ಗೋಕಾಕ:ಕೌಜಲಗಿ ಗ್ರಾಮಾಭಿವೃದ್ಧಿಯಲ್ಲಿ ಶಾಸಕರ ಪಾತ್ರ ಅನನ್ಯವಾಗಿದೆ : ಡಾ.ರಾಜೇಂದ್ರ ಸಣ್ಣಕ್ಕಿ
ಕೌಜಲಗಿ ಗ್ರಾಮಾಭಿವೃದ್ಧಿಯಲ್ಲಿ ಶಾಸಕರ ಪಾತ್ರ ಅನನ್ಯವಾಗಿದೆ : ಡಾ.ರಾಜೇಂದ್ರ ಸಣ್ಣಕ್ಕಿ
ಗೋಕಾಕ ಜ 19 : ವಿವಿಧ ಯೋಜನೆಯಡಿ ಮಂಜೂರಾದ 78.60 ಲಕ್ಷ ರೂ.ಗಳ ಅಭಿವೃದ್ಧಿ ಕಾಮಗಾರಿಗಳಿಗೆ ಶುಕ್ರವಾರದಂದು ಗಣ್ಯರು ಗುದ್ದಲಿ ಪೂಜೆ ನೆರವೇರಿಸಿದರು.
ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಧಾರವಾಡ ಕೃಷಿ ವಿವಿಯ ವ್ಯವಸ್ಥಾಪನ ಮಂಡಳಿ ಸದಸ್ಯ ಡಾ.ರಾಜೇಂದ್ರ ಸಣ್ಣಕ್ಕಿ, ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಪ್ರಯತ್ನದಿಂದ ಅಭಿವೃದ್ಧಿ ಕಾಮಗಾರಿಗಳನ್ನು ನೆರವೇರಿಸಲಾಗುತ್ತಿದೆ. ಕೌಜಲಗಿ ಗ್ರಾಮಾಭಿವೃದ್ಧಿಯಲ್ಲಿ ಶಾಸಕರ ಪಾತ್ರ ಅನನ್ಯವಾಗಿದೆ ಎಂದು ಹೇಳಿದರು.
ಪ್ರಭಾಶುಗರ ನಿರ್ದೇಶಕ ಮಹಾದೇವಪ್ಪ ಭೋವಿ, ಪಿಎಲ್‍ಡಿ ಬ್ಯಾಂಕ್ ನಿರ್ದೇಶಕ ಅಶೋಕ ಉದ್ದಪ್ಪನವರ, ತಾಪಂ ಸದಸ್ಯ ಶಾಂತಪ್ಪ ಹಿರೇಮೇತ್ರಿ, ಗ್ರಾಪಂ ಅಧ್ಯಕ್ಷ ನೀಲಪ್ಪ ಕೇವಟಿ, ಅಡಿವೆಪ್ಪ ದಳವಾಯಿ, ರವಿ ಪರುಶೆಟ್ಟಿ, ಮಹಾದೇವ ಬುದ್ನಿ, ರಾಯಪ್ಪ ಬಳೋಲದಾರ, ಯಲ್ಲಪ್ಪ ದಾನನ್ನವರ, ಶಂಕರ ಜೋತಿನವರ, ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
13.50 ಲಕ್ಷ ರೂ. ವೆಚ್ಚದ ಎಸ್‍ಸಿಪಿ ಯೋಜನೆಯಡಿ ಜನತಾ ಪ್ಲಾಟ್ ರಸ್ತೆ, 45 ಲಕ್ಷ ರೂ. ವೆಚ್ಚದ ಸರ್ಕಾರಿ ಪ್ರೌಢ ಶಾಲೆಯ ಹೆಚ್ಚುವರಿ ಕೊಠಡಿ, 20.80 ಲಕ್ಷ ರೂ. ವೆಚ್ಚದ ಸರ್ಕಾರಿ ಹೆಣ್ಣು ಮಕ್ಕಳ ಶಾಲೆಯ ಶಾಲಾ ಕೊಠಡಿ, 19.30 ಲಕ್ಷ ರೂ. ವೆಚ್ಚದ ಸರ್ಕಾರಿ ಉರ್ದು ಶಾಲೆಯ ಶಾಲಾ ಕೊಠಡಿಗೆ ಸಣ್ಣಕ್ಕಿ ಅವರು ಗುದ್ದಲಿ ಪೂಜೆ ನೆರವೇರಿಸಿದರು.