ್ಪಲಗುದ್ದಿ ಹೇಳಿದರು.

ಇಲ್ಲಿಯ ಶೂನ್ಯ ಸಂಪಾದನಾ ಮಠದಲ್ಲಿ ಕರೆದ್ದಿದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ
ಅವರು ಮಾತನಾಡಿದರು‌.

ಕಳೆದ ಹಲವಾರು ವರ್ಷಗಳಿಂದ ದೇಶದಲ್ಲಿ ನೆಲೆಕಂಡಿರುವ ಹಲವು ಸಮುದಾಯದ ಜನ ತಮ್ಮ ತಮ್ಮ ಸಮುದಾಯಗಳ ಪ್ರವಾದಿಗಳ ಜಯಂತಿಗಳನ್ನು ಆಚರಿಸಿ ಅವರನ್ನು ಆಯಾ ಜನಾಂಗಕ್ಕೆ ಸೀಮಿತಗೋಳಿಸಿದ್ದಾರೆ. ಅದನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಶೂನ್ಯ ಸಂಪಾದನ ಮಠದ ಶ್ರೀಗಳ ನೇತೃತ್ವದಲ್ಲಿ ಬಸವ ಜಯಂತಿ ಉತ್ಸವವನ್ನು ಭಾವೈಕತೆ  ಸಾರುವ ದೀಶೆಯಲ್ಲಿ ಆಚರಿಸಲು ನಿರ್ಧರಿಸಲಾಗಿದೆ.

ಅಂದು ಮಧ್ಯಾಹ್ನ 3:30 ಕ್ಕೆ ನಗರದ ಕೋಳವಿ  ಹನುಮಂತ ದೇವರ ಗುಡಿಯಿಂದ ಪ್ರಾರಂಭವಾಗುವ  ಬೃಹತ ಶೋಭಾಯಾತ್ರೆಗೆ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು ಚಾಲನೆ ನೀಡುವರು. ಉತ್ಸವದ ಅಧ್ಯಕ್ಷತೆಯನ್ನು ಅರಬಾಂವಿ ಶಾಸಕ ಬಾಲಚಂದ್ರ ಜಾರಕಿಹೊಳಿ ವಹಿಸುವರು .ಶೋಭಾ ಯಾತ್ರೆಯು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಬಸವೇಶ್ವರ ವೃತ್ತದಲ್ಲಿ ಸಮಾರೋಪ ಗೊಳ್ಳಲಿದೆ.

ಮೆರವಣಿಗೆಯಲ್ಲಿ ಕಲಾ ತಂಡಗಳು , ರೂಪಕಗಳು ಸೇರಿದಂತೆ ಎಲ್ಲ ಧರ್ಮಿಯರ ಸುಮಾರು 38 ಸಂತರ  (ಮಹಾನ ಷುರುಷರ) ಭಾವ ಚಿತ್ರಗಳನ್ನು ಶೋಭಾಯಾತ್ರೆಯ ಉದ್ದಕ್ಕೂ ಪ್ರರ್ದಶಿಸಿಸುವ ಮುಖೇನ ಅವರಿಗೆ ಗೌರವ ಸಲ್ಲಿಸಲಾಗುವುದು.

ಸುಮಾರು 100 ಕ್ಕೂ ಹೆಚ್ಚು ಜನ ಸುಮಂಗಲೆಯರು  ಬಸವಣ್ಣನವರ ವಚನಗಳ ನಿಘಂಟುಗಳನ್ನು ಹೊತ್ತು ಮೆರವಣಿಗೆಯಲ್ಲಿ ಪಾಲಗೋಳ್ಳುವರು.  ತಾಲೂಕಿನ ಎಲ್ಲ ಸಮಾಜ ಬಾಂಧವರು ಈ ಶೋಭಾಯಾತ್ರೆಯಲ್ಲಿ ಭಾಗವಹಿಸಬೇಕೆಂದು ನೀಲಕಂಠ ಕಪ್ಪಲಗುದ್ದಿ ಮನವಿ ಮಾಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಕರವೇ ತಾಲೂಕಾಧ್ಯಕ್ಷ ಬಸವರಾಜ ಖಾನಪ್ಪನವರ, ವಿವೇಕ ಜತ್ತಿ, ಅಡಿವೇಶ ಗವಿಮಠ , ವೀರಶೈವ ಲಿಂಗಾಯತ  ಯುವ ವೇದಿಕೆ ತಾಲೂಕಾಧ್ಯಕ್ಷ ಮಹಾದೇವ ಜಾಗನೂರ ಉಪಸ್ಥಿತರಿದ್ದರು

Related posts: