ಗೋಕಾಕ:ಎಸಿಬಿ ಬಲೆಗೆ ಬಿದ್ದ ಭೂ ಸುಧಾರಣಾ ವಿಭಾಗದ ಗ್ರಾಮ ಸಹಾಯಕ
ಎಸಿಬಿ ಬಲೆಗೆ ಬಿದ್ದ ಭೂ ಸುಧಾರಣಾ ವಿಭಾಗದ ಗ್ರಾಮ ಸಹಾಯಕ
ಗೋಕಾಕ ಜ 19 : ಗೋಕಾಕ ತಹಸಿಲ್ದಾರ್ ಕಚೇರಿಯಲ್ಲಿ ಲಂಚ ಸ್ವೀಕರಿಸುತ್ತಿದ್ದ ಅಧಿಕಾರಿಯೋಬ್ಬರು ಎಸಿಬಿ ಅಧಿಕಾರಿಗಳ ಬಲೆಗೆ ಸಿಕ್ಕಿಬಿದ್ದ ಘಟನೆ ಇಂದು ಸಂಭವಿಸಿದೆ
ರವೀಂದ್ರ ಬಾಳಪ್ಪ ಮಾದರ್ ಎಸಿಬಿ ಬಲೆಗೆ ಬಿದ್ದ ಅಧಿಕಾರಿಯಾಗಿದ್ದು , ರೈತಾವು ಮಾಡಲು ಹಣ ಪಡೆಯುತ್ತಿದ್ದಾಗ ಎಸಿಬಿ ಬಲೆಗೆ ಬಿದಿದ್ದಾರೆ ಎಂದು ತಿಳಿದು ಬಂದಿದೆ . ಪ್ರಹ್ಲಾದ ಕೃಷ್ಣಾಜಿ ಮುತಾಲಿಕ ದೇಸಾಯಿ ಎಂಬುವವರಿಂದ 15 ಸಾವಿರ ಹಣ ಪಡೆವಾಗ ಎಸಿಬಿ ಅಧಿಕಾರಿಗಳಿಗೆ ಸಿಕ್ಕಿಬಿದಿದ್ದಾರೆ
ಕಳ್ಳಿಗುದ್ದಿ ಗ್ರಾಮದಲ್ಲಿ 8 ಎಕರೆ ಜಮೀನು ರೈತಾವು ಮಾಡಿಕೊಡಲು ಹಣ ಬೇಡಿಕೆಯನ್ನು ಅಧಿಕಾರಿ ರವೀಂದ್ರ ಬಾಳಪ್ಪ ಮಾದರ ಇಟ್ಟಿದ್ದ ಎನ್ನಲಾಗಿದೆ